ರಾಜ್ಯ

ಕೊಡಗು: ಜವಾಹರ ನವೋದಯ ವಿದ್ಯಾಲಯದ 33 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್

Lingaraj Badiger

ಮಡಿಕೇರಿ: ಕೊಡಗಿನಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇತ್ತು, ಇದೀಗ ಶಿಕ್ಷಣ ಸಂಸ್ಥೆಯೊಂದರ 33 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ನಂತರ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ಮಡಿಕೇರಿ ತಾಲೂಕಿನ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ 33 ಶಾಲಾ ವಿದ್ಯಾರ್ಥಿಗಳಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸಂಸ್ಥೆಯು ಸೆಪ್ಟೆಂಬರ್ 20 ರಂದು ತರಗತಿಗಳನ್ನು ಪುನರಾರಂಭಿಸಿತು ಮತ್ತು ಜಿಲ್ಲೆಯಾದ್ಯಂತದ ವಿದ್ಯಾರ್ಥಿಗಳು ಆಫ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. 

ಆದರೆ, ಶಾಲೆಗೆ ವರದಿ ಮಾಡಿದ ಐದು ದಿನಗಳ ನಂತರ, 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅವರನ್ನು ಶಾಲಾ ಆಡಳಿತ ಮಂಡಳಿಯವರು ಆಸ್ಪತ್ರೆಗೆ ಕರೆದೊಯ್ದು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದರು. ಇಬ್ಬರು ವಿದ್ಯಾರ್ಥಿಗಳ ಫಲಿತಾಂಶ ಪಾಸಿಟಿವ್ ಬಂದಿದೆ. "ಇದರ ನಂತರ, 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಲಾಯಿತು ಮತ್ತು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಯಿತು. ಈ ವಿದ್ಯಾರ್ಥಿಗಳ ಫಲಿತಾಂಶ ನೆಗಟಿವ್ ಬಂದ ನಂತರ ನಾವು 10ನೇ ತರಗತಿಯ ತರಗತಿಗಳನ್ನು ಪುನರಾರಂಭಿಸಿದೆವು”ಎಂದು ಸಂಸ್ಥೆಯ ಪ್ರಾಂಶುಪಾಲರಾದ ಪಂಕಜಾಕ್ಷ್ ಅವರು ಹೇಳಿದ್ದಾರೆ.

ಅದೇನೇ ಇದ್ದರೂ, ಈ ಘಟನೆಯ ಒಂದು ತಿಂಗಳ ನಂತರ ಇನ್ನೂ ಇಬ್ಬರು ವಿದ್ಯಾರ್ಥಿಗಳಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡ ನಂತರ ಅವರಿಗೂ ಪಾಸಿಟಿವ್ ದೃಢಟ್ಟಿತ್ತು. “ಇದನ್ನು ಅನುಸರಿಸಿ, ಜಿಲ್ಲಾಡಳಿತದ ಬೆಂಬಲದೊಂದಿಗೆ ಎಲ್ಲಾ 279 ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಈ ಪೈಕಿ 33 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದ್ದು, ಅವರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವರು ಲಕ್ಷಣರಹಿತವಾಗಿದ್ದಾರೆ”ಎಂದು ಅವರು ತಿಳಿಸಿದ್ದಾರೆ.

ಪಾಸಿಟಿವ್ ಬಂದ ವಿದ್ಯಾರ್ಥಿಗಳು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಎಲ್ಲರೂ ಇದೆ ಜಿಲ್ಲೆಯವರು ಎಂದು ಪ್ರಾಂಶುಪಾಲರು ಹೇಳಿದ್ದಾರೆ.

SCROLL FOR NEXT