ರಾಜ್ಯ

ಮೈಸೂರು ಮೃಗಾಲಯದಲ್ಲಿ ಮತ್ತೆ ಕಾಣಲಿವೆ ಗೊರಿಲ್ಲಾ ಮತ್ತು ಒರಾಂಗುಟನ್‌ಗಳು

Srinivas Rao BV

ಬೆಂಗಳೂರು: ಮೈಸೂರು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಶೀಘ್ರವೇ ಗೊರಿಲ್ಲಾ ಹಾಗೂ ಒರಾಂಗುಟನ್ ಗಳು ಕಾಣಸಿಗಲಿವೆ.

ಹಲವು ವರ್ಷಗಳ ಹಿಂದೆ ಪೋಲೊ ಎಂಬ ಗೊರಿಲ್ಲಾ ಸಾವಿನ ನಂತರ ಮೈಸೂರು ಮೃಗಾಲಯದಲ್ಲಿ ಬೇರೆ ಗೊರಿಲ್ಲಾಗಳನ್ನು ಕರೆತರಲಾಗಿರಲಿಲ್ಲ. ಆದರೆ, ಈಗ ಮತ್ತೊಂದು ಮೃಗಾಲಯದಲ್ಲಿ ಗೊರಿಲ್ಲಾಗಳು ಹಾಗೂ ಒರಾಂಗುಟನ್‌ಗಳನ್ನು ಕಾಣಬಹುದಾಗಿದೆ.

ಏಕೆಂದರೆ, ಅಂತರರಾಷ್ಟ್ರೀಯ ವಿನಿಮಯ ಒಪ್ಪಂದದ ಅಡಿಯಲ್ಲಿ ಮೃಗಾಲಯವು ಗೊರಿಲ್ಲಾಗಳು ಮತ್ತು ಒರಾಂಗುಟನ್‌ಗಳನ್ನು ಖರೀದಿಸಿದೆ. ಎರಡು ಜೋಡಿ ಒರಾಂಗುಟನ್‌ಗಳನ್ನು ಸಿಂಗಪುರದಿಂದ ಮತ್ತು ಎರಡು ಗಂಡು ಗೊರಿಲ್ಲಾಗಳನ್ನು ಜರ್ಮನಿಯಿಂದ ಪಡೆಯಲಾಗಿದೆ.

ಇದರೊಂದಿಗೆ, ಮೈಸೂರು ಮೃಗಾಲಯ, ಬಿಳಿ ಘೇಂಡಾಮೃಗ ಮತ್ತು ಆಫ್ರಿಕನ್ ಚಿರತೆಗಳೊಂದಿಗೆ ಗೊರಿಲ್ಲಾಗಳು ಮತ್ತು ಒರಾಂಗುಟನ್‌ಗಳನ್ನು ಹೊಂದಿರುವ ಭಾರತದ ಏಕೈಕ ಮೃಗಾಲಯ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರವಾಗಿದೆ.

SCROLL FOR NEXT