ನಿರ್ಮಾಣ ಹಂತದ ಕೊಳಚೆ ನೀರು ಸಂಸ್ಕರಣಾ ಘಟಕ 
ರಾಜ್ಯ

ಎಸ್ ಟಿಪಿಯಿಂದ ನಿವೇಶನ ಕಳೆದುಕೊಂಡವರಿಗೆ ಬಿಡಿಎನಿಂದ ಅದೇ ಬ್ಲಾಕ್ ನಲ್ಲಿ ಪರ್ಯಾಯ ಸೈಟ್ ಹಂಚಿಕೆ

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡು ಬೃಹತ್ ಕೊಳಚೆ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸದ್ದಿಲ್ಲದೆ ಜನರಿಗೆ ಹಂಚಿಕೆಯಾದ ನಿವೇಶನಗಳನ್ನು ಬಳಸಿಕೊಂಡಿದ್ದು,...

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡು ಬೃಹತ್ ಕೊಳಚೆ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸದ್ದಿಲ್ಲದೆ ಜನರಿಗೆ ಹಂಚಿಕೆಯಾದ ನಿವೇಶನಗಳನ್ನು ಬಳಸಿಕೊಂಡಿದ್ದು, ಹಲವು ವರ್ಷಗಳ ನಂತರ ಬಿಡಿಎ ಅಂತಿಮವಾಗಿ ಈ ವಾರ ಈ 20x30 ಚದರ ಅಡಿ ಸೈಟ್ ಮಾಲೀಕರಿಗೆ ಪರ್ಯಾಯ ನಿವೇಶನಗಳನ್ನು ನೀಡಲು ನಿರ್ಧರಿಸಿದೆ.

ಅಧಿಸೂಚನೆಯೂ ಇಲ್ಲದೆ, ಚಲ್ಲಘಟ್ಟ ಮತ್ತು ಭೀಮನಕುಪ್ಪೆ ಗ್ರಾಮಗಳಲ್ಲಿ(ಬ್ಲಾಕ್ V ಮತ್ತು VI) ಬಿಡಿಎ ಒಟ್ಟು 65 ನಿವೇಶನಗಳನ್ನು ಎಸ್‌ಟಿಪಿ ನಿರ್ಮಿಸಲು ತೆಗೆದುಕೊಂಡಿತ್ತು. ಈ ಬ್ಲಾಕ್‌ಗಳಲ್ಲಿ ಈ ಹಿಂದೆ ಬೇರೆ ಬೇರೆ ಸ್ಥಳಗಳಲ್ಲಿ ಯೋಜಿಸಲಾಗಿದ್ದ ಈ ಘಟಕಗಳನ್ನು ಸ್ಥಳೀಯರ ಆಕ್ಷೇಪಣೆಯ ನಂತರ ಅಲ್ಲಿಗೆ ಸ್ಥಳಾಂತರಿಸಲಾಗಿದೆ.

ಎಸ್ ಟಿಪಿಯಿಂದಾಗಿ ನಿವೇಶನದ ಕಳೆದುಕೊಂಡವರಿಗೆ ಪರ್ಯಾಯ ಸೈಟ್‌ಗಳನ್ನು ಒದಗಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಬಿಡಿಎ ಕಾರ್ಯದರ್ಶಿ ವಿ ಆನಂದ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

"ಎಸ್‌ಟಿಪಿಯಿಂದಾಗಿ ಲೇಔಟ್‌ನ ಐದು ಮತ್ತು ಆರನೇ ಬ್ಲಾಕ್ ನಲ್ಲಿ ಒಟ್ಟು 65 ಹಂಚಿಕೆದಾರರು ತಮ್ಮ ಸೈಟ್‌ಗಳನ್ನು ಕಳೆದುಕೊಂಡಿದ್ದಾರೆ. ನಾವು ಈಗಾಗಲೇ ಸುಮಾರು ಎರಡು ತಿಂಗಳ ಹಿಂದೆ 36 ಸೈಟುಗಳನ್ನು ನೀಡಿದ್ದೇವೆ. ಉಳಿದ 29 ಸೈಟ್ ಗಳನ್ನು ಒಂದೆರಡು ದಿನಗಳಲ್ಲಿ ನೀಡಲಾಗುವುದು. ಅವರಿಗೆ ಈ ಹಿಂದೆ ನೀಡಿದ್ದ ಬ್ಲಾಕ್‌ನಲ್ಲಿಯೇ ನಿವೇಶನಗಳನ್ನು ನೀಡಲಾಗುವುದು ”ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೀತ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

CJP ಪ್ರತಿಭಟನೆ ಹಿನ್ನೆಲೆಯಲ್ಲಿ ರೈಲುಗಳ ರದ್ದತಿ: ಯುವಕರಿಗೆ ಹೆದರುವುದಾದರೆ ಇಡೀ ದೇಶವನ್ನೇ ಬಂದ್ ಮಾಡಿ; ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ 1.10 ಲಕ್ಷ ಫಾರಂ-7 ಅರ್ಜಿ ಸ್ವೀಕೃತಿ, 40.88 ಲಕ್ಷ ನೋಟಿಸ್ ವಿಚಾರಣೆ ಪೂರ್ಣ: ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!