ರಾಜ್ಯ

4 ದಿನಂದಿಂದ ಸತತ ಐಟಿ ದಾಳಿ, ಇನ್ನೂ ಕೆಲವರಿಗೆ ನಡುಕ ಶುರು..!

Srinivasamurthy VN

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸತತ ನಾಲ್ಕನೇ ದಿನವೂ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಬೆಳಗ್ಗೆ 9 ಗಂಟೆ ನಂತರ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪನವರ ಆಪ್ತ ಉಮೇಶ್, ಚಾರ್ಟೆಡ್ ಅಕೌಂಟೆಂಟ್‍ಗಳು ಹಾಗೂ ಕಾಂಟ್ರಾಕ್ಟರ್‍ಗಳ ಮೇಲೆ ನಡೆದಿದ್ದ ದಾಳಿಯಲ್ಲಿ ಕೋಟ್ಯಂತರ ರೂ.ಅವ್ಯವಹಾರ ಪತ್ತೆಯಾಗಿದೆ ಎನ್ನಲಾಗುತ್ತಿದ್ದು, ಇದಕ ಮುಂದುವರೆದ ದಾಳಿ ಇದಾಗಿದೆ ಎನ್ನಲಾಗುತ್ತಿದೆ. 

ಹಲವು ಗುತ್ತಿಗೆದಾರರ ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುದ್ದು, ಸೋಮಶೇಖರ್, ಗುತ್ತಿಗೆದಾರ ಉಪ್ಪಾರ್ ಸೇರಿದಂತೆ ಹಲವರ ಮನೆ, ಕಚೇರಿಗಳಲ್ಲಿ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಉಪ್ಪಾರ್ ಕಚೇರಿ, ಬಸವೇಶ್ವರನಗರದಲ್ಲಿರುವ ಸೋಮಶೇಖರ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಹಿಂದೆ ತಡರಾತ್ರಿವರೆಗೂ ತನಿಖೆ ನಡೆಸಿ ತೆರಳಿದ್ದ ಐಟಿ ಅಧಿಕಾರಿಗಳು, ಇಂದು ಇನ್ನೋವಾ ಕಾರಿನಲ್ಲಿ ಆಗಮಿಸಿ ದಾಖಲೆಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಇಂದು ಸಂಜೆವರೆಗೂ ದಾಖಲೆಗಳ ಲೆಕ್ಕಾಚಾರ ಮತ್ತು ಪರಿಶೀಲನೆ ನಡೆಸುತ್ತಾರೆ ಎನ್ನಲಾಗಿದೆ.

ಇನ್ನು ರಾಹುಲ್ ಎಂಟರ್ಪ್ರೈಸ್​ನಲ್ಲಿ ಶೋಧ ಅಂತ್ಯವಾಗಿದೆ. ಸತತ ಮೂರು ದಿನಗಳ ಕಾಲ ಐಟಿ ದಾಳಿ ನಡೆದಿತ್ತು. ಸಹಕಾರನಗರದ ರಾಹುಲ್ ಎಂಟರ್ಪ್ರೈಸಸ್ ಕಚೇರಿಯಲ್ಲಿ ನಿರಂತರ ಮೂರು ದಿನ ಕಡತಗಳ ಪರಿಶೀಲನೆ ನಡೆದಿತ್ತು. ಸಿಮೆಂಟ್ ಮತ್ತು ಸ್ಟೀಲ್ ಡೀಲ್ ಸಂಬಂಧಿತವಾಗಿ ಶೋಧ ನಡೆಸಲಾಗಿತ್ತು. ವಿವಿಧ ಕಾಂಟ್ರಾಕ್ಟರ್​ಗಳಿಗೆ ಸಂಬಂಧಿಸಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿತ್ತು. ರಾಹುಲ್ ಎಂಟರ್ಪ್ರೈಸ್ ಹಲವು ಕಾಂಟ್ರಾಕ್ಟರ್​ಗಳಿಗೆ ಮೆಟಿರೀಯಲ್ ಸಪ್ಲೈ ಮಾಡಿತ್ತು. ಇದಕ್ಕೆ ಸಂಬಂಧಿಸಿ ಸತತ 60 ಗಂಟೆಗಳಿಗೂ ಅಧಿಕ ಸಮಯ ದಾಳಿ ನಡೆಸಿದ್ದಾರೆ. ನಿನ್ನೆ ರಾತ್ರಿ ದಾಳಿ ಮುಕ್ತಾಯಗೊಳಿಸಿ ಐಟಿ ಅಧಿಕಾರಿಗಳು ನಿರ್ಗಮಿಸಿದ್ದಾರೆ ಎನ್ನಲಾಗಿದೆ.

SCROLL FOR NEXT