ಗಗನಚುಕ್ಕಿ ಜಲಪಾತ 
ರಾಜ್ಯ

ಗುರುತಿಸದಿರುವ ಪ್ರವಾಸಿ ತಾಣಗಳ ಜನಪ್ರಿಯತೆಗೆ, ಕಾವೇರಿ ನದಿಯಲ್ಲಿ ಜಲಕ್ರೀಡೆ ಸುಧಾರಣೆಗೆ ಪ್ರವಾಸೋದ್ಯಮ ಇಲಾಖೆ ಮುಂದು 

ಕರ್ನಾಟಕದಲ್ಲಿರುವ ಕಡಿಮೆ ಜನಪ್ರಿಯ ಮತ್ತು ಇನ್ನೂ ಗುರುತಿಸದಿರುವ ಪ್ರವಾಸಿ ತಾಣಗಳನ್ನು ಜನಪ್ರಿಯಗೊಳಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು ಕಾವೇರಿ ನದಿಯ ತಲಕಾಡಿನಲ್ಲಿ ಜಲಕ್ರೀಡೆ ಚಟುವಟಿಕೆಗಳನ್ನು ಮುನ್ನೆಲೆಗೆ ತರಲು ಕೆಲಸ ಮಾಡುತ್ತಿದೆ.

ಬೆಂಗಳೂರು:ಕರ್ನಾಟಕದಲ್ಲಿರುವ ಕಡಿಮೆ ಜನಪ್ರಿಯ ಮತ್ತು ಇನ್ನೂ ಗುರುತಿಸದಿರುವ ಪ್ರವಾಸಿ ತಾಣಗಳನ್ನು ಜನಪ್ರಿಯಗೊಳಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು ಕಾವೇರಿ ನದಿಯ ತಲಕಾಡಿನಲ್ಲಿ ಜಲಕ್ರೀಡೆ ಚಟುವಟಿಕೆಗಳನ್ನು ಮುನ್ನೆಲೆಗೆ ತರಲು ಕೆಲಸ ಮಾಡುತ್ತಿದೆ.

ಕರ್ನಾಟಕಕ್ಕೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮತ್ತು ಪ್ರವಾಸಿಗರಲ್ಲಿ ವಿಶೇಷವಾಗಿ ಬೆಂಗಳೂರಿಗರಲ್ಲಿ ಜನಪ್ರಿಯವಾಗುತ್ತಿರುವ ಜಲಕ್ರೀಡೆ ತಾಣಗಳನ್ನು ಗುರುತಿಸುವ ಯೋಜನೆಯ ಭಾಗವಾಗಿ, ಪ್ರವಾಸೋದ್ಯಮ ಇಲಾಖೆಯು ಪ್ರಯತ್ನಿಸುತ್ತಿದೆ. ಕೇರಳ ಮತ್ತು ಅಸ್ಸಾಂ ಮಾದರಿಯಲ್ಲಿ, ಮೀನುಗಾರಿಕೆ ಇಲಾಖೆಯೊಂದಿಗೆ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರಿಗೆ ಸುರಕ್ಷಿತವಾದ ಹೊಸ ಕೊರಾಕಲ್‌ಗಳನ್ನು ಪರಿಚಯಿಸಲು ಉತ್ಸುಕವಾಗಿದೆ. ಸಂಗಮ, ತಲಕಾಡು ಮತ್ತು ಕಾವೇರಿ ನದಿಯ ಸ್ಥಳಗಳಲ್ಲಿ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹ ಬಳಸಬಹುದಾಗಿದೆ.

ಹೊಗನೇಕಲ್ ಜಲಪಾತದ ಮಾರ್ಗದಲ್ಲಿ ಕರ್ನಾಟಕದಲ್ಲಿ ಕೂಡ ಜಲಕ್ರೀಡೆ ಚಟುವಟಿಕೆಗಳನ್ನು ಪ್ರವಾಸೋದ್ಯಮ ಇಲಾಖೆ ಉತ್ಸುಕವಾಗಿದೆ. ಜಲ ಕ್ರೀಡೆಗಳು ಹೆಚ್ಚು ಜನಪ್ರಿಯವಾಗಿರುವ ದಾಂಡೇಲಿ ಮತ್ತು ಗೋವಾ ಮಾದರಿಯಲ್ಲಿ ಈ ಪ್ರದೇಶದಲ್ಲಿ ಸೇವೆಗಳ ಗುಣಮಟ್ಟವನ್ನು ಸುಧಾರಿಸುವ ಕೆಲಸ ಮಾಡುತ್ತಿದೆ. ತಲಕಾಡು ಬೆಂಗಳೂರಿಗೆ ಹತ್ತಿರವಾಗಿರುವುದರಿಂದ, ಇದನ್ನು ದೊಡ್ಡ ಮಟ್ಟದಲ್ಲಿ ಇಲಾಖೆ ಮುಂದಾಗಿದೆ. ಶಾಲಾ ಮತ್ತು ಕಾಲೇಜುಗಳಿಂದ ತಲಕಾಡಿಗೆ ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸರ್ಕಾರದ ಚಟುವಟಿಕೆಗಳಿಗೆ ಸಾಕಷ್ಟು ಮಾನವ ಸಂಪನ್ಮೂಲ ಮತ್ತು ಆಡಳಿತಾತ್ಮಕ ಕೆಲಸಗಳಾಗಬೇಕು. ಇದನ್ನು ಗುತ್ತಿಗೆ ಮಾದರಿಯಲ್ಲಿ ಮಾಡಲು ಮುಂದಾಗಿದ್ದೇವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದರು.

ನಾವು ಕಡಿಮೆ ಜನಪ್ರಿಯತೆ ಹೊಂದಿರುವ ಸ್ಥಳಗಳನ್ನು ಜನಪ್ರಿಯಗೊಳಿಸಲು ಉತ್ಸುಕರಾಗಿದ್ದೇವೆ. ಇದಕ್ಕೆ ಅಧಿಕಾರಿಗಳ ಬೆಂಬಲ ಬೇಕು. ಅನ್ವೇಷಿಸಬಹುದಾದ ಸ್ಥಳಗಳ ಬಗ್ಗೆ ನಾಗರಿಕರು ಕೂಡ ಮಾಹಿತಿ ನೀಡಬಹುದು. ಇದಕ್ಕೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಕೂಡ ಜೊತೆಗೆ ಸಾಗಿದರೆ ಕೆಲಸ ಸುಗಮ ಮಾಡಬಹುದು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ಆರಂಭಿಕ ಸಮೀಕ್ಷೆಯ ಪ್ರಕಾರ, ಇಂತಹ ಕಡಿಮೆ ಜನಪ್ರಿಯತೆ ಹೊಂದಿರುವ ಮತ್ತು ಅನ್ವೇಷಿಸದಿರುವ ಸುಮಾರು 600-700 ಸ್ಥಳಗಳಿದ್ದು, ಪ್ರವಾಸಿಗರನ್ನು ಸೆಳೆಯಲು ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT