(ಸಾಂಕೇತಿಕ ಚಿತ್ರ) 
ರಾಜ್ಯ

ಕೋವಿಡ್ ನಿಂದ ರಾಜ್ಯದಲ್ಲಿ 115 ಮಕ್ಕಳು ಅನಾಥ; ಬಾಲ ಸೇವಾ ಯೋಜನೆಗೆ 113 ಮಕ್ಕಳು ಅರ್ಹ!

ಕೋವಿಡ್-19 ಮಕ್ಕಳ ಮೇಲೆ ತೀವ್ರವಾದ ಪರಿಣಾಮ ಬೀರಿದ್ದು, ಈ ಸಾಂಕ್ರಾಮಿಕದ ಕಾರಣದಿಂದಾಗಿ ಹಲವಾರು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. 

ಬೆಂಗಳೂರು: ಕೋವಿಡ್-19 ಮಕ್ಕಳ ಮೇಲೆ ತೀವ್ರವಾದ ಪರಿಣಾಮ ಬೀರಿದ್ದು, ಈ ಸಾಂಕ್ರಾಮಿಕದ ಕಾರಣದಿಂದಾಗಿ ಹಲವಾರು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. 

ಸರ್ಕಾರಿ ಅಂಕಿ-ಅಂಶಗಳ ಪ್ರಕಾರ 115 ಮಕ್ಕಳು 2020 ರ ಮಾರ್ಚ್ 1 ರಿಂದ ಈ ವರ್ಷ ಆಗಸ್ಟ್ ವರೆಗೆ ಕೋವಿಡ್-19 ನಿಂದಾಗಿ ಅನಾಥರಾಗಿದ್ದಾರೆ. 

ಇಬ್ಬರು ಮಕ್ಕಳನ್ನು ಹೊರತುಪಡಿಸಿ- (ಮಕ್ಕಳ ಆರೈಕೆ ಸಂಸ್ಥೆ ಸಿಸಿಐ) ನಲ್ಲಿ ಇರಿಸಲಾಗಿದ್ದು ಉಳಿದವರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಆ ಮಕ್ಕಳ ಕುಟುಂಬ ಸದಸ್ಯರಿಗೆ ಒಪ್ಪಿಸಿದೆ. 115 ಮಕ್ಕಳಲ್ಲಿ 113 ಮಕ್ಕಳು ಬಾಲ ಸೇವಾ ಯೋಜನೆಗೆ ಅರ್ಹರಾಗಿದ್ದಾರೆ. ಬಾಲ ಸೇವಾ ಯೋಜನೆಯನ್ನು ಕೋವಿಡ್-19 ನಿಂದ ಅನಾಥರಾದ ಮಕ್ಕಳಿಗಾಗಿ ಈ ವರ್ಷ ಮೇ ತಿಂಗಳಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. 

103 ಮಕ್ಕಳಿಗೆ ಈ ಯೋಜನೆಯಡಿ ಆರ್ಥಿಕ ನೆರವನ್ನು ನೀಡುವುದು ಪ್ರಾರಂಭವಾಗಿದ್ದು, ಉಳಿದ 10 ಮಕ್ಕಳಿಗೆ ಆರ್ಥಿಕ ನೆರವು ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕೃತ ಅಂಕಿ-ಅಂಶಗಳ ಪ್ರಕಾರ ಬೆಂಗಳೂರು ನಗರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಕ್ಕಳು 12 ಅನಾಥರಾಗಿದ್ದು, ನಂತರದ ಸ್ಥಾನದಲ್ಲಿ ಕೋಲಾರ-7, ಬೀದರ್, ಯಾದಗಿರಿ, ಹಾಸನದಲ್ಲಿ 6 ಮಂದಿ, ಬಾಗಲಕೋಟೆ, ತುಮಕೂರು, ಶಿವಮೊಗ್ಗ, ಗದಗ, ದಕ್ಷಿಣ ಕನ್ನಡಗಳಲ್ಲಿ ತಲಾ 5, ಧಾರವಾಡ, ಕೊಡಗು, ಮೈಸೂರು, ರಾಮನಗರಗಳಲ್ಲಿ ತಲಾ 4, ವಿಜಯಪುರ, ದಾವಣಗೆರೆ, ಚಿತ್ರದುರ್ಗಗಳಲ್ಲಿ ತಲಾ 2, ಮಂಡ್ಯ, ಬೆಳಗಾವಿ, ಬಳ್ಳಾರಿಯಲ್ಲಿ ತಲಾ 3, ಚಾಮರಾಜನಗರ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರಿನಲ್ಲಿ ತಲಾ 1 ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಬಾಲ ಸೇವಾ ಯೋಜನೆಗಳು ಕೇಂದ್ರ ಸರ್ಕಾರದ ಸಲಹೆಗಳ ಆಧಾರದಲ್ಲಿ ರೂಪಿಸಲಾಗಿದ್ದು, ಮಕ್ಕಳಿಗೆ ಪದವಿ ಪೂರ್ಣಗೊಳಿಸುವವರೆಗೂ ಮಾಸಿಕ 3,500 ರೂಪಾಯಿ ಆರ್ಥಿಕ ನೆರವು ಹಾಗೂ ಲಾಜಿಸ್ಟಿಕಲ್ ನೆರವು ಸಿಗಲಿದೆ 

