ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಏರಿಳಿತವಾಗುತ್ತಿದ್ದು, ಅ.03 ರಂದು ಪ್ರಕಟಗೊಂಡ ವರದಿಯಲ್ಲಿ 24 ಗಂಟೆಗಳಲ್ಲಿ 8 ಮಂದಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ 711 ಮಂದಿ ಕೋವಿಡ್-19 ನಿಂದ ಚೇತರಿಕೆ ಕಂಡಿದ್ದು ಒಟ್ಟಾರೆ ಗುಣಮುಖರಾದವರ ಸಂಖ್ಯೆ 29,27,740 ಆಗಿದೆ. ಇಂದು 664 ಮಂದಿಗೆ ಹೊಸದಾಗಿ ಕೋವಿಡ್-19 ಸೋಂಕು ತಗುಲಿದ್ದು ರಾಜ್ಯದಲ್ಲಿ ಒಟ್ಟಾರೆ ಪಾಸಿಟೀವ್ ಪ್ರಕರಣಗಳ ಸಂಖ್ಯೆ 29,77,889 ಆಗಿದ್ದು, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 12301 ಕ್ಕೆ ತಲುಪಿದೆ.
ಅ.02 ರಂದು ಪ್ರಕಟಗೊಂಡಿದ್ದ ವರದಿಯಲ್ಲಿ 4 ಮಂದಿ ಸಾವನ್ನಪ್ಪಿದ್ದರೆ ಇಂದು ಸಾವಿನ ಸಂಖ್ಯೆ ಏರಿಕೆಯಾಗಿದ್ದು 8 ಮಂದಿ ಮೃತಪಟ್ಟಿದ್ದು ಕೋವಿಡ್-19 ನಿಂದ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 37819ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟಾರೆ ಸೋಂಕಿನ ಪ್ರಮಾಣ ಶೇ.0.52 ರಷ್ಟಿದ್ದು, ಮರಣ ಪ್ರಮಾಣ ಶೇ.1.20 ರಷ್ಟಿದೆ.
ಬೆಂಗಳೂರು ನಗರದಲ್ಲಿ 196 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 258 ಮಂದಿ ಡಿಸ್ಚಾರ್ಜ್ ಆಗಿದ್ದು ಮೂವರು ಸಾವನ್ನಪ್ಪಿದ್ದಾರೆ. ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ರಾಯಚೂರು ಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.