ಬಾಲಬ್ರೂಯಿ ಅತಿಥಿ ಗೃಹ 
ರಾಜ್ಯ

ಬಾಲಬ್ರೂಯಿ ಅತಿಥಿ ಗೃಹವನ್ನು ಸಾಂವಿಧಾನಿಕ ಕ್ಲಬ್ ಆಗಿ ಪರಿವರ್ತನೆ: ಪರಿಸರವಾದಿಗಳ ಆತಂಕ

ರಾಜಧಾನಿ ಬೆಂಗಳೂರಿನ ಬಾಲಬ್ರೂಯಿ ಅತಿಥಿ ಗೃಹ ಪಾರಂಪರಿಕ ಕಟ್ಟಡವನ್ನು ಸಾಂವಿಧಾನಿಕ ಕ್ಲಬ್ (Constitution Club)ನ್ನಾಗಿ ಶಾಸಕರಿಗೆ ಪರಿವರ್ತಿಸಲಾಗುತ್ತಿರುವುದು ಶತಮಾನಗಳ ಕಾಲದ ಮರಗಳನ್ನು ಧರೆಗುರುಳಿಸುವ ಬಗ್ಗೆ ತಜ್ಞರು, ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಾಲಬ್ರೂಯಿ ಅತಿಥಿ ಗೃಹ ಪಾರಂಪರಿಕ ಕಟ್ಟಡವನ್ನು ಸಾಂವಿಧಾನಿಕ ಕ್ಲಬ್ (Constitution Club)ನ್ನಾಗಿ ಶಾಸಕರಿಗೆ ಪರಿವರ್ತಿಸಲಾಗುತ್ತಿರುವುದು ಶತಮಾನಗಳ ಕಾಲದ ಮರಗಳನ್ನು ಧರೆಗುರುಳಿಸುವ ಬಗ್ಗೆ ತಜ್ಞರು, ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಈ ಉದ್ದೇಶಿತ ಸಾಂವಿಧಾನಿಕ ಕ್ಲಬ್ ದೆಹಲಿಯಲ್ಲಿರುವ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾಕ್ಕೆ ಮಾದರಿಯಾಗಿರುತ್ತದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಪಾರಂಪರಿಕ ಕಟ್ಟಡದಲ್ಲಿ ಹೆಚ್ಚಿನ ಬದಲಾವಣೆ ಮಾಡದೆ ಪರಿವರ್ತಿಸಲಾಗುತ್ತದೆ.ಆದರೆ ಇದು ಪರಿಸರವಾದಿಗಳು, ಪಾರಂಪರಿಕ ಸ್ಥಳಗಳು, ಕಟ್ಟಡಗಳ ಸಂರಕ್ಷಣಕಾರರಿಗೆ ಆತಂಕವನ್ನುಂಟುಮಾಡಿದ್ದು, ಯಾವುದೇ ಪ್ರಮುಖ ಬದಲಾವಣೆ ಮಾಡದಿದ್ದರೂ ಪಾರ್ಕಿಂಗ್ ಮತ್ತು ಇತರ ವ್ಯವಸ್ಥೆಗಳಿಗೆ ಮರಗಳನ್ನು ಕಡಿಯಲಾಗುತ್ತದೆ.

ಬೆಂಗಳೂರಿನಲ್ಲಿರುವ ಸಂವಿಧಾನ ಕ್ಲಬ್‌ನ ಪುನರುಜ್ಜೀವನಕ್ಕೆ ರಾಜ್ಯ ಸರ್ಕಾರವು ಚಾಲನೆ ನೀಡಿದೆ, ಇದು ಶಾಸಕರು ಮತ್ತು ಸಂಸದರಿಗೆ ವಿಶ್ರಾಂತಿ ಮಾಡಲು, ಪುನಶ್ಚೇತನಗೊಳಿಸಲು ಮತ್ತು ಚರ್ಚಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಐಎಎಸ್ ಅಧಿಕಾರಿಗಳು, ಪ್ರೆಸ್ ಕ್ಲಬ್ ಮತ್ತು ಇತರರಿಗಾಗಿ ಕ್ಲಬ್‌ಗಳಿವೆ ಎಂದು ಹೇಳಿದ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, "ಸುತ್ತಮುತ್ತಲಿನ ಪ್ರದೇಶಗಳಿಗೆ ತೊಂದರೆಯಾಗದಂತೆ ಮತ್ತು ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು ಅದನ್ನು ಮಾರ್ಪಾಡು ಮಾಡುತ್ತೇವೆ ಎಂದಿದ್ದಾರೆ.

ಬಾಲಬ್ರೂಯಿಯನ್ನು 1850 ರಲ್ಲಿ 14 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು. ಆಗಿನ ಮೈಸೂರು ರಾಜ್ಯದಲ್ಲಿ ಸುದೀರ್ಘ ಕಾಲ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಮಾರ್ಕ್ ಕಬ್ಬನ್ ಅವರು ಐರಿಶ್ ಸಮುದ್ರದ ದ್ವೀಪದಲ್ಲಿ ತಮ್ಮ ಊರಿನಲ್ಲಿರುವ ರಚನೆಯನ್ನು ನಿರ್ಮಿಸಲು ಬಯಸಿದ್ದರು. ಇಲ್ಲಿ 100 ವರ್ಷಗಳಿಗೂ ಹಳೆಯ ಸುಮಾರು 150 ವಿವಿಧ ಮರಗಳಿವೆ ಎಂದು ಪರಿಸರವಾದಿಗಳು ಹೇಳುತ್ತಾರೆ.

