ರಾಜ್ಯ

ಸರ್ಕಾರ, ಅಧಿಕಾರದ ನಿರ್ಲಕ್ಷ್ಯಕ್ಕೆ ನಲುಗುತ್ತಿರುವ ವರ್ತೂರು ಕೆರೆ; ಮತ್ತೆ ಪ್ರಾರಂಭವಾಯ್ತು ವಿಷಕಾರಿ ನೊರೆ!

Srinivas Rao BV

ಬೆಂಗಳೂರು: ವರ್ತೂರು ಕೆರೆಯಲ್ಲಿ ಮತ್ತೆ ವಿಷಕಾರಿ ನೊರೆ ಪ್ರಾರಂಭವಾಗಿದ್ದು, ಸ್ಥಳೀಯರು ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಯ ನಿರ್ಲಕ್ಷ್ಯತನದ ಕೊರತೆಯ ವರ್ತನೆ ಕಾರಣ ಎಂದು ಆರೋಪಿಸಿದ್ದಾರೆ. 

ನಿಗದಿತ ಸಮಯದಲ್ಲಿ ಕೆರೆಯನ್ನು ಸ್ವಚ್ಛಗೊಳಿಸುವ ಕಾಮಗಾರಿಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಎನ್ ಜಿಟಿಯ ಮಾಜಿ ಸದಸ್ಯರು ರಚಿಸಿದ್ದ ಸಮಿತಿ ಹಾಗೂ ನಾಗರಿಕರು ಈ ಬಗ್ಗೆ ಮಾತನಾಡಿದ್ದು, 2021 ರಲ್ಲಿ ಒಳಚರಂಡಿ ಸಂಸ್ಕರಣಾ ಘಟಕಗಳು ನಿರ್ಮಾಣವಾಗಬೇಕಿತ್ತು. ಆದರೆ ಇನ್ನೂ ಆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಹೇಳಿದ್ದಾರೆ. 
 
ಎನ್ ಜಿಟಿಯ ಮಾಜಿ ಸಮಿತಿ ಸದಸ್ಯರ ಅವಧಿ ಮಾರ್ಚ್ 2020 ಕ್ಕೆ ಪೂರ್ಣಗೊಂಡಿದ್ದು, ಈ ಬಳಿಕ ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿ ರಚನೆಯಾಗಬೇಕಿತ್ತು. ಆದರೆ ಅದೂ ಆಗಿಲ್ಲ. 

"ನಾಗರಿಕ ಸಮಿತಿಯ ಸದಸ್ಯರೊಬ್ಬರು ಇಲ್ಲಿನ ಬೆಳವಣಿಗೆಗಳ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಎಸ್ ಟಿಪಿಗಳನ್ನು 2020 ರ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳಿಸಬೇಕಿತ್ತು. ಆದರೆ ಸರ್ಕಾರ ಎನ್ ಜಿಟಿಯಿಂದ ವಿಸ್ತರಣೆ ಪಡೆದಿದ್ದರ ಪರಿಣಾಮ ಗಡುವು ಮಾರ್ಚ್ 2021 ಕ್ಕೆ ವಿಸ್ತರಣೆಯಾಗಿತ್ತು. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಈಗ ಸಂಸ್ಕರಣೆಯಾಗದ ಒಳಚರಂಡಿ ನೀರು ಹಾಗೂ ಕಲುಶಿತ ನೀರು ಕೆರೆಗೆ ಹರಿಯುತ್ತಿದೆ. ನೀರಿನ ಗುಣಮಟ್ಟ ಹದಗೆಟ್ಟಾಗ ಕೆರೆಯಲ್ಲಿ ಅಪಾರ ಪ್ರಮಾಣದ ವಿಷಕಾರಿ ನೊರೆ ಉಂಟಾಗುತ್ತದೆ" ಎಂದು ಹೇಳಿದ್ದಾರೆ.

ವರ್ತೂರು ಕೆರೆಯ ಸುತ್ತಮುತ್ತಲಿನ ಮಂದಿ ಅದರ ನಿಗಾ ವಹಿಸುತ್ತಿದ್ದು, ಕೆರೆಗೆ ತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ಸಂಸ್ಕರಣೆಯಾಗದ ನೀರು ಹರಿಯುತ್ತಿರುವ ಫೋಟೋ, ವಿಡಿಯೋಗಳನ್ನು ಸರ್ಕಾರದೊಂದಿಗೆ ಹಂಚಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. 

ಬೆಳ್ಳಂದೂರು ಕೆರೆ ಹಾಗೂ ವರ್ತೂರು ಕೆರೆಗಳ ಹೂಳು ತೆಗೆಯುವ ಪ್ರಕ್ರಿಯೆ ಬಹುತೇಕ ನಿಂತೇ ಹೋಗಿದೆ. 2022 ರ ವೇಳೆಗೆ ಎರಡೂ ಕೆರೆಗಳನ್ನು ಸ್ವಚ್ಛಗೊಳಿಸುವ ಯೋಜನೆ ಹೊಂದಲಾಗಿತ್ತು. ಆದರೆ ಈ ವರೆಗೂ 30,000 ಟ್ರಕ್ ಲೋಡ್ ನಷ್ಟು ಹೂಳನ್ನು ಮಾತ್ರ ಹೊರತೆಗೆಯಲಾಗಿದೆ. ಕೆರೆಯಲ್ಲೀಗ ಇರುವುದು ಮಳೆಯ ನೀರು ಹಾಗೂ ಸಂಸ್ಕರಣೆಯಾಗದ ಚರಂಡಿ ನೀರಾಗಿದೆ. 

SCROLL FOR NEXT