ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಆರ್ಟ್ ವಿಡಿಯೋ ವಾಲ್ (ಗೋಡೆ) 
ರಾಜ್ಯ

ಭಾರತದಲ್ಲಿ ಮೊದಲು: ಭದ್ರತೆಯನ್ನು ಹೆಚ್ಚಿಸುವ 'ಆರ್ಟ್ ವಿಡಿಯೋ ವಾಲ್' ಕೆಎಸ್ ಆರ್ ರೈಲ್ವೆ ನಿಲ್ದಾಣಕ್ಕೆ ಬೆಲ್ಜಿಯಂ ನಿಂದ ಆಮದು

ಭದ್ರತೆಯನ್ನು ಹೆಚ್ಚಿಸುವ ಆರ್ಟ್ ವಿಡಿಯೋ ವಾಲ್ (ಗೋಡೆ)ಯನ್ನು ಬೆಲ್ಜಿಯಂ ನಿಂದ ಆಮದು ಮಾಡಿಕೊಳ್ಳಲಾಗಿದ್ದು ರೈಲ್ವೆ ಭದ್ರತಾ ಪಡೆ (ಆರ್ ಪಿಎಫ್) ನ್ ಸೈಬರ್ ಸೆಲ್ ನ ಆವರಣದಲ್ಲಿ ಅಳವಡಿಸಲಾಗಿದೆ. 

ಬೆಂಗಳೂರು: ಭದ್ರತೆಯನ್ನು ಹೆಚ್ಚಿಸುವ ಆರ್ಟ್ ವಿಡಿಯೋ ವಾಲ್ (ಗೋಡೆ)ಯನ್ನು ಬೆಲ್ಜಿಯಂ ನಿಂದ ಆಮದು ಮಾಡಿಕೊಳ್ಳಲಾಗಿದ್ದು ರೈಲ್ವೆ ಭದ್ರತಾ ಪಡೆ (ಆರ್ ಪಿಎಫ್) ನ್ ಸೈಬರ್ ಸೆಲ್ ನ ಆವರಣದಲ್ಲಿ ಅಳವಡಿಸಲಾಗಿದೆ. 

ಈ ಗೋಡೆ ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ಭದ್ರತೆಯ ವರ್ಧಿತ ಪದರವನ್ನು ನೀಡಲಿದ್ದು ದೇಶದಲ್ಲಿ ಇಂಥಹದ್ದೊಂದು ಪ್ರಯೋಗ ಇದೇ ಮೊದಲಾಗಿದೆ. 

16 ಅಡಿ ಉದ್ದ 10 ಅಡಿ ಅಗಲ ಅಳತೆಯಿರುವ ಈ ಗೋಡೆಗೆ 16 ವಿಂಡೋಗಳಿದ್ದು ಏಕ ಕಾಲಕ್ಕೆ ರೈಲ್ವೆ ನಿಲ್ದಾಣದಾದ್ಯಂತ ವಿವಿಧ ಭಾಗಗಳಲ್ಲಿ ಕಣ್ಗಾವಲು ವಹಿಸುವುದಕ್ಕೆ ಸಹಕಾರಿಯಾಗಲಿದ್ದು ಕೃತಕ ಬುದ್ಧಿಮತ್ತೆ ಆಧರಿತ ಚಾಲನೆಯನ್ನು ಹೊಂದಿದೆ. ಅರ್ ಪಿಎಫ್ ಈ ವ್ಯವಸ್ಥೆಯ ಕಮಾಂಡ್ ನಿಯಂತ್ರಣ ಕೇಂದ್ರವನ್ನು ನಿಭಾಯಿಸಲಿದೆ. 

ಹಿರಿಯ ಭದ್ರತಾ ಅಧಿಕಾರಿ ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದು,  ಈ ಹೊಸ ವ್ಯವಸ್ಥೆ ಆರ್ ಪಿಎಫ್ ಪ್ನ್ ( ಓಮ್ನಿಪ್ರೆಸೆಂಟ್ ನೆಟ್ವರ್ಕ್ ಎನ್ಸೆಂಬಲ್) ನ ಭಾಗವಗಿದ್ದು 2.2 ಕೋಟಿ ರೂಪಾಯಿ ವೆಚ್ಚದಲ್ಲಿ ಅಳವಡಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. 

ಸೆಪ್ಟೆಂಬರ್ ನ ಮೊದಲ ವಾರದಲ್ಲಿ ಈ ಗೋಡೆಯನ್ನು ಅಳವಡಿಸಲಾಗಿದೆ. ಫೇಶಿಯಲ್ ರೆಕಗ್ನಿಷನ್ ಗೆ ಸಿಸಿಟಿವಿ ಕ್ಯಾಮರಾವನ್ನು ಬಳಕೆ ಮಾಡಲಾಗುತ್ತದೆ. ಪೊಲೀಸರು ಧರಿಸುವ ಬಾಡಿ ಕ್ಯಾಮರಾಗಳು, ಬ್ಯಾಗೇಜ್ ಸ್ಕ್ಯಾನರ್ ಗಳು, ವಾಹನತಪಾಸಣೆ ಒಂದು ಭಾಗದಲ್ಲಿರಲಿದೆ. ಆಲ್ಗರಿದಂ ಫೀಡ್ ನ ಆಧಾರದಲ್ಲಿ 24*7 ಚಿತ್ರಗಳನ್ನು ಸೆರೆಹಿಡಿಯಲಾಗುತ್ತದೆ. ಆರ್ ಪಿಎಫ್ ನೊಂದಿಗೆ ಯೋಜನೆಗಾಗಿ ಗುತ್ತಿಗೆ ಒಪ್ಪಂದ ಮಾಡಿಕೊಂಡಿದ್ದ ಸಂಸ್ಥೆಯಿಂದ ಈ ಭದ್ರತಾ ಗೋಡೆಯನ್ನು ಆಮದು ಮಾಡಿಕೊಳ್ಳಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT