ರಾಜ್ಯ

ಪಿಎಫ್ ಸಂಘಟನೆಯ ಬೆಂಗಳೂರು ವಲಯ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರಾಗಿ ಮಾರುತಿ ಭೋಯಿ ಅಧಿಕಾರ

Prasad SN

ಬೆಂಗಳೂರು: ಅಪರ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರು (ಕರ್ನಾಟಕ ಮತ್ತು ಗೋವಾ), ಹುಬ್ಬಳ್ಳಿ ವಲಯದ ಶ್ರೀಯುತ ಮಾರುತಿ ಭೋಯಿ ರವರು ಭವಿಷ್ಯ ನಿಧಿ ಸಂಘಟನೆಯ ಬೆಂಗಳೂರು ವಲಯದ ಅಪರ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 

ಶ್ರೀಯುತ ಮಾರುತಿ ಭೋಯಿ ರವರು ಭವಿಷ್ಯ ನಿಧಿಗೆ ಸೇರುವ ಮೊದಲು ಭಾರತೀಯ ವಾಯುಸೇನೆ ಮತ್ತು ಕೇಂದ್ರೀಯ ಅಬಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 1997ರಲ್ಲಿ ಭವಿಷ್ಯ ನಿಧಿ ಸಂಘಟನೆಗೆ ಸಹಾಯಕ ಭವಿಷ್ಯ ನಿಧಿ ಆಯುಕ್ತರಾಗಿ ಸೇರಿದ ಅವರು ಕೊಚ್ಚಿನ್, ನಿಜಾಮಾಬಾದ್, ಸೇಲಂ, ಗೌಹಾಟಿ, ಉಡುಪಿ, ವೇಲೂರು, ಗುಲ್ಬರ್ಗ, ಮಂಗಳೂರು ಮುಂತಾದ ಕಛೇರಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು ಕರ್ನಾಟಕದ ಹಾವೇರಿ ಜಿಲ್ಲೆಯ ಸಾವನೂರಿನಲ್ಲಿ ತಮ್ಮ ಹೈ ಸ್ಕೂಲ್ ಶಿಕ್ಷಣವನ್ನು ಪೂರೈಸಿದ್ದರು.

ಶ್ರೀಯುತ ಮಾರುತಿ ಭೋಯಿ ರವರು 27/10/2003ರಲ್ಲಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು-II ಮತ್ತು 08/02/2013ರಲ್ಲಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು-I ಆಗಿ ಬಡ್ತಿ ಹೊಂದಿದ್ದರು. ಅಪರ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರಾಗಿ 24/07/2019ರಲ್ಲಿ ಬಡ್ತಿ ಹೊಂದಿ ಭವಿಷ್ಯ ನಿಧಿಯ ಕೇಂದ್ರ ಕಛೇರಿಯಲ್ಲಿ ಕಾರ್ಯನಿರ್ವಹಿಸಿ ದಿನಾಂಕ 12/07/2021ರಲ್ಲಿ ಹುಬ್ಬಳ್ಳಿ ವಲಯಕ್ಕೆ ವರ್ಗಾವಣೆಯಾಗಿ ಬಂದಿದ್ದಾರೆ.

SCROLL FOR NEXT