ರಾಜ್ಯ

ಬೆಂಗಳೂರಿನಲ್ಲಿ 126 ರೋಹಿಂಗ್ಯಾಗಳು ವಾಸ

Lingaraj Badiger

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಪ್ರಸ್ತುತ 126 ರೋಹಿಂಗ್ಯಾಗಳಿಗೆ 'ಮನೆ'ಯಾಗಿದೆ. ಅವರು ನಗರದ ಕಸದಿಂದ ಆಯ್ದುಕೊಳ್ಳುವ ಸ್ಕ್ರ್ಯಾಪ್‌ಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ಜೀವನೋಪಾಯವನ್ನು ಕಂಡುಕೊಳ್ಳುತ್ತಿದ್ದಾರೆ. ಅವರಲ್ಲಿ ಕೆಲವರು ಸಣ್ಣ ತಿನಿಸುಗಳ ತಯಾರಿಕೆಯಲ್ಲಿ ಕೆಲಸ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ. 

ನಗರದಲ್ಲಿರುವ ಈ ರೋಹಿಂಗ್ಯಾಗಳು ತಮ್ಮನ್ನು ತಾವು ‘ಬರ್ಮಾ ವಾಲೆ ಲಾಗ್’ (ಬರ್ಮಾ, ಈಗಿನ ಮಯನ್ಮಾರ್‌) ಎಂದು ಕರೆದುಕೊಳ್ಳುತ್ತಾರೆ. ಆದರೆ ದೇಶಕ್ಕೆ ಹಿಂತಿರುಗುವ ಆಲೋಚನೆಯಲ್ಲಿಲ್ಲ. ಅವರು ಈಶಾನ್ಯ ಬೆಂಗಳೂರಿನ ಅಮೃತಹಳ್ಳಿ ಮತ್ತು ಸಂಪಿಗೆಹಳ್ಳಿಯ ಕ್ಲಸ್ಟರ್‌ಗಳಲ್ಲಿ ವಾಸಿಸುತ್ತಿದ್ದಾರೆ. ಬಾಂಗ್ಲಾದೇಶಿ ಅಕ್ರಮ ವಲಸಿಗರು ಇವರ ನೆರೆಹೊರೆಯವರಾಗಿದ್ದಾರೆ.

ರೋಹಿಂಗ್ಯಾಗಳು ಸದಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತಲೇ ಇರುತ್ತಾರೆ. ಮೇ ತಿಂಗಳಲ್ಲಿ ನಗರದಲ್ಲಿ 178 ರೋಹಿಂಗ್ಯಾಗಳಿದ್ದರು. ಅವರಲ್ಲಿ ಕೆಲವರು ಈಗ ಬೇರೆ ನಗರಗಳಿಗೆ ತೆರಳಿದ್ದಾರೆ. ಸೆಪ್ಟೆಂಬರ್‌ನಲ್ಲಿ 78 ಇದ್ದ ರೋಹಿಂಗ್ಯಾಗಳು ಈಗ ಮತ್ತೆ 126 ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೋಹಿಂಗ್ಯಾಗಳು, ಅಥವಾ ದೋಣಿ ಜನರು ದೆಹಲಿ ಅಥವಾ ಚೆನ್ನೈನಲ್ಲಿ ನೀಡಲಾದ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಹೈ ಕಮಿಷನ್(UNHCR) ಕಾರ್ಡ್ ಅನ್ನು ಬಳಸುತ್ತಾರೆ. ರೋಹಿಂಗ್ಯಾಗಳ ಪ್ರಕರಣವು ವೀಸಾ ಷರತ್ತುಗಳನ್ನು ಉಲ್ಲಂಘಿಸಿ ವಾಸಿಸುತ್ತಿರುವ ಇತರ ವಿದೇಶಿಯರಿಗಿಂತ ಭಿನ್ನವಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

"ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ವಿದೇಶಿಯರನ್ನು ಗುರುತಿಸಬಹುದು ಮತ್ತು ಗಡೀಪಾರು ಮಾಡುವ ಪ್ರಕ್ರಿಯೆಯನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಆರಂಭಿಸಬಹುದು. ಆದರೆ ಇದು ರೋಹಿಂಗ್ಯಾಗಳ ವಿಚಾರದಲ್ಲಿ ಹಾಗೆ ಮಾಡಲು ಬರುವುದಿಲ್ಲ. ನಾವು ಅವರನ್ನು ಎಲ್ಲಿಗೆ ಗಡಿಪಾರು ಮಾಡುತ್ತೇವೆ? ಅವರು ವೀಸಾ ಇಲ್ಲದೇ ಅಕ್ರಮವಾಗಿ ಗಡಿ ದಾಟಿದ್ದಾರೆ. ಅವರು ಬಾಂಗ್ಲಾದೇಶದವರೋ ಅಥವಾ ಮಯನ್ಮಾರ್‌ನವರೋ ಎಂದು ಖಚಿತಪಡಿಸಿಕೊಳ್ಳುವುದು ಕಷ್ಟ” ಎಂದು ಮೂಲಗಳು ತಿಳಿಸಿವೆ. 

ರೋಹಿಂಗ್ಯಾಗಳಲ್ಲದೆ, ನೂರಾರು ವಿದೇಶಿಗರು ವೀಸಾ ನಿಯಮಗಳನ್ನು ಉಲ್ಲಂಘಿಸಿ ನಗರದಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. “ಏಪ್ರಿಲ್‌ನಲ್ಲಿ, ಸುಮಾರು 948 ವಿದೇಶಿಯರಿದ್ದರು, ಅವರು ದೀರ್ಘಕಾಲದಿಂದ ಇಲ್ಲಿಯೇ ಉಳಿದುಕೊಂಡಿದ್ದಾರೆ ಎಂದಿದ್ದಾರೆ.

SCROLL FOR NEXT