ರಾಜ್ಯ

ದೀಪಾವಳಿ ಸಂಭ್ರಮದ ನಡುವೆಯೇ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ: ಜನತೆಯಲ್ಲಿ ತಲ್ಲಣ

Manjula VN

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ಭೂಕಂಪನದ) ಅನುಭವವಾಗಿದೆ, ಇದರ ಪರಿಣಾಮ ಜನರು ಭಯಭೀತರಾಗಿ ಮನೆಯಿಂದ ಓಡಿ ಬಂದಿದ್ದಾರೆ.

ಇಂದುಬೆಳಗ್ಗೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಲಘಾಣ ಹಾಗೂ ಮಸೂತಿ ಗ್ರಾಮಗಳಲ್ಲಿ ಸರಣಿ ರೂಪದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿದು ಬಂದಿದೆ.

ಎರಡು ದಿನದಲ್ಲಿ 7 ಬಾರಿ ಭೂಕಂಪನವಾಗಿದೆ. ಇದರಿಂದ ಮಲಘಾಣ ಭಾಗದ ಜನರಿಗೆ ಭೂಕಂಪನ ಕಂಟಕವಾಗಿ ಪರಿಗಣಿಸಿದೆ. ಈ ಭಾಗದಲ್ಲಿ ಪದೇ, ಪದೇ ಭೂಕಂಪ ಸಂಭವಿಸುತ್ತಿರುವುದು ಜನತೆಯಲ್ಲಿ ಒಂದು ರೀತಿ ಭಯ, ತಲ್ಲಣ ಮೂಡಿಸಿದೆ.

ಕಳೆದ ತಿಂಗಳು ಅ. 20ರಂದು ಮಸೂತಿ-ಮಲಘಾಣ ಗ್ರಾಮಕ್ಕೆ‌ ಹೈದರಾಬಾದ್‌ನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ಪರಿಣಿತ ಭೂವಿಜ್ಞಾನಿಗಳ ತಂಡ ಭೇಟಿ ನೀಡಿದ್ದರು.

ಭೂಮಿಯ ಆಳದಲ್ಲಿ ನಡೆಯುವ ಬದಲಾವಣೆ, ಚಲನವಲನಗಳ ಮೇಲೆ ನಿಗಾ ಇಡಲು ತಾತ್ಕಾಲಿಕ ಸಿಸ್ಮೋಮಿಟರ್‌ಅನ್ನು ಅಳಡಿಸಲಾಗಿತ್ತು. ಈ ವಿಶೇಷ ಯಂತ್ರ ಪ್ರತಿ ಕಂಪನಗಳ ಮಾಹಿತಿಯನ್ನ ಸಂಗ್ರಹಿಸಿ ಹೈದರಾಬಾದ್ ಕೇಂದ್ರಕ್ಕೆ ರವಾನಿಸಲಿದೆ ಎಂದು ತಿಳಿದು ಬಂದಿದೆ.

SCROLL FOR NEXT