ರಾಜ್ಯ

ದೇವನಹಳ್ಳಿ ಏರ್ ಪೋರ್ಟ್ ನಲ್ಲಿ ಅಕ್ರಮ ಚಿನ್ನ ಸಾಗಣೆ: 4.9 ಕೆ.ಜಿ ಚಿನ್ನ ಕಸ್ಟಮ್ಸ್ ವಶ

Shilpa D

ಬೆಂಗಳೂರು: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 4.9 ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 2.3 ಕೋಟಿ ರು ಮೌಲ್ಯದ 4.944 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಶಾರ್ಜಾದಿಂದ ಹಾಗೂ ದುಬೈನಿಂದ ಆಗಮಿಸಿದ್ದ 18 ಪ್ರಯಾಣಿಕರ ವಿಚಾರಣೆ ವೇಳೆ ಅಕ್ರಮವಾಗಿ ಚಿನ್ನವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದೆ. ಇದು ಶಾರ್ಜಾದಿಂದ ಬೆಂಗಳೂರಿಗೆ ಏರ್ ಅರೇಬಿಯಾ ವಿಮಾನ (ಜಿ 9 496) ಮೂಲಕ ಪ್ರಯಾಣಿಸುತ್ತಿದ್ದರು.  ಅಕ್ಟೋಬರ್ 7 ರಂದು ಮುಂಜಾನೆ 3.40 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ
ನಿಲ್ದಾಣವನ್ನು ತಲುಪಿತು. ತಮಿಳುನಾಡಿನಿಂದ ಬಂದವರಾಗಿದ್ದು ಚಿನ್ನದ ಕಳ್ಳಸಾಗಣೆ ಮಾಡುತ್ತಿದ್ದರು. ತಮ್ಮ ಗುದದ್ವಾರದಲ್ಲಿ ಕ್ಯಾಪ್ಸೂಲ್‌ಗಳ ಒಳಗೆ ಚಿನ್ನವನ್ನು ಅಡಗಿಸಿಟ್ಟರು, ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ಹೇಳಿದರು.

ಪೇಸ್ಟ್ ಹಾಗೂ ಕಚ್ಚಾ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿತ್ತು. ಸದ್ಯ 4.944 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಅಂದಾಜು 2.35 ಕೋಟಿ ರೂ ಮೌಲ್ಯದ ಚಿನ್ನ ಜಪ್ತಿಮಾಡಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT