ರಾಜ್ಯ

ರೈಲ್ವೆ ಟ್ರಾಕ್ ಬಳಿ ಟಾಲಿವುಡ್ ಗಾಯಕಿ ತಂದೆಯ ಶವ ಪತ್ತೆ, ಬೆಂಗಳೂರು ಪೊಲೀಸರಿಂದ ಹತ್ಯೆ ಪ್ರಕರಣ ದಾಖಲು

Srinivas Rao BV

ಬೆಂಗಳೂರು: ಟಾಲಿವುಡ್ ಗಾಯಕಿ ಹರಿಣಿ ಅವರ ತಂದೆ ಅಯಾಲಸೋಮೆ ಅಜುಲ ಕಾಳಿಪ್ರಸಾದ್ ರಾವ್ ಅವರ ಮೃತ ಶರೀರ ಯಲಹಂಕ-ರಾಜಾನುಕುಂಟೆ ರೈಲ್ವೆ ಟ್ರಾಕ್ ನಡುವೆ ಪತ್ತೆಯಾಗಿದ್ದ ಘಟನೆಯಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸರು ಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 

ಮೃತ ವ್ಯಕ್ತಿ ಹೈದರಾಬಾದ್ ನಲ್ಲಿ ಪ್ರಾಜೆಕ್ಟ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.
 
ಪ್ರಯಾಣಿಕ ರೈಲಿನ ಲೋಕೊ ಪೈಲಟ್ ಒಬ್ಬರು ಮೃತದೇಹವನ್ನು ಗಮನಿಸಿ ಯಲಹಂಕ ಸ್ಟೇಷನ್ ಮಾಸ್ಟರ್ ಗಮನಕ್ಕೆ ತಂದಿದ್ದಾರೆ. ದೂರಿನ ಅನ್ವಯ ಪೊಲೀಸರು ಸ್ಥಳಕ್ಕೆ ತೆರಳಿ ಹಣೆ, ಕೈ, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿತ್ತು. ಘಟನಾ ಸ್ಥಳದಲ್ಲಿ ಪೊಲೀಸರು ಬ್ಲೇಡ್, ಕತ್ತರಿ, ಚಾಕುಗಳನ್ನು ವಶಕ್ಕೆ ಪಡೆದು ಶವವನ್ನು ಮರಣೋತ್ತರ ಪರೀಕ್ಷೆ ವರದಿಗಾಗಿ ಎಂಎಸ್ ರಾಮಯ್ಯ ಆಸ್ಪತ್ರೆಗೆ ಕಳಿಸಿದ್ದಾರೆ. 

ಪ್ರಾಥಮಿಕ ಹಂತದ ತನಿಖೆಗಳ ಪ್ರಕಾರ ಕಾಳಿಪ್ರಸಾದ್ ರಾವ್ ನಗರಕ್ಕೆ ವ್ಯಾಪಾರ-ವ್ಯವಹಾರದ ನಿಮಿತ್ತ ಭೇಟಿ ನೀಡಿದ್ದರು. ಸ್ಟಾರ್ ಹೊಟೆಲ್ ನಲ್ಲಿ ತಂಗಿದ್ದ ಅವರು ಸೋಮವಾರದಂದು ಕ್ಯಾಬ್ ಬುಕ್ ಮಾಡಿ ಹೊರಗೆ ಹೋಗಿದ್ದೇ ಕೊನೆ ಅದಾದ ಬಳಿಕ ಮತ್ತೆ ಹೊಟೆಲ್ ಗೆ ಬರಲಿಲ್ಲ. 

ಕಾಳಿಪ್ರಸಾದ್ ರಾವ್ ಅವರ ಕುಟುಂಬ ಸದಸ್ಯರು ಪೊಲೀಸರಿಗೆ ನೀಡಿರುವ ದೂರಿನಲ್ಲಿ "ಆತನನ್ನು ಗ್ಯಾಂಗ್ ಒಂದು ಹತ್ಯೆ ಮಾಡಿದ್ದು, ರೈಲ್ವೆ ಟ್ರಾಕ್ ಮೇಲೆ ಎಸೆದು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ನ.19 ರಂದು ಕಾಳಿಪ್ರಸಾದ್ ರಾವ್ ಅವರು ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದರು. 

ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಉದ್ಯಮಿ ಒಬ್ಬರು ಮೂವರ ವಿರುದ್ದ ದೂರು ದಾಖಲಿಸಿ ತನಗೆ 2 ಕೋಟಿ ರೂಪಾಯಿಗಳನ್ನು ಕಂಪನಿಯೊಂದರಲ್ಲಿ ಹೂಡಿಕೆ ಮಾಡುವಂತೆ ಶಿಫಾರಸ್ಸು ಮಾಡಿದ್ದರು ಹಾಗೂ ರಾವ್ ಅವರು ಈ ಆರೋಪಿಗಳಿಗೆ ಹಣದ ಸಹಾಯ ಮಾಡುವುದಕ್ಕಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದರು. ಅಪರಾಧಿಗಳನ್ನು ಪತ್ತೆ ಮಾಡುವುದಕ್ಕಾಗಿ ವಿಶೇಷ ತಂಡ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದೆ. 

SCROLL FOR NEXT