ಖ್ಯಾತ ಪರಿಸರವಾದಿ ಎ ಎನ್ ಯಲ್ಲಪ್ಪ ರೆಡ್ಡಿ, ಬಾಲಬ್ರೂಯಿ ಅತಿಥಿಗೃಹವು ಬೆಂಗಳೂರಿನಲ್ಲಿ ಅತಿದೊಡ್ಡ ನೀರಿನ ಗೋಪುರವಾಗಿದೆ. ಅದರ ಎತ್ತರ ಮತ್ತು ಬೃಹತ್ ಪ್ರಮಾಣದ ಮರಗಳು ದೊಡ್ಡ ಪ್ರಮಾಣದ ಮಳೆ ನೀರನ್ನು ಹೀರಿಕೊಳ್ಳುತ್ತದೆ. ಶತಮಾನದಷ್ಟು ಹಳೆಯದಾದ ಮರಗಳು 40 ಅಡಿ ಉದ್ದಕ್ಕೂ ಬೇರುಗಳನ್ನು ಹರಡಿವೆ. ಎತ್ತರದ ಕಾರಣ ಕಟ್ಟಡವನ್ನು ನಿರ್ಮಿಸಲು ಸ್ಥಳವನ್ನು ಆಯ್ಕೆ ಮಾಡಲಾಗಿದೆ ಮತ್ತು ಒಂದು ವರ್ಷದಲ್ಲಿ 10 ಕ್ಕಿಂತ ಹೆಚ್ಚು ಬಾರಿ ಒಂದು ಗಂಟೆಯಲ್ಲಿ ಕನಿಷ್ಠ 50 ಮಿಮೀ ಮಳೆಯಾಗುತ್ತದೆ. ಈ ಪ್ರದೇಶವು ಕನಿಷ್ಠ 14 ಮಿಲಿಯನ್ ಲೀಟರ್ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಯಾವುದೇ ಹೊಸ ನಿರ್ಮಾಣ ಅಥವಾ ಮರಗಳನ್ನು ಕಡಿಯುವುದರಿಂದ ಇಡೀ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಮಳೆನೀರು ರಸ್ತೆಗಳಿಗೆ ಬಂದು ಪ್ರವಾಹಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಪಾರಂಪರಿಕ ಬಾಲಬ್ರೂಯಿಯನ್ನು ಶಾಸಕರ ಕ್ಲಬ್ ಆಗಿ ಪರಿವರ್ತಿಸುವ ಬದಲು, ಅದನ್ನು ಬೇರೆಡೆ ತೆರೆದ ಭೂಮಿಯಲ್ಲಿ ನಿರ್ಮಿಸಬಹುದು ಎಂದು ಪರಿಸರವಾದಿಗಳು ಹೇಳುತ್ತಾರೆ. ಬಾಲಬ್ರೂಯಿಯಲ್ಲಿ ಸರ್ ಎಂ ವಿಶ್ವೇಶ್ವರಯ್ಯ, ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್, ಜವಾಹರಲಾಲ್ ನೆಹರು ಮೊದಲಾದವರು ವಾಸ್ತವ್ಯ ಹೂಡಿದ್ದರು. ಮೈಸೂರು ರಾಜ್ಯದ ಮೊದಲ ಕೆಲವು ಮುಖ್ಯಮಂತ್ರಿಗಳು - ಕೆ ಸಿ ರೆಡ್ಡಿ, ಬಿ ಡಿ ಜತ್ತಿ, ಎಸ್ ನಿಜಲಿಂಗಪ್ಪ, ಡಿ ದೇವರಾಜ್ ಅರಸ್ ಮೊದಲಾದವರು ತಮ್ಮ ಅಧಿಕೃತ ನಿವಾಸವನ್ನಾಗಿ ಮಾಡಿಕೊಂಡಿದ್ದರು. ಎಸ್ ಆರ್ ಬೊಮ್ಮಾಯಿ ಕೂಡ ಸಿಎಂ ಆಗಿದ್ದಾಗ ಅಲ್ಲೇ ಉಳಿದಿದ್ದರು. 

ಆದರೆ, ಅವರು ಸಿಎಂ ಅಧಿಕಾರ ಕಳೆದುಕೊಂಡ ನಂತರ, ಇತರ ಸಿಎಂಗಳು ಈ ಸ್ಥಳಕ್ಕೆ ಆದ್ಯತೆ ನೀಡಲಿಲ್ಲ. ಇದನ್ನು ಕ್ಲಬ್ ಆಗಿ ಪರಿವರ್ತಿಸಿದರೆ, ನೂರಾರು ಕಾರುಗಳು ಬರುತ್ತವೆ, ಪಾರ್ಕಿಂಗ್ ಜಾಗಕ್ಕೆ ಮರಗಳನ್ನು ಕಡಿಯುವುದು ಆತಂಕಕಾರಿ ಎನ್ನುತ್ತಾರೆ ಪರಿಸರವಾದಿಗಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT