ರಾಜ್ಯ

ಪ್ರಶಸ್ತಿ ನೀಡಲು ತಳಮಟ್ಟದ ಸಾಧಕರನ್ನು ಹುಡುಕುವ ಕೇಂದ್ರದ ಕ್ರಮ ಶ್ಲಾಘನೀಯ: ಪ್ರಧಾನಿ ಮೋದಿಯನ್ನು ಹೊಗಳಿದ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್

Sumana Upadhyaya

ಉಡುಪಿ: ಕೇಂದ್ರ ಸರ್ಕಾರ ದೇಶದ ಅಪರೂಪದ ಸಾಧಕರನ್ನು ತಳಮಟ್ಟದಿಂದ ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಪ್ರಶಂಸನೀಯ ಎಂದು ಮಾಜಿ ಕ್ರೀಡಾ ಸಚಿವ, ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಪ್ರಧಾನಿಯವರನ್ನು ಹಾಡಿ ಹೊಗಳಿದ್ದಾರೆ.

ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ಅವರ ಉತ್ತರಾಧಿಕಾರಿ ಕಿರಿಯ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಸ್ವೀಕರಿಸಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ಉಡುಪಿಯ ರಥಬೀದಿಯಲ್ಲಿ ಹಮ್ಮಿಕೊಂಡಿದ್ದ ಪದ್ಮವಿಭೂಷಣ ಪ್ರಶಸ್ತಿ ಸ್ವಾಗತ ಸಮಾರಂಭದಲ್ಲಿ ಮಾತಾಡಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಪದ್ಮಭೂಷಣ, ಪದ್ಮ ವಿಭೂಷಣ, ಪದ್ಮಶ್ರೀ ಪ್ರಶಸ್ತಿಗಳು ನಿಜವಾದ ಸಾಧಕರನ್ನು ಹುಡುಕಿಕೊಂಡು ಹೋಗುತ್ತಿದೆ. ಈ ಹಿಂದೆ ಅರ್ಜಿ ಹಾಕಿದವರಿಗೆಲ್ಲಾ ಪ್ರಶಸ್ತಿ ಕೊಡುತ್ತಿದ್ದರು, ಮೋದಿ ಸರ್ಕಾರದಲ್ಲಿ ಪ್ರಶಸ್ತಿಯನ್ನು ಹುಡುಕಿಕೊಂಡು ಕೊಡುತ್ತಿದ್ದಾರೆ, ನಾನು ವಿರೋಧ ಪಕ್ಷದಲ್ಲಿದ್ದರೂ ಮೋದಿ ಸರ್ಕಾರ ಮಾಡಿದ ಒಳ್ಳೆ ಕೆಲಸಗಳನ್ನು ಹೊಗಳಬೇಕು ಎಂದರು. ಉಡುಪಿ ಶ್ರೀಕೃಷ್ಣ ಸಿಕ್ಕಿದ ಸ್ಥಳ ಮಲ್ಪೆಯ ಪ್ರಜೆಯಾಗಿ ನಾನು ಈ ಸಮಾರಂಭದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು. 

SCROLL FOR NEXT