ಆರಗ ಜ್ಞಾನೇಂದ್ರ 
ರಾಜ್ಯ

ಸಿನಿಮಾ ಹಿಂದಿನ ಕಷ್ಟ ಗೊತ್ತರಲಿಲ್ಲ: ಮಾನಸಿಕರು ನೈತಿಕ ಪೊಲೀಸ್‌ಗಿರಿ ಮಾಡುತ್ತಾರೆ - ಆರಗ ಜ್ಞಾನೇಂದ್ರ

ಬೆಳಗಾವಿಯಲ್ಲಿ ನಡೆದ ನೈತಿಕ ಪೊಲೀಸ್‌ಗಿರಿಯಂತಹ ಘಟನೆಯನ್ನು ಖಂಡಿಸಿರುವ  ಗೃಹಸಚಿವ ಅರಗ ಜ್ಞಾನೇಂದ್ರ,ಮಾನಸಿಕ ಅಸ್ವಸ್ಥತೆಯಿರುವವರು ಇಂತಹ ಘಟನೆಗೆ ಕೈ ಹಾಕುತ್ತಾರೆ ಎಂದಿದ್ದಾರೆ.

ಬೆಂಗಳೂರು: ಬೆಳಗಾವಿಯಲ್ಲಿ ನಡೆದ ನೈತಿಕ ಪೊಲೀಸ್‌ಗಿರಿಯಂತಹ ಘಟನೆಯನ್ನು ಖಂಡಿಸಿರುವ  ಗೃಹಸಚಿವ ಅರಗ ಜ್ಞಾನೇಂದ್ರ,ಮಾನಸಿಕ ಅಸ್ವಸ್ಥತೆಯಿರುವವರು ಇಂತಹ ಘಟನೆಗೆ ಕೈ ಹಾಕುತ್ತಾರೆ ಎಂದಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ,ಈ ರೀತಿಯ ಘಟನೆಗಳನ್ನು ನಾವು ಸಹಿಸುವುದಿಲ್ಲ.ಬೆಳಗಾವಿ ಘಟನೆಗಳ ಬಗ್ಗೆ ಪೊಲೀಸರು ತನಿಖೆ ಮಾಡ್ತಿದ್ದಾರೆ ಅಲ್ಲದೆ ಒಬ್ಬನನ್ನಿ ಬಂಧಿಸಿದ್ದಾರೆ.ಪೊಲೀಸರು ಈ ವಿಚಾರವಾಗಿ ಕ್ರಮ ಕೈಗೊಳ್ಳುತ್ತಾರೆ.ಯಾವುದೇ ಧರ್ಮದವರಾಗಿದ್ದರೂ ಅವರಿಗೆ  ಶಿಕ್ಷೆ ಆಗುತ್ತದೆ.ಕೆಲವರು  ಮಾನಸಿಕವಾಗಿ ಆ‌‌ ರೀತಿ ಇರುತ್ತಾರೆ.ಪೊಲೀಸರು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಂಡಾಗ ಇಂತಹ ಘಟನೆಗಳು ಕಡಿಮೆ ಆಗುತ್ತವೆ ಎಂದರು.

ಪೊಲೀಸರು ಅನುಮತಿ ನೀಡುವಾಗ ಕಿರಿಕಿರಿ ಮಾಡಬೇಡದೇ ಅನುಮತಿ ನೀಡುವಾಗ ಅಗತ್ಯ ಕ್ರಮಗಳ ಬಗ್ಗೆ ತಿಳಿಸಿ.ಹಣದ ವ್ಯವಹಾರ ಇಲ್ಲಿ ನಡೆಯೋದು ಬೇಡ.ಎಲ್ಲವನ್ನು ನಿಭಾಯಿಸಿಕೊಂಡು ಕೆಲಸ ಮಾಡಬೇಕು ಎಂದು ಪೊಲೀಸರಿಗೆ ಗೃಹಸಚಿವರು ಸಲಹೆ ನೀಡಿದರು.

ಸಿನಿಮಾ ಹಿಂದಿನ ಕಷ್ಟ ಗೊತ್ತಿರಲಿಲ್ಲ
ಬೆಂಗಳೂರು: ತಮಗೆ ಸಿನಿಮಾ ನೋಡಿ ಮನರಂಜನೆ ಖುಷಿಪಟ್ಟಿದ್ದು ಗೊತ್ತೇ ವಿನಃ ಸಿನಿಮಾ ನಿರ್ಮಾಣದ ಹಿಂದಿನ‌ ಕಷ್ಟ ಗೊತ್ತಿರಲಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಪೈರಸಿ ಹಾವಳಿಗೆ ಸಿನಿಮಾ ಉದ್ಯಮ ತತ್ತರಿಸುತ್ತಿದ್ದು,ಪೈರಸಿ ಹಾವಳಿ ತಡೆಗೆ ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವುದಾಗಿ‌ ಭರವಸೆ ನೀಡಿದೆ. 

ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಗೆ ಭೇಟಿ ನೀಡಿ, ಮಂಡಳಿಯ ಪದಾಧಿಕಾರಿಗಳ ಜತೆ, ಕನ್ನಡ ಸಿನೆಮಾ ಇಂಡಸ್ಟ್ರಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಚರ್ಚೆ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!