ರಾಜ್ಯ

ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ನಕಲಿ ಲೋಕೊ ಪೈಲಟ್ ಬಂಧನ

Lingaraj Badiger

ಬೆಂಗಳೂರು: ಈರೋಡ್‌ನಲ್ಲಿ ಇಬ್ಬರು ಯುವಕರು ಸಿಕ್ಕಿಬಿದ್ದ ಕೇವಲ ಹದಿನೈದು ದಿನಗಳ ನಂತರ, ಕಾಕಿನಾಡ ಎಕ್ಸ್‌ಪ್ರೆಸ್‌ನಲ್ಲಿ ಸಹಾಯಕ ಲೋಕೊ ಪೈಲಟ್(ALP) ಎಂದು ಹೇಳಿಕೊಳ್ಳುತ್ತಿದ್ದ 35 ವರ್ಷದ ವ್ಯಕ್ತಿ, ನಕಲಿ ಲೋಕೋ ಪೈಲಟ್ ನನ್ನು ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಸರ್ಕಾರಿ ರೈಲ್ವೆ ಪೊಲೀಸ್ ಮತ್ತು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಎರಡೂ ಈ ವ್ಯಕ್ತಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಿವೆ.

ಕಾಕಿನಾಡ ಎಕ್ಸ್‌ಪ್ರೆಸ್‌ನಲ್ಲಿ ಎಎಲ್‌ಪಿಯ ಅನುಮಾನಾಸ್ಪದ ನಡವಳಿಕೆಯ ಬಗ್ಗೆ ಲೋಕೊ ಪೈಲಟ್ ನೀಡಿದ ಮಾಹಿತಿಯ ನಂತರ ನಕಲಿ ಲೋಕೊ ಪೈಲಟ್ ಲಕ್ಷ್ಮಿನಾರಾಯಣ ಬಿಎಸ್‌ ನನ್ನು ಬಂಧಿಸಲಾಯಿತು.

"ತಾನು ದಕ್ಷಿಣ ಮಧ್ಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಲಕ್ಷ್ಮಿನಾರಾಯಣ ಹೇಳಿಕೊಂಡಿದ್ದು, ಆತನ ನಿಜವಾದ ಗುರುತು ಪತ್ತೆ ಹಚ್ಚಲು ಬೆಂಗಳೂರಿನಲ್ಲಿರುವ ಆತನ ಹೆತ್ತವರನ್ನು ಠಾಣೆಗೆ ಕರೆಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಆದಾಗ್ಯೂ, ಈ ALP ಲೋಕೋಮೋಟಿವ್ ಅನ್ನು ಚಾಲನೆ ಮಾಡಿಲ್ಲ. ಆರ್‌ಪಿಎಫ್ ತಂಡ ಆತನನ್ನು ಪ್ರಶ್ನಿಸಿದಾಗ, "ತಾನು ಲೋಕೊ ಪೈಲಟ್ ಅನ್ನುವುದನ್ನು ರುಜುವಾತು ಮಾಡಲು ಸಾಧ್ಯವಾಗಲಿಲ್ಲ ಮತ್ತು ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ. ಹೀಗಾಗಿ ಆರ್‌ಪಿಎಫ್ ತಂಡ ಹೆಚ್ಚಿನ ವಿಚಾರಣೆ ನಡೆಸಿ ನಕಲಿ ಗುರುತಿನ ಚೀಟಿ, ನಕಲಿ ಡ್ಯೂಟಿ ಕಾರ್ಡ್ ಪಾಸ್ ಮತ್ತು ನಕಲಿ ಹೆಸರಿನ ಬ್ಯಾಡ್ಜ್‌ನಂತಹ ಇತರ ದಾಖಲೆಗಳನ್ನು ವಶಕ್ಕೆ ಪಡೆದಿದೆ. 

ಆರ್‌ಪಿಎಫ್ ಬೆಂಗಳೂರು ವಿಭಾಗ ಪೊಲೀಸರು ಲಕ್ಷ್ಮಿನಾರಾಯಣ ನನ್ನು ಬಂಧಿಸಿದ್ದು, ಬಂಗಾರಪೇಟೆ ಪೋಸ್ಟ್‌ನಲ್ಲಿ ರೈಲ್ವೆ ಕಾಯಿದೆ 189ರ ಸೆಕ್ಷನ್ 153 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

SCROLL FOR NEXT