ರಾಜ್ಯ

ಬಿಬಿಎಂಪಿ ಚುನಾವಣೆ: ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟ

Nagaraja AB

ಬೆಂಗಳೂರು: ಬಿಬಿಎಂಪಿ ಚುನಾವಣೆಯ ಅಂತಿಮ ದಿನಾಂಕ ಇನ್ನೂ ಘೋಷಣೆಯಾಗಬೇಕಿರುವಂತೆಯೇ, ನವೆಂಬರ್ 8ರ ಸೋಮವಾರದಂದು ಕರಡು ಮತದಾರರ ಪಟ್ಟಿ ಪ್ರಕಟಿಸುವುದಾಗಿ ಪಾಲಿಕೆ ಶನಿವಾರ ತಿಳಿಸಿದೆ. 

ಮತದಾರರ ಸಹಾಯವಾಣಿ ಮೊಬೈಲ್ ಆ್ಯಪ್ ಅಥವಾ ಆನ್ ಲೈನ್ ಪೋರ್ಟಲ್ ನಲ್ಲಿ ಮತದಾರರು ತಮ್ಮ ಹೆಸರನ್ನು ಪರಿಶೀಲಿಸಬಹುದು. ಅಗತ್ಯವಾದರೆ ಏನಾದರೂ ಬದಲಾವಣೆ ಅಥವಾ ಹೆಚ್ಚುವರಿ ಮಾಹಿತಿ ಸೇರಿಸಬಹುದು.

 ಕರಡು ಮತದಾರರ ಪಟ್ಟಿಯಲ್ಲಿ ಹೆಸರು, ಲಿಂಗ, ತಂದೆಯ ಹೆಸರು, ವಿಳಾಸ ಮತ್ತಿತರ ಮಾಹಿತಿಯಲ್ಲಿ ಏನಾದರೂ ತಪ್ಪಿದ್ದಲ್ಲಿ ಅಥವಾ ಬದಲಾವಣೆ ಮಾಡಬೇಕಿದ್ದಲ್ಲಿ ಫಾರಂ 8ನ್ನು ಸಲ್ಲಿಸಬೇಕಾದ ಅಗತ್ಯವಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತು ವಿಶೇಷ ಆಯುಕ್ತ (ಆಡಳಿತ) ಪಿ. ದಯಾನಂದ್ ಹೇಳಿದ್ದಾರೆ.

ಇಂದಿನಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾರರ ನೋಂದಣಿ ಕಚೇರಿ, ವಾರ್ಡ್ ಹೆಲ್ಪ್ ಸೆಂಟರ್ ಮತ್ತು ಮತಗಟ್ಟೆಗಳಲ್ಲಿ ಬಿಬಿಎಂಪಿ ವಿಶೇಷ ಮತದಾರರ ನೋಂದಣಿ ಅಭಿಯಾನವನ್ನು ಆರಂಭಿಸಿದೆ.  

ಮತದಾರರ ಹೆಸರನ್ನು ಪರಿಶೀಲಿಸಬೇಕಾದ್ದಲ್ಲಿ ವೆಬ್ ಸೈಟ್ : Online portal: www.nvsp.in, www.nvsp.in. www.voterportal.eci.gov.in ಸಹಾಯವಾಣಿ: 1950, ಮೊಬೈಲ್ ಆ್ಯಪ್- Voter Helpline App ಸಂಪರ್ಕಿಸಬಹುದು.

SCROLL FOR NEXT