ರಾಜ್ಯ

ರಾಜ್ಯದಲ್ಲಿ ಮುಂದುವರೆದ ಕೊರೋನಾ ಏರಿಳಿತ: ಬೆಂಗಳೂರಿನಲ್ಲಿ 319 ಸೇರಿ ಇಂದು 1,240 ಪ್ರಕರಣ ಪತ್ತೆ; 22 ಸಾವು!

Vishwanath S

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಏರಿಳಿತ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ 1,240 ಕೊರೋನಾ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 29,49,468ಕ್ಕೆ ಏರಿಕೆಯಾಗಿದೆ.

ಮಹಾಮಾರಿಗೆ ಇಂದು 22 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 37,361ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಬೆಂಗಳೂರಿನಲ್ಲಿ ಇಂದು 319 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,38,515ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಇಂದು 1,252 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,96,079ಕ್ಕೆ ಏರಿಕೆಯಾಗಿದೆ. ಇನ್ನು 18,378 ಸಕ್ರೀಯ ಪ್ರಕರಣಗಳಿವೆ. 

ರಾಜ್ಯಾದ್ಯಂತ ಇಂದು 1,65,386 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 1,240 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 0.74ಕ್ಕೆ ಇಳಿದಿದೆ.

SCROLL FOR NEXT