ರಾಜ್ಯ

ಕೇರಳದಿಂದ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಶೈಕ್ಷಣಿಕ ಸಂಸ್ಥೆ ಹಾಗೂ ಅವರ ಕಚೇರಿಯಿಂದಲೇ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ!

Srinivas Rao BV

ಬೆಂಗಳೂರು: ಗಡಿ ಹಂಚಿಕೊಂಡಿರುವ ಕೇರಳ, ಮಹಾರಾಷ್ಟ್ರಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಈ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರವೇಶಿಸುವ ಮಂದಿಯ ಬಗ್ಗೆ ಕರ್ನಾಟಕ ಹೆಚ್ಚಿನ ಎಚ್ಚರಿಕೆ ವಹಿಸಿದೆ. 

ಸರ್ಕಾರ ಕೇರಳದಿಂದ ಬರುವವರಿಗೆ ಪ್ರತ್ಯೇಕ ನಿಬಂಧನಗೆಳನ್ನು ಜಾರಿಗೊಳಿಸಿದ್ದು, ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ತಮ್ಮ ಶೈಕ್ಷಣಿಕ ಸಂಸ್ಥೆಗಳು ಹಾಗೂ ಕಚೇರಿಯಿಂದ ವ್ಯವಸ್ಥೆ ಮಾಡಲಾಗಿರುವ ಸಾಂಸ್ಥಿಕ ಕ್ವಾರಂಟೈನ್ ನಲ್ಲಿಯೇ ಇರಬೇಕಾಗುತ್ತದೆ. ಹೋಮ್ ಐಸೊಲೇಷನ್ ನಲ್ಲಿರುವುದಕ್ಕೆ ಸಾಧ್ಯವಿಲ್ಲ ಎಂದು ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. 

ವಿದ್ಯಾರ್ಥಿಗಳು, ಉದ್ಯೋಗಿಗಳೊಂದಿಗೆ ಕೇರಳದಿಂದ ಆಗಮಿಸುವವರು ಆರ್ ಟಿ-ಪಿಸಿಆರ್ ನೆಗೆಟೀವ್ ವರದಿಯನ್ನು ರಾಜ್ಯಕ್ಕೆ ಪ್ರವೇಶಿಸುವುದಕ್ಕೂ ಮುನ್ನ ನೀಡಬೇಕಾಗುತ್ತದೆ ಹಾಗೂ 7 ದಿನಗಳ ಕಾಲ ಹೋಮ್ ಐಸೊಲೇಷನ್ ನಲ್ಲಿರಬೇಕಾಗುತ್ತದೆ. 7 ದಿನಗಳ ನಂತರ ಪುನಃ ಪರೀಕ್ಷೆಗೊಳಪಡಿಸಿ ನೆಗೆಟೀವ್ ಬಂದ ನಂತರವಷ್ಟೇ ಐಸೊಲೇಷನ್ ನಿಂದ ಬಿಡುಗಡೆ ಮಾಡಲಾಗುತ್ತದೆ. 

ಒಂದು ವೇಳೆ ಪಾಸಿಟೀವ್ ಬಂದಲ್ಲಿ ಆ ವ್ಯಕ್ತಿಯನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವ ಎಲ್ಲಾ ವಿದ್ಯಾರ್ಥಿಗಳು, ಉದ್ಯೋಗಿಗಳು 72 ಗಂಟೆಗಳನ್ನು ಮೀರದ ಅವಧಿಯ ಆರ್ ಟಿ-ಪಿಸಿಆರ್ ಪ್ರಮಾಣಪತ್ರವನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ.

ಸಾಂಸ್ಥಿಕ ಕ್ವಾರಂಟೈನ್ ನಿಂದ ಯಾರಿಗೆ ವಿನಾಯಿತಿ?

  1. ಸಾಂವಿಧಾನಿಕ ಕಾರ್ಯಕರ್ತರು, ಆರೋಗ್ಯ ವೃತ್ತಿಪರರು ಅವರ ಪತಿ-ಪತ್ನಿಯರು 2 ವರ್ಷದೊಳಗಿನ ಮಕ್ಕಳು (ತುರ್ತು ಪರಿಸ್ಥಿತಿ ಎದುರಿಸುತ್ತಿರುವವರು, ಕುಟುಂಬ ಸದಸ್ಯರ ಸಾವು, ವೈದ್ಯಕೀಯ ಚಿಕಿತ್ಸೆಗೆ ತೆರಳುವವರಿಗೆ ಸಾಂಸ್ಥಿಕ ಕ್ವಾರಂಟೈನ್ ನಿಂದ ವಿನಾಯಿತಿ ನೀಡಲಾಗಿದೆ)
  2. ಇದಷ್ಟೇ ಅಲ್ಲದೇ ಕಡಿಮೆ ಅವಧಿಗೆ ರಾಜ್ಯಕ್ಕೆ ಭೇಟಿ ನೀಡುವವರು (ಮೂರು ದಿನಗಳ ಅವಧಿ) 
  3. ಓರ್ವ ಪೋಷಕರೊಂದಿಗೆ ಪರೀಕ್ಷೆ ಬರೆಯುವುದಕ್ಕೆ  ಆಗಮಿಸುವ ವಿದ್ಯಾರ್ಥಿಗಳಿಗೆ ವಿನಾಯ್ತಿ ದೊರೆಯಲಿದೆ. 
SCROLL FOR NEXT