ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಒಂದೇ ದಿನ 6 ಅಪ್ರಾಪ್ತ ಬಾಲಕರು ಸೇರಿ 7 ಮಂದಿ ನಾಪತ್ತೆ!

ಒಂದೇ ದಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 6 ಮಂದಿ ಅಪ್ರಾಪ್ತ ಬಾಲಕರು ಸೇರಿದಂತೆ 7 ಮಂದಿ ನಾಪತ್ತೆಯಾಗಿರುವ ಘಟನೆ ನಗರದಲ್ಲಿ ಭಾನುವಾರ ನಡೆದಿದೆ. 

ಬೆಂಗಳೂರು: ಒಂದೇ ದಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 6 ಮಂದಿ ಅಪ್ರಾಪ್ತ ಬಾಲಕರು ಸೇರಿದಂತೆ 7 ಮಂದಿ ನಾಪತ್ತೆಯಾಗಿರುವ ಘಟನೆ ನಗರದಲ್ಲಿ ಭಾನುವಾರ ನಡೆದಿದೆ. 

ಮೊದಲ ಪ್ರಕರಣ ಬಾಗಲಗುಂಟೆಯಲ್ಲಿ 15 ವರ್ಷದ ಮೂವರು ಮಕ್ಕಳು ಶನಿವಾರ ನಾಪತ್ತೆಯಾಗಿದ್ದಾರೆ. ಇವರು ಶೇಷಾದ್ರಿ ಲೇಔಟ್ ಮತ್ತು ಹೆಸರಘಟ್ಟ ಮುಖ್ಯರಸ್ತೆ ಹಾಗೂ ಸೌಂದರ್ಯ ಲೇಔಟ್ ನಿವಾಸಿಗಳಾಗಿದ್ದಾರೆಂದು ತಿಳಿದುಬಂದಿದೆ. 

ಮೂವರು ಖಾಸಗಿ ಶಾಲೆಯಲ್ಲಿ ಎಸ್ಎಸ್ಎಲ್'ಸಿ ಓದುತ್ತಿದ್ದು, ಸ್ನೇಹಿತರಾಗಿದ್ದಾರೆ. ಶನಿವಾರ ಬೆಳಿಗ್ಗೆ ಮೂವರು ಮಾರ್ನಿಂಗ್ ವಾಕ್ ಎಂದು ಹೋಗಿದ್ದು, ಮರಳಿ ಮನೆಗೆ ಬಂದಿಲ್ಲ. ಸಂಜೆವರೆಗೂ ಮೂವರು ಮಕ್ಕಳಿಗಾಗಿ ಪೋಷಕರು ಹುಡುಕಾಡಿದ್ದಾರೆ. ಆದರೆ, ಮಕ್ಕಳು ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ ನಡುವೆ ಮೂವರು ಬಾಲಕ ಮನೆಯಲ್ಲಿ ಪತ್ರ ಬರೆದಿಟ್ಟಿರುವುದು ಕಂಡು ಬಂದಿದೆ. ಕಬ್ಬಡ್ಡಿ ಆಟದಲ್ಲಿ ಹೆಸರು ಮಾಡಬೇಕಿತ್ತು, ಹೆಸರು ಹಾಗೂ ಹಣ ಗಳಿಸಿದ ಬಳಿಕವೇ ಮನೆಗೆ ಮರಳುವುದಾಗಿ ಓರ್ವ ಬಾಲಕ ಹೇಳಿದ್ದಾನೆ. ಮತ್ತೊಬ್ಬ ಬಾಲಕ ತನಗೆ ಓದಿನಲ್ಲಿ ಆಸಕ್ತಿಯಿಲ್ಲ, ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡುತ್ತೇನೆಂದು ಹೇಳಿದ್ದಾರೆ. ಮತ್ತೊಬ್ಬ ಬಾಲಕ ತನಗಾಗಿ ಹುಡುಕಾಡದಂತೆ ಹೇಳಿದ್ದಾನೆ. 

ಈ ಸಂಬಂಧ ಇದೀಗ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

ಮತ್ತೊಂದು ಪ್ರಕರಣ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಬ್ಬರು ಬಾಲಕರು, ಓರ್ವ ಬಾಲಕಿ ಹಾಗೂ ಬಿಸಿಎ ವ್ಯಾಸಾಂಗ ಮಾಡುತ್ತಿರುವ 21 ವರ್ಷದ ಯುವತಿ ನಾಪತ್ತೆಯಾಗಿದ್ದಾಳೆ. ಎಳ್ಲರು ಸೋಲದೇವನಹಳ್ಳಿಯಲ್ಲಿರುವ ಎಜಿಬಿ ಲೇಔಟ್ ನಲ್ಲಿರುವ ಅಪಾರ್ಟ್'ಮೆಂಟ್ ನಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. 

ಈ ಮಧ್ಯೆ ಮನೆಗಳಲ್ಲಿ ಚೀಟಿಯೊಂದು ಪತ್ತೆಯಾಗಿದ್ದು, ಚೀಟಿಯಲ್ಲಿ ಚಪ್ಪಲಿ, ಬ್ರಷ್, ಟೂತ್ ಪೇಸ್ಟ್, ನೀರಿನ ಬಾಟಲ್, ನಗದು ಮತ್ತು ಕ್ರೀಡಾ ವಸ್ತುಗಳು ಹಾಗೂ ಇತರೆ ವಸ್ತುಗಳನ್ನು ತಮ್ಮ ಜೊತೆ ಕೊಂಡೊಯ್ಯಬೇಕಂದು ಹೇಳಿರುವುದು  ಕಂಡು ಬಂದಿದೆ. 

ಇದೀಗ ಪೊಲೀಸರು ಎಲ್ಲಾ ಪೊಲೀಸ್ ಠಾಣೆಗೂ ಪ್ರಕರಣ ಸಂಬಂಧ ಮಾಹಿತಿ ರವಾನಿಸಿದ್ದು, ನಾಪತ್ತೆಯಾಗಿರುವ ಮಕ್ಕಳ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT