ಕಂಬಳದಲ್ಲಿ ಪಾಲ್ಗೊಳ್ಳುತ್ತಿರುವ ಐವರು ಹೆಣ್ಣುಮಕ್ಕಳ ಪೈಕಿ ಒಬ್ಬ ಹೆಣ್ಣುಮಗಳಾದ ಚೈತ್ರಾ ಭಟ್. 
ರಾಜ್ಯ

ಕಂಬಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೋಣ ಓಡಿಸಲಿದ್ದಾರೆ ಐವರು ಹೆಣ್ಣು ಮಕ್ಕಳು!

ಕೆಸರು ಗದ್ದೆಯಲ್ಲಿ ಕೊಬ್ಬಿದ ಕೋಣಗಳ ಓಟ, ತುಳುನಾಡಿನ ಅಪ್ಪಟ ಜನಪದ ಆಟವಾಗಿದ್ದು, ಇದು ಕರಾವಳಿಯ ಹೆಮ್ಮೆಯ ಕಂಬಳ. ಜಾನಪದ ಕ್ರೀಡೆಯಾದ ಕಂಬಳ ಇದೀಗ ಮತ್ತೊಂದು ಇತಿಹಾಸ ಸೃಷ್ಟಿಸುವತ್ತ ಮುಖ ಮಾಡಿದೆ. ಕಂಬಳದ ಕೋಣಗಳನ್ನು ಹೆಣ್ಣು ಮಕ್ಕಳು ಓಡಿಸುವ ಮೂಲಕ ಇದೆ ಮೊದಲ ಬಾರಿಗೆ ಹೊಸ ಚರಿತ್ರೆಯನ್ನು ಸೃಷ್ಟಿ ಮಾಡುವ ಚಿಂತನೆಯಲ್ಲಿದೆ.

ಮಂಗಳೂರು: ಕೆಸರು ಗದ್ದೆಯಲ್ಲಿ ಕೊಬ್ಬಿದ ಕೋಣಗಳ ಓಟ, ತುಳುನಾಡಿನ ಅಪ್ಪಟ ಜನಪದ ಆಟವಾಗಿದ್ದು, ಇದು ಕರಾವಳಿಯ ಹೆಮ್ಮೆಯ ಕಂಬಳ. ಜಾನಪದ ಕ್ರೀಡೆಯಾದ ಕಂಬಳ ಇದೀಗ ಮತ್ತೊಂದು ಇತಿಹಾಸ ಸೃಷ್ಟಿಸುವತ್ತ ಮುಖ ಮಾಡಿದೆ. ಕಂಬಳದ ಕೋಣಗಳನ್ನು ಹೆಣ್ಣು ಮಕ್ಕಳು ಓಡಿಸುವ ಮೂಲಕ ಇದೆ ಮೊದಲ ಬಾರಿಗೆ ಹೊಸ ಚರಿತ್ರೆಯನ್ನು ಸೃಷ್ಟಿ ಮಾಡುವ ಚಿಂತನೆಯಲ್ಲಿದೆ.

ಹೌದು. ಐದು ಹೆಣ್ಣು ಮಕ್ಕಳು ಕಂಬಳದ ಕೋಣಗಳನ್ನು ಓಡಿಸಲು ಮುಂದೆ ಬಂದಿದ್ದು, ಈ ಬಾರಿಯ ಕಂಬಳ ಋತುವಿನಲ್ಲಿ ಕಂಬಳದ ಕೋಣಗಳನ್ನು ಓಡಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಯಾವ ಕೋಣಗಳನ್ನು ಓಡಿಸಬೇಕು? ಹೇಗೆ ಓಡಿಸಬೇಕೆಂದು ಕಂಬಳ ಅಕಾಡೆಮಿ ನಿರ್ಧಾರ ಮಾಡಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಮೂಡಬಿದಿರೆಯ ಕಂಬಳ ಆಕಾಡೆಮಿ ವತಿಯಿಂದ ನಡೆಯುವ ಉಚಿತ ತರಬೇತಿ ಶಿಬಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂಬಳ ಅಕಾಡಮಿ ಅಧ್ಯಕ್ಷ ಗುಣಪಾಲ ಕಡಂಬ ಈ ಬಗ್ಗೆ ಮಾಹಿತಿ ನೀಡಿದ್ದಾರೆ , 

ಈ ಬಾರಿ ಹೆಣ್ಣುಮಕ್ಕಳಿಗೂ ಕಂಬಳದಲ್ಲಿ ಭಾಗವಹಿಸುವ ಬಗ್ಗೆ ತೀರ್ಮಾನ ಮಾಡಲಾಗಿದ್ದು, ಈಗಾಗಲೇ ಐವರು ಕಂಬಳ ಕೋಣದ ಯಜಮಾನ ಕುಟುಂಬದವರು ಮುಂದೆ ಬಂದಿದ್ದಾರೆ. ತಮ್ಮ ಕುಟುಂಬದ ಹೆಣ್ಣುಮಕ್ಕಳನ್ನು ಕೋಣಗಳನ್ನು ಓಡಿಸಲು ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ. ಈ ಹೆಣ್ಣು ಮಕ್ಕಳಿಗೆ ಅಕಾಡೆಮಿ ವತಿಯಿಂದ ತರಬೇತಿ ನೀಡಲಾಗುವುದು. ಈ ವರ್ಷದ ಕಂಬಳ ಕೂಟದಲ್ಲೇ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

