ರಾಜ್ಯ

ರಾಹುಲ್ ಒಬ್ಬ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್ ಹೇಳಿಕೆ: ಕ್ಷಮೆಯಾಚಿಸುವಂತೆ ಬಿಜೆಪಿಗೆ ಕಾಂಗ್ರೆಸ್ ಆಗ್ರಹ

Manjula VN

ವಿಜಯಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಡ್ರಗ್ ಅಡಿಕ್ಟ್ ಹಾಗೂ ಡ್ರಗ್ ಪೆಡ್ಲರ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕ್ಷಮೆಯಾಚಿಸುವಂತೆ ಬುಧವಾರ ಆಗ್ರಹಿಸಿದೆ. 

ಸಿಂದಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು, ಕಟೀಲ್ ಅವರ ಹೇಳಿಕೆ ಕುರಿತು ತೀವ್ರವಾಗಿ ಕಿಡಿಕಾರಿದ್ದಾರೆ. 

ಇತರರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ ನೀಡುವ ಬದಲು ಬಿಜೆಪಿಯವರು ಗುಜರಾತ್ ನಲ್ಲಿರುವ ಅದಾನಿ ಬಂದರಿನಲ್ಲಿ ದೊರೆತ ರೂ.2 ಲಕ್ಷ ಕೋಟಿ ಮೌಲ್ಯದ ಡ್ರಗ್ಸ್ ಕಥೆ ಏನಾಯಿತು ಎಂಬುದನ್ನು ತಿಳಿಸಬೇಕಿದೆ. ಕಟೀಲ್ ಅವರು ಡ್ರಗ್ಸ್ ತೆಗೆದುಕೊಂಡಿರಬಹುದು. ಹೀಗಾಗಿಯೇ ಆ ಮತ್ತಿನಲ್ಲಿಯೇ ಈ ರೀತಿ ಮಾತನಾಡಿದ್ದಾರೆಂದು ಹೇಳಿದ್ದಾರೆ.
 
ರಾಹುಲ್ ಗಾಂಧಿ ವಿರುದ್ಧ ಇಂತರ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಬಿಜೆಪಿ ತನ್ನ ಮನಸ್ಥಿತಿ ಹಾಗೂ ಸಂಸ್ಕೃತಿಯನ್ನು ತೋರಿಸಿಕೊಟ್ಟಿದೆ. ಕರ್ನಾಟಕದ ಬಿಜೆಪಿ ನಾಯಕ ಸಂಸ್ಕೃತಿರಹಿತರಂತೆ ಹೇಳಿಕೆ ನೀಡಿದ್ದಾರೆ. ಕೂಡಲೇ ಹೇಳಿಕೆ ಕುರಿತು ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. 

ಈ ನಡುವೆ ಕಟೀಲ್ ಅವರ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೂಡ ತೀವ್ರವಾಗಿ ಖಂಡಿಸಿದ್ದಾರೆ.

SCROLL FOR NEXT