ರಾಜ್ಯ

ಟಿಹೆಚ್ಇ ಜಾಗತಿಕ ಉಪಯೋಗಾರ್ಹತೆ ಶ್ರೇಣಿಯಲ್ಲಿ ಬೆಂಗಳೂರು ವಿವಿ ಪ್ರವೇಶ; ಇನ್ನೂ ಯಾವೆಲ್ಲಾ ವಿವಿ, ಸಂಸ್ಥೆಗಳಿವೆ, ವಿವರ ಹೀಗಿದೆ

Srinivas Rao BV

ಬೆಂಗಳೂರು: ಮಾನವಸಂಪನ್ಮೂಲ ಸಲಹಾ ಸಂಸ್ಥೆ (ಹೆಚ್ ಆರ್ ಕನ್ಸಲ್ಟೆನ್ಸಿ) ಎಮರ್ಜಿಂಗ್ ನಡೆಸಿರುವ ಹಾಗೂ ಟೈಮ್ಸ್ ಉನ್ನತ ಶಿಕ್ಷಣ (ಟಿಹೆಚ್ಇ) ಪ್ರಕಟಿಸಿರುವ ಜಾಗತಿಕ ಉದ್ಯೋಗಾರ್ಹತೆ ಶ್ರೇಣಿ ಹಾಗೂ ಸಮೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ವಿಶ್ವವಿದ್ಯಾನಿಲಯ ಪ್ರವೇಶ ಪಡೆದಿದೆ. 

ದೆಹಲಿ ಐಐಟಿ ನಂತರದ ಸ್ಥಾನದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ ಸಿ) ಇದ್ದು ಜಾಗತಿಕ ಮಟ್ಟದಲ್ಲಿ 61 ನೇ ಸ್ಥಾನ ಗಳಿಸಿದೆ. 

ನೇಮಕಾತಿ ಮಾಡುವವರ ಪ್ರಕಾರ ಸಮೀಕ್ಷೆಯಲ್ಲಿ ವಿಶ್ವದ ಟಾಪ್ 250 ವಿವಿಗಳನ್ನು ಪಟ್ಟಿ ಮಾಡಲಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯ 249 ನೇ ಸ್ಥಾನದಲ್ಲಿದೆ. ಭಾರತೀಯ ಸಂಸ್ಥೆಗಳ ಪೈಕಿ ದೆಹಲಿ-ಐಐಟಿ  27 ನೇ ಸ್ಥಾನದಲ್ಲಿದ್ದು, ಕಳೆದ ವರ್ಷ ಜಾಗತಿಕ ಮಟ್ಟದ ಶ್ರೇಣಿಯಲ್ಲಿ ಗುರುತಿಸಿಕೊಂಡಿದ್ದ ಭಾರತದ ಇನ್ನೂ 6 ವಿವಿಗಳು ಸರಾಸರಿ 20 ಸ್ಥಾನಗಳು ಮೇಲೇರಿವುದು ಗಮನಾರ್ಹ ಅಂಶವಾಗಿದೆ.

ಚೀನಾ, ಮೇನ್ ಲ್ಯಾಂಡ್, ಫ್ರಾನ್ಸ್, ಸ್ಪೇನ್ ಮಾದರಿಯಲ್ಲಿ ಭಾರತವೂ ಸಹ ಉದ್ಯೋಗಾರ್ಹತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶವೆಂದು ಪರಿಗಣಿಸಲಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

SCROLL FOR NEXT