ಏ.1, 2020 ರಿಂದ 2021 ರ ಅ.23 ವರೆಗೆ ದೇಶಾದ್ಯಂತ 1,01,032 ಮಂದಿ ಮಕ್ಕಳು ಕೋವಿಡ್-19 ನಿಂದ ಓರ್ವ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ. ಈ ಪೈಕಿ 8,161 ಮಂದಿ ಮಕ್ಕಳು ಅನಾಥರಾಗಿದ್ದು 396 ಮಂದಿ ಮಕ್ಕಳನ್ನು ಪರಿತ್ಯಜಿಸಲಾಗಿದೆ. 92,475 ಮಂದಿ ಮಕ್ಕಳು ಪೋಷಕರ ಪೈಕಿ ಒಬ್ಬರನ್ನು ಕಳೆದುಕೊಂಡಿದ್ದಾರೆ ಎಂದು ಎನ್ ಸಿಪಿ ಸಿಆರ್ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಾರತಕ್ಕೆ ಸೇವೆ ನೀಡಲು ಸ್ಟಾರ್‌ಲಿಂಕ್ ಸಿದ್ಧ, ಗ್ರಾಮೀಣ ಸಂಪರ್ಕಕ್ಕೆ ಸಹಾಯ ಮಾಡುತ್ತದೆ': Elon Musk

ತಮಿಳುನಾಡು: ಸರ್ಕಾರಿ ಬಸ್‌ಗಳ ಮುಖಾಮುಖಿ ಡಿಕ್ಕಿ; ಕನಿಷ್ಠ 11 ಮಂದಿ ಸಾವು, 20 ಜನರಿಗೆ ಗಾಯ!

ಮೊದಲ ಏಕದಿನ ಪಂದ್ಯ: ದಕ್ಷಿಣ ಆಫ್ರಿಕಾ ಅಬ್ಬರದ ಬ್ಯಾಟಿಂಗ್: ಕೊನೆಯ ಓವರ್ ನಲ್ಲಿ ಭಾರತಕ್ಕೆ ವಿರೋಚಿತ ಜಯ!

'ಆ ಹಸಿವು ಇನ್ನೂ ಇದೆ.. ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ': Virat kohli ಖಡಕ್ ಸಂದೇಶ! ಟೆಸ್ಟ್ ಕ್ರಿಕೆಟ್ ಗೆ ಕೊಹ್ಲಿ ವಾಪಸ್?

Cricket: ಕೇವಲ 11 ರನ್ ಗೆ 3 ವಿಕೆಟ್; ಗೆಲುವಿನ ಸನಿಹ ಬಂದಿದ್ದ ದಕ್ಷಿಣ ಆಫ್ರಿಕಾ ಸೋಲಿನಲ್ಲೂ ದಾಖಲೆಗಳ ಸುರಿಮಳೆ!

SCROLL FOR NEXT