ರಾಜ್ಯ

ಬಿಟ್ ಕಾಯಿನ್ ಪ್ರಕರಣ: ವಿದೇಶಿ ತನಿಖಾ ಸಂಸ್ಥೆಗಳಿಂದ ಕೋರಿಕೆ ಬಂದಿಲ್ಲ- ಕಮಲ್ ಪಂತ್ ಸ್ಪಷ್ಟನೆ

Nagaraja AB

ಬೆಂಗಳೂರು: ಬಿಟ್ ಕಾಯಿನ್ ಹ್ಯಾಕಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ವಿದೇಶಿ ತನಿಖಾ ಸಂಸ್ಥೆ ತಮ್ಮನ್ನು ಸಂಪರ್ಕಿಸಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟಪಡಿಸಿದ್ದಾರೆ.

ಬಿಟ್ ಕಾಯಿನ್ ಹ್ಯಾಕಿಂಗ್ ಹಗರಣ ಕುರಿತಂತೆ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಈ ರೀತಿಯ ಹೇಳಿಕೆಯನ್ನು ಕಮಲ್ ಪಂತ್ ನೀಡಿದ್ದಾರೆ.  ಬಿಟ್ ಕಾಯಿನ್ ಕೇಸ್ ದಾಖಲಾಗಿ 1 ವರ್ಷವೇ ಕಳೆದಿದೆ. ಶ್ರೀ ಕೃಷ್ಣ ಭಾಗಿಯಾಗಿರುವ ಪ್ರಕರಣ ಕುರಿತು ಯಾವುದೇ ರಾಷ್ಟ್ರ ಮಾಹಿತಿ ಕೋರಿಲ್ಲ, 14, 682 ಬಿಟ್ ಕಾಯಿನ್ ಗಳ ವರ್ಗಾವಣೆ ಬೆಂಗಳೂರಿನಿಂದ ನಡೆದಿದೆ ಎಂಬುದಕ್ಕೆ ಯಾವ ಆಧಾರಗಳು ಇಲ್ಲ ಎಂದು ಹೇಳಿದ್ದಾರೆ. 

ಮಾದಕ ವಸ್ತು ಪ್ರಕರಣದಲ್ಲಿ ಕಳೆದ ವರ್ಷ ನವೆಂಬರ್ 4 ರಂದು ಶ್ರೀಕಿಯನ್ನು ವಶಕ್ಕೆ ಪಡೆಯಲಾಗಿತ್ತು. ಆತನ ವಿಚಾರಣೆ ವೇಳೆ ಹ್ಯಾಕಿಂಗ್ ಕುರಿತು ಮಾಹಿತಿ ಲಭ್ಯವಾಗಿತ್ತು. ಆತನ ಬಳಿ ಇದ್ದ ಬಿಟ್ ಕಾಯಿನ್ ಗಳನ್ನು ವಶಕ್ಕೆ ಪಡೆಯಲು ಸರ್ಕಾರದ ಅನುಮತಿ ಪಡೆದು ಪ್ರತ್ಯೇಕ ವ್ಯಾಲೆಟ್ ತೆರೆಯಲಾಗಿತ್ತು. ಆರಂಭದಲ್ಲಿ 31.8 ಬಿಟ್ ಕಾಯಿನ್ ವ್ಯಾಲೆಟ್ ನಲ್ಲಿದ್ದವು. ನಂತರ ತೆರೆದು ನೋಡಿದಾಗ 186.81 ಬಿಟ್ ಕಾಯಿನ್ ಗಳಿದ್ದವು. ಆದರೆ, ಖಾಸಗಿ ಕೀ ಲಭಿಸದ ಕಾರಣ ಅವುಗಳನ್ನು ಪೊಲೀಸ್ ವ್ಯಾಲೆಟ್ ಗೆ ವರ್ಗಾಯಿಸಲು ಸಾಧ್ಯವಾಗಿರಲಿಲ್ಲ. ಇದನ್ನು ನ್ಯಾಯಾಲಯದ ಗಮನಕ್ಕೂ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ. 

SCROLL FOR NEXT