ರಾಜ್ಯ

ನಿಮ್ಹಾನ್ಸ್ ನಿಂದ ವಜಾಗೊಂಡ ನೌಕರರ ಮುಷ್ಕರಕ್ಕೆ ಒಂದು ತಿಂಗಳು

Harshavardhan M

ಬೆಂಗಳೂರು: ನಿಮ್ಹಾನ್ಸ್ ಕೆಲಸದಿಂದ ವಜಾ ಮಾಡಲ್ಪಟ್ಟಿದ್ದ ನೌಕರರು ನಡೆಸುತ್ತಿರುವ ಪ್ರತಿಭಟನೆ ಒಂದು ತಿಂಗಳಿಗೆ ಕಾಲಿಟ್ಟಿದೆ. ಅವರನ್ನು ಜುಲೈ9 ರಂದು ಕೆಲಸದಿಂದ ತೆಗೆದುಹಾಕಲಾಗಿತ್ತು. 

ವಜಾ ಗೊಳಿಸಲ್ಪಟ್ಟ ನೌಕರರೆಲ್ಲರೂ ಗುತ್ತಿಗೆ ಆಧಾರದ ಮೇಲೆ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅಖಿಲ ಭಾರತೀಯ ವ್ಯಾಪಾರ ಒಕ್ಕೂಟ ಮಂಡಳಿಯ ವ್ಯಾಪ್ತಿಗೆ ಒಳಪಡುವ ನಿಮ್ಹಾನ್ಸ್ ಪ್ರಗತಿಪರ ಕಾರ್ಮಿಕರ ಈ ಬಗ್ಗೆ ದನಿಯೆತ್ತಿದೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ನಾಯಕರು, ರಾತ್ರಿ ಕರ್ಫ್ಯೂ ಘೋಷಣೆಯಾಗಿದ್ದರೂ ನಿಮ್ಹಾನ್ಸ್ ತನ್ನ ಕಾರ್ಮಿಕರ ಕೆಲಸದ ಅವಧಿಯನ್ನು ಮಧ್ಯಾಹ್ನ 1.30- 7.30 ರಿಂದ ಮಧ್ಯಾಹ್ನ 2- 9 ಗಂಟೆಗೆ ಬದಲಾಯಿಸಿತ್ತು. ನೌಕರರು ಕೆಲಸದ ಅವಧಿಯನ್ನು ರಾತ್ರಿ 9ಕ್ಕೆ ಬದಲಾಗಿ 8ಕ್ಕೆ ಕೊನೆಗೊಳಿಸುವಂತೆ ನೌಕರರು ಮನವಿ ಮಾಡಿದ್ದರು. ಏಕೆಂದರೆ ಬಿಎಂಟಿಸಿ ಬಸ್ಸುಗಳು 8ಕ್ಕೆ ಸಂಚಾರ ನಿಲ್ಲಿಸುತ್ತಿದ್ದವು. ಆದರೆ ನಿಮ್ಹಾನ್ಸ್ ಮಂಡಳಿ ನೌಕರರ ಅಹವಾಲಿಗೆ ಸ್ಪಂದಿಸುವುದಕ್ಕೆ ಬದಲಾಗಿ ಅಷ್ಟೂ ಮಂಡಿ ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ಕಾರ್ಮಿಕರ ಒಕ್ಕೂಟದ ನಾಯಕರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಮ್ಹಾನ್ಸ್, ತನಗೂ ನೌಕರರನ್ನು ಕೆಲಸದಿಂದ ಕಿತ್ತು ಹಾಕಿರುವ ಘಟನೆಗೂ ಸಂಬಂಧವಿಲ್ಲ. ಅವರು ಏಜೆನ್ಸಿ ಮೂಲಕ ಕೆಲಸ ನಿರ್ವಹಿಸುತ್ತಿದ್ದ ನೌಕರರಾಗಿದ್ದರು. ಅವರ ಕೆಲಸ, ಕೆಲಸದ ಅವಧಿ ಎಲ್ಲವೂ ಶ್ರೀ ವಿನಾಯಕ ಎಂಟರ್ ಪ್ರೈಸಸ್ ಏಜೆನ್ಸಿ ನಿಗದಿ ಪಡಿಸುತ್ತಿತ್ತು ಎಂದು ಲಿಖಿತ ಹೇಳಿಕೆ ನೀಡಿದೆ. 

SCROLL FOR NEXT