ಪುರುಷರು ಕೋಣಗಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೋ ಮಹಿಳೆಯರು ಕೂಡ ಅಷ್ಟೇ ಚೆನ್ನಾಗಿ ಕೋಣಗಳನ್ನು ಸಾಕುತ್ತಾರೆ. ಹೀಗಾಗಿ ಕಂಬಳ ಕೋಣಗಳನ್ನು ಮಹಿಳೆಯರೇ ಗದ್ದೆಗಿಳಿಸಬಹುದು. ಕಂಬಳ ಸಾಂಪ್ರದಾಯಿಕವಾಗಿ ಬಹಳ ಮಹತ್ವ ಹೊಂದಿರುವುದರಿಂದ, ಸಂಪ್ರದಾಯದ ಪ್ರಕಾರವೇ ಮಹಿಳೆಯರಿಗೆ ಅವಕಾಶ ನೀಡುತ್ತೇವೆ ಎಂದು ಗುಣಪಾಲ ಕಡಂಬ ತಿಳಿಸಿದ್ದಾರೆ.

ಕಂಬಳದಲ್ಲಿ ಹೆಣ್ಣುಮಕ್ಕಳನ್ನು ಭಾಗಿಯಾಗುವಂತೆ ಮಾಡಬೇಕೆಂದು ನಿರ್ಧರಿಸಿದ ಸಂದರ್ಭದಲ್ಲಿ ನನಗೆ ಬೆದರಿಕೆಗಳು ಬಂದಿದ್ದವು. ಮಹಿಳೆಯರೇ ಕಂಬಳದಲ್ಲಿ ಭಾಗಿಯಾಗಲು ಮುಂದಾಗುತ್ತಿರುವಾಗ ನಾವೇಕೆ ಅವರಿಗೆ ಅವಕಾಶ ನೀಡಬಾರದು. ಹೆಣ್ಣುಮಕ್ಕಳ ಪೋಷಕರೂ ಕೂಡ ಒಪ್ಪಿಗೆ ನೀಡಿದ್ದಾರೆ. ಇದೀಗ ಮುಂದೆ ಬಂದಿರುವ ಹೆಣ್ಣು ಮಕ್ಕಳಿಗೆ 5 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಬಳಿಕ ಅವರ ಮನೆಯಲ್ಲೇ ಸಾಕಿದ ಕೋಣಗಳೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿದ್ದಾರೆ. 

ಅ.10ಕ್ಕೆ ತರಬೇತಿ ಮುಕ್ತಾಯ
ಕಳೆದ ವರ್ಷ ಚೈತ್ರಾ ಪರಮೇಶ್ವರ್ ಭಟ್ ಎಂಬ ಕುಂದಾಪುರದ ಪುಟ್ಟ ಬಾಲಕಿ ಕಂಬಳ ಗದ್ದೆಗೆ ಇಳಿದು ಇತಿಹಾಸ ಬರೆದಿದ್ದಳು. ಮಿಯಾರಿನಲ್ಲಿ ನಡೆದ ಕಂಬಳ ಕೂಟದಲ್ಲಿ ಭಾಗವಹಿಸಿದ್ದ ಬಾಕಿ ಎಲ್ಲರ ಗಮನ ಸೆಳೆದಿದ್ದಳು. ಈ ಬಾರಿ ಐದು ಹೆಣ್ಣುಮಕ್ಕಳೂ ಕೂಡ ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರುವುದು ಈ ಬಾರಿಯ ಕಂಬಳ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. 

ಏತನ್ಮಧ್ಯೆ, ಅಕಾಡೆಮಿಯಿಂದ 15 ದಿನಗಳ ತರಬೇತಿ ಕಾರ್ಯಕ್ರಮಕ್ಕೆ 18 ರಿಂದ 20 ವರ್ಷದೊಳಗಿನ 33 ಯುವಕರನ್ನು ಆಯ್ಕೆ ಮಾಡಲಾಗಿದೆ. 219 ಆಕಾಂಕ್ಷಿಗಳ ಗುಂಪಿನಿಂದ ಇವರನ್ನು ಆಯ್ಕೆ ಮಾಡಲಾಗಿದ್ದು, ಎಲ್ಲರಿಗೂ ಸೆಪ್ಟೆಂಬರ್ 19ರಿಂದರೇ ತರಬೇತಿ ಆರಂಭಿಸಲಾಗಿದೆ. ಅಕ್ಟೋಬರ್ 10 ರಂದು ತರಬೇತಿ ಮುಕ್ತಾಯವಾಗಲಿದೆ ಎಂದು ಗುಣಪಾಲ ಅವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT