ರಾಜ್ಯ

ಬೆಂಗಳೂರು ರೈಲ್ವೆ ವಿಭಾಗ ಮತ್ತೊಂದು ಪರಿಸರ ಸ್ನೇಹಿ ಕ್ರಮದ ಮೂಲಕ 1 ಕೋಟಿ ರೂಪಾಯಿ ಉಳಿತಾಯ!

Srinivas Rao BV

ಬೆಂಗಳೂರು: ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ತುಮಕೂರು ಕಡೆಗೆ ಪರಿಸರ ಸ್ನೇಹಿ ಸೈಡಿಂಗ್ ನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ ರೈಲ್ವೆ ಕಾಂಕ್ರಿಟ್ ಸ್ಲೀಪರ್ ಗಳನ್ನು ಇದಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಪಾರ್ಸಲ್ ಸೈಡಿಂಗ್ ನ್ನು ಪಾರ್ಸಲ್ ಕಾರ್ಗೊ ಎಕ್ಸ್ ಪ್ರೆಸ್ ರೈಲುಗಳಿಗೆ ಲೋಡ್ ಮಾಡುವುದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಎಕ್ಸ್ ಪ್ರೆಸ್ ರೈಲುಗಳಿಗೆ ಶೀಘ್ರವೇ ಚಾಲನೆ ದೊರೆಯಲಿವೆ.

ಸೈಡಿಂಗ್ 150 ಮೀಟರ್ ಗಳಷ್ಟು ಉದ್ದವಿದ್ದು ಒಟ್ಟಾರೆ ಅಂದಾಜು 60.2 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ರೈಲ್ವೆ ಇಲಾಖೆ ಮಾಹಿತ ನೀಡಿದೆ.

ರೆಡ್ಯೂಸ್, ರಿಸೈಕಲ್ ಹಾಗೂ ರಿಯೂಸ್ ಎಂಬ 3 ಆರ್ ಗಳ  ರೈಲ್ವೆ ಉಪಕ್ರಮದ ಭಾಗವಾಗಿ ಈ ಸೈಡಿಂಗ್ ಗಳನ್ನು ನಿಮಾಣ ಮಾಡಲಾಗಿದೆ. ಇದರಿಂದಾಗಿ 1 ಕೋಟಿ ರೂಪಾಯಿಗಳನ್ನು ರೈಲ್ವೆ ಉಳಿಸುವುದಕ್ಕೆ ಸಾಧ್ಯವಿದೆ.

ರಾತ್ರಿ ವೇಳೆ ಲೋಡಿಂಗ್ ಗೆ ಸಹಕಾರಿಯಾಗುವ ನಿಟ್ಟಿನಲ್ಲಿ 100 ಡಬ್ಲ್ಯು ಪ್ಲಡ್ಡಿಂಗ್ ಫಿಟ್ಟಿಂಗ್ಸ್ ಗಳನ್ನು ಅಳವಡಿಕೆ ಮಾಡಲಾಗಿದೆ. ಈ ವಿಭಾಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಮೂರನೇ ಸೈಡಿಂಗ್ ಇದಾಗಿದೆ.  ಈ ಹಿಂದಿನ ಎರಡು ಸೈಡಿಂಗ್ ಸ್ಟೇಷನ್ ಗಳನ್ನು ಕರ್ನಾಟಕ ಹಾಗೂ ಪೆನುಕೊಂಡಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ.

SCROLL FOR NEXT