ರಾಜ್ಯ

ಕನ್ನಡೇತರರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಐದು ಭಾಷೆ ಕಲಿಯಬಹುದು

Nagaraja AB

ಬೆಂಗಳೂರು: ಭಾಷೆಗಳ ಆಯ್ಕೆಯೊಂದಿಗೆ ಯಾರೇ ಆಗಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಐದು ಭಾಷೆಗಳನ್ನು ಕಲಿಯಬಹುದು ಎಂದು ಕುಲಪತಿ ಕೆ.ಆರ್. ವೇಣುಗೋಪಾಲ್ ಹೇಳಿದ್ದಾರೆ. 

ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಎನ್ ಇ ಪಿ 2020 ವಿಷನ್ ಟು ಆಕ್ಸ್ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಕುಲಪತಿ,  ಒಂದನೇ ತರಗತಿಯಿಂದ 12ನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ನಾಲ್ಕು ಸೆಮಿಸ್ಟರ್ ಗಳಲ್ಲಿ ಕಡ್ಡಾಯವಾಗಿ ಕನ್ನಡ ಇರುತ್ತದೆ. ಅಲ್ಲದೇ, ಎರಡು ಸೆಮಿಸ್ಟರ್ ಅಥವಾ ನಾಲ್ಕು ಸೆಮಿಸ್ಟರ್ ಗಳಲ್ಲಿ ಬೇರೆ ಭಾಷೆಯನ್ನು ಕೂಡಾ ಅವರ ಆಯ್ಕೆ ಮಾಡಿಕೊಳ್ಳಬಹುದು ಎಂದರು.

ಕೇವಲ ಎರಡು ಸೆಮಿಸ್ಟರ್ ಗಳಿಗಾಗಿ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಲು ಆಯ್ಕೆ ಮಾಡಿಕೊಳ್ಳಬಹುದು , ಮೂರು ಹಾಗೂ ನಾಲ್ಕನೇ ಸೆಮಿಸ್ಟರ್ ಗಾಗಿ ತೃತೀಯ ಭಾಷೆಯಾಗಿ ಅವರು ಅಧ್ಯಯನ ಮಾಡಬಹುದು ಎಂದರು.

ಈ ಸಂದರ್ಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ವೇಣುಗೋಪಾಲ್, ಕನ್ನಡಿಗರೇತರರು, ಮೊದಲ ಅಥವಾ ಎರಡನೇ ಸೆಮಿಸ್ಟರ್ ನಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬಹುದು. ಪರ್ಯಾಯ ಸೆಮಿಸ್ಟರ್ ನಲ್ಲಿ ಅರಬಿಕ್ ಅಥವಾ ಹಿಂದಿಯಂತಹ ಇತರ ಭಾಷೆ ಆಯ್ಕೆ ಮಾಡಿಕೊಳ್ಳಬಹುದು ಎಂದರು.

ದ್ವಿತೀಯ ವರ್ಷದಲ್ಲಿ  ಅವರು ಸಂಪೂರ್ಣವಾಗಿ ಬೇರೆ ಭಾಷೆ ಕಲಿಯುತ್ತಾರೆ. ಇದರಲ್ಲಿ ಮೂರು ಭಾಷೆಗಳ ಎಣಿಕೆಯಾಗುತ್ತದೆ. ಈ ಮಧ್ಯೆ ಮೊದಲ ಎರಡು ಸೆಮಿಸ್ಟರ್ ಗಳಿಗಾಗಿ ಎರಡು ಭಾಷೆಗಳನ್ನು ಮತ್ತು ಮೂರು ಮತ್ತು ನಾಲ್ಕನೆ ಸೆಮಿಸ್ಟರ್ ಗಾಗಿ ಐದನೇ ಭಾಷೆ ಆಯ್ಕೆ ಮಾಡಿಕೊಳ್ಳಬಹುದೆಂದರು.

ಈ ಮಧ್ಯೆ ಅಕ್ಟೋಬರ್ 21 ರಿಂದ ತರಗತಿಗಳು ಆರಂಭವಾಗಿದ್ದರೂ,  ಎನ್ ಇಪಿ ಅನುಷ್ಠಾನಕ್ಕೆ ಖಾಸಗಿ ಕಾಲೇಜ್ ಗಳು ಈಗಲೂ ಆತಂಕವಿದೆ. ಅಕ್ಟೋಬರ್ 16 ರಂದು ಸಿಲಬಸ್ ಬಂದಿದ್ದರೂ, ಉತ್ತರ ಸಿಗದ ಅನೇಕ ಪ್ರಶ್ನೆಗಳಿರುವುದಾಗಿ ಖಾಸಗಿ ಕಾಲೇಜು ಉಪನ್ಯಾಸಕರ ಸಂಘ ವಿಶ್ವವಿದ್ಯಾನಿಲಯಕ್ಕೆ ಹೇಳಿದೆ.  
 

SCROLL FOR NEXT