ರಾಜ್ಯ

ಕುಮಟಾ: ಬಾಂಬ್ ಮಾದರಿ ವಸ್ತು ಪತ್ತೆ, ಜನರಲ್ಲಿ ಆತಂಕ ಸೃಷ್ಟಿ

Manjula VN

ಕಾರವಾರ: ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಹಿಂಬದಿ ಬಾಂಬ್ ಮಾದರಿಯ ವಸ್ತು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ವಾಯುವಿಹಾರಕ್ಕೆ ತೆರಳಿದವರು ನೋಡಿ ಪೊಲೀಸರಿಗೆ ಈ ಕುರಿತು ಮತಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸ್ಥಳಕ್ಕೆ ಅಗ್ನಿಶಾಮಕ, ಶ್ವಾನದಳ, ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಆಕೃತಿ ಬಾಂಬ್ ರೂಪದಲ್ಲಿ ಇರುವುದರಿಂದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಶ್ವಾನ ದಳ ಹಾಗೂ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ. ಘಟನೆಯಿಂದ ಜನರಲ್ಲಿ ಆತಂಕ ಮನೆಮಾಡಿದೆ.

ವಿಧ್ವಂಸಕ ಕೃತ್ಯದ ಉದ್ದೇಶವೋ? ಅಥವಾ ಯಾರೋ ಕಿಡಿಗೇಡಿಗಳು ಡಮ್ಮಿ ಮಾಡಿಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ಸಮೀಪದಲ್ಲೇ ರೈಲ್ವೇ ನಿಲ್ದಾಣ ಇರುವುದರಿಂದ ವಿಧ್ವಂಸಕ ಕೃತ್ಯದ ಸಂದೇಹವೂ ವ್ಯಕ್ತವಾಗುತ್ತಿದೆ. ಈ ಪ್ರದೇಶವನ್ನು ಇದೀಗ ಪೊಲೀಸರು ಸಂಪೂರ್ಣವಾಗಿ ಬಂದ್ ಮಾಡಿದ್ದು, ಯಾರಿಗೂ ಈ ಪ್ರದೇಶದತ್ತ ತರಳಲು ಅವಕಾಶ ನೀಡಲಾಗಿಲ್ಲ.

ಈ ನಡುವೆ ಸ್ಥಳಕ್ಕೆ ಭೇಟಿ ನೀಡಿ ನೀಡಿದ ಶಿವಪ್ರಕಾಶ್ ದೇವರಾಜು ಅವರು ನಂತರ ಮಾತನಾಡಿ, ವಸ್ತವು ಬಾಂಬ್ ರೀತಿ ಕಾಣಿಸುತ್ತಿದೆ. ಆದರೆ, ಇದು ಸ್ಫೋಟಕ ವಸ್ತುವೇ ಅಥವಾ ಅಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಇದೀಗ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಕೂಡ ಆಗಮಿಸುತ್ತಿದ್ದು, ವರದಿ ಬಳಿಕ ಮುಂದಿನ ಕ್ರಮ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಘಟನೆ ಬೆನ್ನಲ್ಲೇ ಪೊಲೀಸರು ಸ್ಥಳದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಗಳಾರಾದರೂ ಓಡಾಟ ನಡೆಸುತ್ತಿದ್ದಲೇ ಎಂಬುದರ ಕುರಿತು ಸ್ಥಳೀಯರನ್ನು ಪ್ರಶ್ನಿಸುತ್ತಿದ್ದಾರೆ.

SCROLL FOR NEXT