ರಾಜ್ಯ

ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಬೆಂಗಳೂರು ಪೊಲೀಸರಿಂದ 'ರಾಣಿ ಚೆನ್ನಮ್ಮ ಪಡೆ'

Shilpa D

ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಮಹಿಳಾ ಅಧಿಕಾರಿಗೊಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದೆ. 

ಬೆಂಗಳೂರು ನಗರ ಪೊಲೀಸ್ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹಾದೇವ್ ಜೋಶಿ ಅವರ ಕನಸಿನ ಕೂಸಾಗಿದ್ದು, ಈ ತಂಡಕ್ಕೆ ರಾಣಿ ಚನ್ನಮ್ಮ ಪಡೆ ಎಂದು ನಾಮಕರಣ ಮಾಡಲಾಗಿದೆ.

ಮಹಿಳೆಯರಿಂದ, ಮಹಳೆಯರಿಗಾಗಿ, ಮಹಿಳಯರಿಗೋಸ್ಕರ ರಾಣಿ ಚನ್ನಮ್ಮ ಪಡೆ ತಯಾರಾಗಿದ್ದು, ತರಬೇತಿ ಪಡೆದ 31 ಮಹಿಳಾ ಪೊಲೀಸ್ ಅಧಿಕಾರಿಗಳು ತಂಡದಲ್ಲಿರಲಿದ್ದಾರೆ. ಇಂದಿನ ಅನಿಶ್ಚಿತ ಕಾಲದಲ್ಲಿ ಮಹಿಳೆಯರನ್ನು ಹೆಚ್ಚು ಸ್ವಾವಲಂಬಿ ಮತ್ತು ಸ್ವತಂತ್ರರನ್ನಾಗಿ ಮಾಡುವ ಉದ್ದೇಶವಾಗಿದೆ.

ವಿಶೇಷ ತಂಡದ ಉದ್ದೇಶಗಳು ಮಹಿಳೆಯರಿಗೆ ಮೂಲಭೂತ ಸ್ವಯಂ-ರಕ್ಷಣಾ ತಂತ್ರಗಳ ಬಗ್ಗೆ ಶಿಕ್ಷಣ ನೀಡುವುದು ಮತ್ತು ತರಬೇತಿ ನೀಡುವುದು, ಜೊತೆಗೆ ಮಹಿಳೆಯರು ಮತ್ತು ಮಕ್ಕಳ ಸಂಬಂಧಿತ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು-'ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ, ಮತ್ತು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (NDPS) ಆಕ್ಟ್ ಇವುಗಳ ಬಗ್ಗೆ ಅರಿವು ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಬೆಳಗಾವಿ ಮೂಲದ ಡಿಸಿಪಿ ಜೋಶಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಮತ್ತು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿಯನ್ನೂ ಹಂಚಿಕೊಳ್ಳಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಚಿಕಿತ್ಸೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಕೂಡ ಯೋಜನೆಯ ಭಾಗವಾಗಿದೆ ಎಂದು ತಿಳಿಸಿದ್ದಾರೆ. ಈ ವಿಭಾಗವು ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಎನ್‌ಜಿಒಗಳು ಮತ್ತು ಇತರ ಸಂಸ್ಥೆಗಳೊಂದಿಗೆ ಸಹ ಸಹಯೋಗ ಹೊಂದಿದೆ.
 

SCROLL FOR NEXT