ರಾಜ್ಯ

ಬೆಂಗಳೂರು: ನಕಲಿ ಐಎಎಸ್ ಅಧಿಕಾರಿ ಬಂಧನ

Srinivasamurthy VN

ಬೆಂಗಳೂರು: ಬಹು ಜಾಣ್ಮೆಯಿಂದ ತಾನು ಹಿರಿಯ ಐ.ಎ.ಎಸ್ ಅಧಿಕಾರಿ ಎಂದು ಅಮಾಯಕರನ್ನು ವಂಚಿಸುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬೌರಿಂಗ್ ಅಸ್ಪತ್ರೆಯಲ್ಲಿ ಗುತ್ತಿಗೆ ನೌಕರನಾಗಿದ್ದ ಸಂದೀಪ್ ಎಂಬಾತ ಬಂಧಿತ ವ್ಯಕ್ತಿಯಾಗಿದ್ದು, ಈತ ಮಂಡ್ಯ ಮೂಲದವನು ಎಂದು ಗೊತ್ತಾಗಿದೆ. ತಾನೋರ್ವ ಐ.ಎ.ಎಸ್. ಅಧಿಕಾರಿ ಎಂದು ಹೇಳಿಕೊಂಡು ಓಡಾಡುತ್ತಿದ್ದ. ಈತನ ಮಾತು, ಹಾವಾಭಾವ, ಪೋಷಾಕು ನೋಡಿದವರು ಈತ ಹಿರಿಯ ಅಧಿಕಾರಿಯೇ ಇರಬೇಕು ಎಂದು ನಂಬಿಕೊಂಡು ಮೋಸ ಹೋಗುತ್ತಿದ್ದರು.

ಸದ್ಯ ಈ ಬಗ್ಗೆ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಚಿರಂಜೀವಿ, ಸಂದೀಪ್ ಎಂಬ ವ್ಯಕ್ತಿ ಜಾವೇದ್ ಅಕ್ತರ್ ಹೆಸರಲ್ಲಿ ನಕಲಿ ಸಹಿ ಮಾಡಿ, ನಕಲಿ ಆದೇಶ ಪತ್ರ ನೀಡಿದ್ದಾರೆ ಎಂದು ದೂರು ನೀಡಿದ್ದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ದೂರು ಆಧರಿಸಿ ಆರೋಪಿ ಸಂದೀಪ್ ನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

ಆರೋಗ್ಯ ಇಲಾಖೆ ಕಾರ್ಯದರ್ಶಿಗಳ ಸಹಿಯೇ ನಕಲು ಮಾಡುತ್ತಿದ್ದ ಭೂಪ
ಬಂಧಿತ ಸಂದೀಪ್ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಜಾವೇದ್ ಅಖ್ತರ್ ಸಹಿ ನಕಲು ಮಾಡಿ ವಂಚಿಸುತ್ತಿದ್ದ ಎಂದು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.  

ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ
ಆರೋಪಿ ಸಂದೀಪ್ ಆರೋಗ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಜಾವೇದ್ ಅಖ್ತರ್ ರ ಸಹಿ ನಕಲು ಮಾಡಿ ಜನರ ಬಳಿ ಹಣ ಪಡೆದು ವಂಚನೆ ಮಾಡಿದ್ದಾನೆ. ಸುಮಾರು 20ಕ್ಕೂ ಹೆಚ್ಚು ಜನ ಇವನ ಮಾತಿಗೆ ಮರುಳಾಗಿ ಹಣ ಕಳೆದುಕೊಂಡಿದ್ದಾರೆ.

ಬೌರಿಂಗ್ ಅಸ್ಪತ್ರೆಯಲ್ಲಿ ಹೊರ ಗುತ್ತಿಗೆ ನೌಕರನಾಗಿದ್ದ ಸಂದೀಪ್ ಅಲ್ಲಿ ಕೆಲಸ ಬಿಟ್ಟಿದ್ದ. ಬಳಿಕ ತಾನು ವಿಧಾನಸೌಧದಲ್ಲಿ ಉನ್ನತ ಹುದ್ದೆಯಲ್ಲಿರುವುದಾಗಿ ಹೇಳಿ ಹಲವು ಜನರಿಗೆ ನಂಬಿಸಿದ್ದ. ಬೌರಿಂಗ್ ಅಸ್ಪತ್ರೆಯ ಹೊರಗುತ್ತಿಗೆ ನೌಕರರಿಗೆ ಅಂದರೆ ತನ್ನ ಜೊತೆ ಕೆಲಸ ಮಾಡಿದ್ದವರಿಗೆ ಸಿಸ್ಟಮ್ ಅನಾಲಿಸ್ಟ್ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಖಾಯಂ ಕೆಲಸ ಕೊಡಿಸುವುದಾಗಿ ಹೇಳಿ ತಬ್ರೇಜ್ ಷರೀಫ್ ಎಂಬುವವರ ಬಳಿ 6 ಲಕ್ಷ ಹಣ ಪಡೆದು ವಂಚಿಸಿದ್ದ. ಈ ರೀತಿ ಸುಮಾರು 20ಕ್ಕೂ ಹೆಚ್ಚು ಜನರ ಬಳಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ.

SCROLL FOR NEXT