ರಾಜ್ಯ

ಅಕಾಲಿಕ ಮಳೆಯಿಂದ ಎದುರಾದ ಸಂಕಷ್ಟ: ಸೌದೆ ಒಲೆ ಮೂಲಕ ಕಾಫಿ ಬೀಜ ಒಣಗಿಸಲು ಬೆಳೆಗಾರರು ಮುಂದು!

Manjula VN

ಮಡಿಕೇರಿ: ಅಕಾಲಿಕ ಮಳೆ ಕೊಡಗು ಜಿಲ್ಲೆಯಲ್ಲಿ ಅವಾಂತರಗಳನ್ನೇ ಸೃಷ್ಟಿಸಿದ್ದು, ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ನವೆಂಬರ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸುದೀರ್ಘವಾಗಿ ಮಳೆ ಸುರಿದಿದ್ದು, ಸಾಕಷ್ಟು ಕಾಫಿ ಬೀಜಗಳು ಹಾನಿಗೀಡಾಗಿವೆ. ಉಳಿದಿರುವ ಬೀಜವನ್ನು ಕುಯ್ಲು ಮಾಡಲು ಹರಸಾಹಸ ಪಡುತ್ತಿದ್ದಾರೆ.

ಕಾಫಿ ಬೆಳೆಗಾರರು ಕಾರ್ಮಿಕರ ಸಹಾಯದಿಂದ ಕಾಫಿ ಹಣ್ಣು ಕೊಯ್ಲು ಮಾಡಿ ಹಣ್ಣನು ಪಲ್ಪರ್‌ಬೀಜವಾಗಿ ಪರಿವರ್ತಿಸುವುದು ಮಾಡುತ್ತಾರೆ. ಪಲ್ಪರ್‌ ಮಾಡಿದ ಕಾಫಿ ಬೀಜವನ್ನು ಪಾರ್ಚಿಮೆಂಟ್‌ ಬಿಸಿಲಿಗೆ ಒಣಗಿಸುತ್ತಾರೆ ಹಾಗೂ ಪಲ್ಪರ್‌ ಮಾಡಲು ಸಾಧ್ಯವಾಗದವರು ಕೊಯ್ಲು ಮಾಡಿದ ಕಾಫಿಹಣ್ಣನ್ನು ಬಿಸಿಲಿಗೆ ಒಣಗಿಸುತ್ತಾರೆ. ಆದರೆ, ಮಳೆ ಹಿನ್ನೆಲೆಯಲ್ಲಿ ಕಾಫಿ ಬೀಜಗಳನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ.

ಅರೇಬಿಕಾ ವಿಧದ ಕಾಫಿ ಕೊಯ್ಲು ಅವಧಿಯು ನವೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಮಾಗಿದ ಕಾಳುಗಳನ್ನು ಸೂರ್ಯನ ಕೆಳಗೆ ಒಣಗಿಸಬೇಕು. ಆದಾಗ್ಯೂ, ಕೊಡಗಿನ ಕೆಲವು ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಬೆಳೆಗಾರರು ಮಳೆಯಲ್ಲೇ ಕಾಫಿ ಬೀಜಗಳ ಕೀಳುವ ಕಷ್ಟಕರ ಕೆಲಸವನ್ನು ಎದುರಿಸುತ್ತಿದ್ದಾರೆ. ಇದಲ್ಲದೆ, ಸಂಗ್ರಹಿಸಿದ ಬೀಜಗಳನ್ನು ಮಳೆಯಲ್ಲಿ ಒಣಗಿಸಲು ಸಾಧ್ಯವಾಗದೆ ಮರದ ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಚ್ಚಿ ಒಣಗಿಸಲು ಮುಂದಾಗಿದ್ದಾರೆ.

ಮಕ್ಕಂದೂರು ಗ್ರಾಮದ ಕಾಫಿ ಬೆಳೆಗಾರ ಕೆ.ವಿಕಾಸ್ ಅವರು ಮಾತನಾಡಿ, ಮಾಗಿದ ಕಾಫಿಯನ್ನು ಒಣಗಿಸಲು ಒಲೆಗಳನ್ನು ಬಳಸಲಾಗುತ್ತಿದೆ. ಸಾಮಾನ್ಯವಾಗಿ ಬಿಸಿಲಿನಲ್ಲಿ ಒಣಗಿಸುವ ಕಾಫಿ ಬೀಜಗಳನ್ನು ಮಳೆ ಹಿನ್ನೆಲೆಯಲ್ಲಿ ಸೌದೆ ಒಲೆಯ ಮೇಲೆ ಒಣಗಿಸಲಾಗುತ್ತಿದೆ. ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಕಾಫಿ ಬೀಜಗಳನ್ನು ಒಣಗಿಸುವ ಈ ಸಾಂಪ್ರದಾಯಿಕವಲ್ಲದ ವಿಧಾನವನ್ನು ಅನುಸರಿಸುವುದು ಇದೀಗ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ

ಒಣಗಿಸದ ಕಾಫಿ ಬೀಜಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಗಳಿರುವುದಿಲ್ಲ. ನೆನೆದ ಬೀಜಗಳನ್ನು ವ್ಯಾಪಾರಿಗಳು ಖರೀದಿಸುವುದಿಲ್ಲ ಎಂದು ಜಿಲ್ಲೆಯ ಕಾಫಿ ವ್ಯಾಪಾರಿ ಬಿ.ಎನ್.ರಮೇಶ್ ತಿಳಿಸಿದ್ದಾರೆ.

SCROLL FOR NEXT