ರಾಜ್ಯ

ಹೊಸ ಪಡಿತರ ಕಾರ್ಡ್ ಕೊಡಲು ಸರ್ಕಾರ ಪುನಾರಂಭ: ಆದ್ಯತೆ ಮೇರೆಗೆ ವಿತರಿಸಲು ನಿರ್ಧಾರ

Shilpa D

ಬೆಂಗಳೂರು: ಬಿಪಿಎಲ್ ವರ್ಗಕ್ಕೆ ಅನರ್ಹರೆಂದು ಲಕ್ಷಾಂತರ ಪಡಿತರ ಕಾರ್ಡ್ ಗಳನ್ನು ರದ್ದುಗೊಳಿಸಿದ ನಂತರ ಮತ್ತೆ ಸರ್ಕಾರ ರೇಷನ್ ಕಾರ್ಡ್ ನೀಡಲು ಆರಂಭಿಸಿದೆ.

ಸರ್ಕಾರಿ ಕೆಲಸ ಮತ್ತು ವಾರ್ಷಿಕವಾಗಿ 1.2 ಲಕ್ಷ ರು ಆದಾಯ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎಂದು ಸರ್ಕಾರ ಹೇಳಿತ್ತು.

ಸರ್ಕಾರದ ಆದೇಶದಂತೆ, ನಗರಗಳಲ್ಲಿನ ಶೇಕಡಾ 50 ರಷ್ಟು ಜನರಿಗೆ ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಬಹುದು. ಹೊಸ ಪಡಿತರ ಚೀಟಿಗಳನ್ನು ನೀಡುವುದನ್ನು ಒಂದು ವರ್ಷದ ಹಿಂದೆ ನಿಂತುಹೋಗಿತ್ತು . ಈಗ, ನಿಧಾನವಾಗಿ ಆದ್ಯತೆಯ ಮೇರೆಗೆ ಕೆಲವು ವಿಭಾಗಗಳಿಗೆ ಹೊಸ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಇಲಾಖೆ ನಿಧಾನವಾಗಿ ಆರಂಭಿಸಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆಗಳ ಉಪ ನಿರ್ದೇಶಕಿ ಸೌಮ್ಯಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಅವರು ಅರ್ಹ ಅಭ್ಯರ್ಥಿಗಳನ್ನು ಗುರುತಿಸಬೇಕು ಮತ್ತು ಅಂತವರ ಪಟ್ಟಿಯನ್ನು ನೀಡಬೇಕೆಂದು  ಗೃಹ ಕಾರ್ಮಿಕರ ಒಕ್ಕೂಟವನ್ನು ಒತ್ತಾಯಿಸಿದರು, ನಗರದಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಮತ್ತು ದಿನನಿತ್ಯದ ಕೂಲಿ ಕಾರ್ಮಿಕರು ಹೊಸ ಪಡಿತರ ಚೀಟಿ ಪಡೆಯಲು ಹಿಂಜರಿಯುತ್ತಿದ್ದಾರೆ ಎಂದು ಸೌಮ್ಯ ಹೇಳಿದ್ದಾರೆ. ಆದರೆ ಕೊರೋನಾ ಸಾಂಕ್ರಾಮಿಕದ ನಂತರ, ಆಹಾರ ಅಭದ್ರತೆಯು ಒಂದು ಪ್ರಮುಖ ಕಾಳಜಿಯಾಗಿದೆ ಎಂದು ಹೇಳಿದ್ದಾರೆ.

SCROLL FOR NEXT