ಸಾಂದರ್ಭಿಕ ಚಿತ್ರ 
ರಾಜ್ಯ

ಕೊಡವ ಮದುವೆಗಳಿಗೆ ಹಲವು ನಿರ್ಬಂಧಗಳನ್ನು ವಿಧಿಸಿದ ವಿರಾಜಪೇಟೆ ಕೊಡವ ಸಮಾಜ

ಕೊಡವ ವಿವಾಹ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಬಳಸುವುದು ಸಾಂಪ್ರದಾಯಿಕವಲ್ಲದ ಆಚರಣೆಗಳು ಎಂದಿರುವ ವಿರಾಜಪೇಟೆಯ ಕೊಡವ ಸಮಾಜ ಅವುಗಳನ್ನು ನಿಷೇಧಿಸಿದೆ.

ಮಡಿಕೇರಿ: ಕೊಡವ ವಿವಾಹ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಬಳಸುವುದು ಸಾಂಪ್ರದಾಯಿಕವಲ್ಲದ ಆಚರಣೆಗಳು ಎಂದಿರುವ ವಿರಾಜಪೇಟೆಯ ಕೊಡವ ಸಮಾಜ ಅವುಗಳನ್ನು ನಿಷೇಧಿಸಿದೆ.

ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಬಳಸುವುದು ಮದುವೆಯ ಸಮಯದಲ್ಲಿ ಆಚರಿಸುವ ಮೂಲ ಆಚರಣೆ ಮತ್ತು ಸಂಪ್ರದಾಯಗಳಲ್ಲ ಎಂದಿರುವ ಸಂಸ್ಥೆಯು, ಸಮಾರಂಭದಲ್ಲಿ ವಧು ಮತ್ತು ವರನಿಗೆ ಹಲವಾರು ಇತರ ನಿರ್ಬಂಧಗಳನ್ನು ವಿಧಿಸಿದೆ.

ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಅಧ್ಯಕ್ಷತೆಯಲ್ಲಿ ನಡೆದ 99ನೇ ಮಹಾಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಬಂಧಗಳನ್ನು ವಿಧಿಸಲಾಗಿದೆ.

ಕೊಡವ ಮದುಮಗನು ಮದುವೆಯ ಸಂದರ್ಭದಲ್ಲಿ ಗಡ್ಡ ಇರಬಾರದು ಎಂಬ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದು ಕೊಡವ ಸಂಸ್ಕೃತಿಗೆ ವಿರುದ್ಧವಾಗಿದೆ. ವರನು ತನ್ನ ಮದುವೆ ಸಮಾರಂಭದಲ್ಲಿ ಕ್ಲೀನ್ ಶೇವ್ ಲುಕ್‌ನಲ್ಲಿ ಮಾತ್ರ ಭಾಗವಹಿಸಬೇಕೆಂದು ಕಡ್ಡಾಯಗೊಳಿಸಲಾಗಿದೆ. ಇದಲ್ಲದೆ, ಮದುವೆಗೆ ಹಾಜರಾಗಿ ದಂಪತಿಗಳನ್ನು ಆಶೀರ್ವದಿಸುವ ಮಹಿಳೆಯರು ತಮ್ಮ ಕೂದಲನ್ನು ಓಪನ್ ಬಿಡಲು ಅವಕಾಶ ಇಲ್ಲ ಮತ್ತು ಕೂದಲನ್ನು ಪ್ಲೇಟ್ ಮಾಡಲು ಕಡ್ಡಾಯಗೊಳಿಸಲಾಗಿದೆ ಮತ್ತು ಚಿಕ್ಕ ಕೂದಲಿನ ಸಂದರ್ಭದಲ್ಲಿ ಅವರು ತಲೆಗೆ ಬಟ್ಟೆಯನ್ನು ಸುತ್ತಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

"ಕೊಡವ ಸಂಪ್ರದಾಯದ ಅಂತ್ಯ ಸಂಸ್ಕಾರದ ವೇಳೆ ಮಾತ್ರ ಮಹಿಳೆಯರು ಕೂದಲು ಓಪನ್ ಬಿಡುತ್ತಾರೆ ಎಂಬ ಕಾರಣದಿಂದ ಈ ನಿರ್ಧಾರವನ್ನು ಕಡ್ಡಾಯಗೊಳಿಸಲಾಗಿದೆ" ಎಂದು ಸದಸ್ಯರು ವಿವರಿಸಿದ್ದಾರೆ.

ಗಂಗಾಪೂಜೆಯ ವೇಳೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಮತ್ತು ಸಾಂಪ್ರದಾಯಿಕ ಡೋಲು ‘ದೇವತ್’ ಬಳಸಿ ‘ವಾಲಗ’ದ ಸಾಂಪ್ರದಾಯಿಕ ಸಂಗೀತವನ್ನು ನುಡಿಸುವುದನ್ನು ನಿಷೇಧಿಸಲಾಗಿದೆ. ಇದಲ್ಲದೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮಾರಂಭಕ್ಕೆ ರಾತ್ರಿ 10 ಗಂಟೆಗೆ ಗಡುವು ನಿಗದಿಪಡಿಸಲಾಗಿದೆ. ಅಲ್ಲದೆ, ಯಾವುದೇ ಕೊಡವ ಹುಡುಗಿ ಬೇರೆ ಸಮುದಾಯದ ವರನನ್ನು ಮದುವೆಯಾದರೆ, ವರನಿಗೆ ಕೊಡವ ಸಾಂಪ್ರದಾಯಿಕ 'ಕುಪ್ಯಾಚಾಲೆ' ಮತ್ತು ಸಾಂಪ್ರದಾಯಿಕ 'ಪಥಕ್' ಆಭರಣ ಧರಿಸುವುದನ್ನು ನಿಷೇಧಿಸಲಾಗಿದೆ. 

ಈ ಹಿಂದೆ, ಪೊನ್ನಂಪೇಟೆ ಕೊಡವ ಸಮಾಜವು ಮದುವೆಗಳ ಮೇಲೆ ಇದೇ ರೀತಿಯ ನಿರ್ಬಂಧಗಳನ್ನು ಹಾಕಿತ್ತು, ಈ ನಿರ್ಧಾರಗಳು ಕೊಡವ ಆಚರಣೆ ಮತ್ತು ಸಂಪ್ರದಾಯವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT