ರಾಜ್ಯ

ನಿರ್ಮಿತಿ ಕೇಂದ್ರದ ಮಾಜಿ ಯೋಜನಾಧಿಕಾರಿ ವಾಸುದೇವ ಬಂಧಿಸಿ ನ್ಯಾಯಾಂಗ ಬಂಧನಕ್ಕೆ: ಪತ್ತೆಯಾದ ಅಕ್ರಮ ಆಸ್ತಿ 18 ಕೋಟಿಗೂ ಅಧಿಕ!

Sumana Upadhyaya

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ಮಿತಿ ಕೇಂದ್ರದ ನಿವೃತ್ತ ಯೋಜನಾಧಿಕಾರಿ ವಾಸುದೇವ ಆರ್ ಎನ್ ಅವರನ್ನು ತೀವ್ರ ವಿಚಾರಣೆ ನಡೆಸಿದಾಗ ಅಕ್ರಮ ಆಸ್ತಿ ಪತ್ತೆಯಾಗಿದ್ದು ಎಸಿಬಿ(ACB) ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಾಸುದೇವ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ಮೊನ್ನೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮ ಆಸ್ತಿ-ನಗ-ನಾಣ್ಯ ಪತ್ತೆಯಾಗಿದೆ. 18 ಕೋಟಿಯ 20ಲಕ್ಷದ 63 ಸಾವಿರದ 868 ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು, ನಗದು, ವಾಹನಗಳು, ನಿವೇಶನಗಳು, ಕಟ್ಟಡಗಳು, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ ಇತ್ಯಾದಿ ಪತ್ತೆಯಾಗಿವೆ.

ವಾಸುದೇವ್ ಅವರ ಆದಾಯ ಮೂಲವನ್ನು ಪರಿಶೀಲಿಸಿದಾಗ ಅಕ್ರಮ ಆಸ್ತಿಪಾಸ್ತಿ ಶೇಕಡಾ 879.53ರಷ್ಟು ಪತ್ತೆಯಾಗಿದೆ. ಆರೋಪಿ ವಾಸುದೇವ್ ಅವರಿಂದ ವಿವರಣೆ ಪಡೆದ ಮೇಲೆ ಇನ್ನಷ್ಟು ತನಿಖೆ ನಡೆಸುವ ಸಾಧ್ಯತೆಯಿದೆ. 

SCROLL FOR NEXT