ಸಾಂದರ್ಭಿಕ ಚಿತ್ರ 
ರಾಜ್ಯ

ಉದ್ಯೋಗ ನಿಯಮ ವ್ಯಾಪ್ತಿಗೆ 'ಗಿಗ್' ಕಾರ್ಮಿಕರು: ವಾರದ ರಜೆ ಸೇರಿದಂತೆ ಹಲವು ಸೌಲಭ್ಯ! 

ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ ರಜೆ ಸೇರಿದಂತೆ, ವಿವಿಧ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದಾಗಿದೆ.

ಬೆಂಗಳೂರು: ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ ರಜೆ ಸೇರಿದಂತೆ, ವಿವಿಧ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದಾಗಿದೆ.

ದೇಶದಲ್ಲಿ ಹೊಸ ಹೊಸ ರೀತಿಯ ಉದ್ಯೋಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗದ ವ್ಯಾಖ್ಯಾನವನ್ನು  ಪರಿಷ್ಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

ಸದ್ಯದಲ್ಲೇ ಕೇಂದ್ರ ಸರ್ಕಾರ ರಾಷ್ಟ್ರೀಯ ಉದ್ಯೋಗ ನೀತಿ ಜಾರಿಗೆ ತರಲಿದ್ದು, ಉದ್ಯೋಗದ ವ್ಯಾಪ್ತಿಗೆ ಗಿಗ್ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಫ್ಲಾಟ್ ಫಾರಂ ಕಾರ್ಮಿಕರನ್ನು ಸೇರಿಸಲು ಚಿಂತನೆ ನಡೆಸಲಾಗಿದೆ.

ಈ ನಿಯಮ ಜಾರಿಯಾದರೇ ಓಲಾ, ಉಬರ್, ಜೊಮ್ಯಾಟೋ, ಸ್ವಿಗ್ಗಿ ಮುಂತಾದ ಆ್ಯಪ್ ಬೇಸ್ ನಲ್ಲಿ ಕೆಲಸ ಮಾಡುವ ನೌಕರರು ಇದರ ವ್ಯಾಪ್ತಿಗೆ ಬರಲಿದ್ದಾರೆ.  ಈ ನಿಯಮದಡಿ ಗಿಗ್ ಕಾರ್ಮಿಕರು ಕನಿಷ್ಟ ವೇತನ, ವಾರದ ರಜೆ , ಪಿಎಫ್ ಹಾಗೂ  ಇಎಸ್ ಐ ಸೌಲಭ್ಯ ಪಡೆಯಲಿದ್ದಾರೆ. 

ಪ್ರಸ್ತುತ, ಗಿಗ್ ಕೆಲಸಗಾರರು, ಆಹಾರ ವಿತರಣಾ ಏಜೆಂಟ್‌ಗಳು ಮತ್ತು ಮೊಬೈಲ್-ಅಪ್ಲಿಕೇಶನ್ ಆಧಾರಿತ ಚಾಲಕರು  ಕಂಪನಿಯ ಉದ್ಯೋಗಿಗಳಲ್ಲ-ಅವರಿಗೆ ಪ್ರತಿ ಡೆಲಿವರಿ ಮತ್ತು  ಟ್ರಿಪ್ ಗೆ ಹಣ ಪಾವತಿಸಲಾಗುತ್ತದೆ ಮತ್ತು ಅವರು ಇಂಧನದ ವೆಚ್ಚವನ್ನು ಭರಿಸಬೇಕಾಗಿದೆ.

ಕೇಂದ್ರ ಸರ್ಕಾರ ನೀತಿಯನ್ನು ಇನ್ನೂ ಅಂತಿಮಗೊಳಿಸಬೇಕಾಗಿದೆ,  ಕರ್ನಾಟಕವು ಮೊಬೈಲ್ ಆಧಾರಿತ ಟ್ಯಾಕ್ಸಿ/ಆಟೋರಿಕ್ಷಾ ಚಾಲಕರು, ವಿತರಣಾ ಏಜೆಂಟ್‌ಗಳು ಮತ್ತು ಆಹಾರ ವಿತರಣಾ ಏಜೆಂಟ್‌ಗಳ ಜಿಲ್ಲಾವಾರು ಸಮೀಕ್ಷೆಯನ್ನು ನಡೆಸುತ್ತೇವೆ.  ಫಲಾನುಭವಿಗಳು ಸರಿಯಾದ ಮಾಹಿತಿ ಹೊಂದಿದ್ದರೆ ಮಾತ್ರ ನಾವು ಅವರಿಗೆ ಸೌಲಭ್ಯಗಳನ್ನು ಒದಗಿಸಬಹುದು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಬಂಧಪಟ್ಟ ಇತರ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಮತ್ತು ಅಕ್ಟೋಬರ್ 30 ರ ಉಪಚುನಾವಣೆಯ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೆಬ್ಬಾರ್ ಹೇಳಿದರು. 

ಕಳೆದ ತಿಂಗಳು ಪ್ರಾರಂಭವಾದ ಅಸಂಘಟಿತ ಕಾರ್ಮಿಕರಿಗಾಗಿ ಕರ್ನಾಟಕದ 7 ಲಕ್ಷಕ್ಕೂ ಹೆಚ್ಚು ಜನರು ಇ-ಶ್ರಾಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ 1.6 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ ಎಂದು ಅಧಿವೇಶನದಲ್ಲಿ ಹೆಬ್ಬಾರ್ ಮಾಹಿತಿ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

SCROLL FOR NEXT