ರಾಜ್ಯ

3 ಮಹಾನಗರ ಪಾಲಿಕೆಗಳ ಚುನಾವಣೆ: ಕೋವಿಡ್ ಆತಂಕ, ಮತಪಟ್ಟಿಯಲ್ಲಿ ಹೆಸರು ನಾಪತ್ತೆ ಗೊಂದಲದಿಂದಾಗಿ ನೀರಸ ಮತದಾನ

Manjula VN

ಬೆಳಗಾವಿ: ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಳಗಾವಿ ಮಹಾನಗರ ಪಾಲಿಕೆಗಳ ಚುನಾವಣಾ ಮತದಾನ ಶುಕ್ರವಾರ ನಡೆದಿದ್ದು, ಕೋವಿಡ್ ಸಾಂಕ್ರಾಮಿಕ ರೋಗ ಹಾಗೂ ಕೆಲವೆಡೆ ಮತಪಟ್ಟಿಯಲ್ಲಿ ಹೆಸರು ನಾಪತ್ತೆಯಾದ ಘಟನೆಗಳಿಂದ ಗೊಂದಲ ಸೃಷ್ಟಿಯಾಗಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 

ವರದಿಗಳ ಪ್ರಕಾರ ನಿನ್ನೆ ನಡೆದ ಮೂರು ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಶೇ.50-56ರಷ್ಟು ಮತದಾನವಾಗಿರುವುದಾಗಿ ತಿಳಿದುಬಂದಿದೆ. 

ಬೆಳಗಾವಿಯಲ್ಲಿ ಶೇ.50.41, ಕಲಬುರಗಿ ಶೇ.49.4 ಹಾಗೂ ಹುಬ್ಬಳ್ಳಿ-ಧಾರವಾಡ ಶೇ.53.81ರಷ್ಟು ಮಂದಿ ಮತ ಚಲಾಯಿಸಿದ್ದಾರೆ. 

ಬೆಳಗಾವಿಯಲ್ಲಿ (58 ವಾರ್ಡ್) 385, ಹುಬ್ಬಳ್ಳಿ-ಧಾರವಾಡದಲ್ಲಿ (82 ವಾರ್ಡ್) 420 ಹಾಗೂ ಕಲಬುರಗಿಯ (55 ವಾರ್ಡ್)ಲ್ಲಿ 305 ಅಭ್ಯರ್ಥಇಗಳ ಭವಿಷ್ಯ ಸೆ.6ರಂದು ನಡೆಯಲಿರುವ ಮತ ಎಣಿಕೆಯಂದು ನಿರ್ಧಾರವಾಗಲಿದೆ. 

ಮೂರು ಮಹಾನಗರಗಳಲ್ಲಿನ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ ಕೆಲವೆಡೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರೇ ಮಾಯವಾಗಿರುವ ಆರೋಪ ಮತದಾರರಿಂದ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿತ್ತು. ಅಲ್ಲದೆ, ಕೆಲಕಾಲ ಮತದಾನ ಪ್ರಕ್ರಿಯೆಗೆ ಅಡ್ಡಿಯಾಗ ಘಟನೆಗಳೂ ನಡೆಯಿತು. ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಈ ಘಟನೆಗಳು ಕಂಡು ಬಂದಿತ್ತು. 

ಕಲಬುರಗಿ ಮತ್ತು ಬೆಳಗಾವಿಯ ಒಂದೆರಡು ವಾರ್ಡ್ ಗಳಲ್ಲಿ ನಕಲಿ ಮತದಾನದ ಆರೋಪವೂ ಕೇಳಿ ಬಂದು ಮೂರು ಪಕ್ಷಗಳ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ವಾಗ್ವಾದಕ್ಕೆ ಸಾಕ್ಷಿಯಾಯಿತು. 

ಮೂರು ಪಾಲಿಕೆಗಳಲ್ಲೂ ನೀರ ಮತದಾನವಾಗಿದೆ, ಕಲಬುರಗಿಯಲ್ಲಿ ಅತ್ಯಂತ ಕಡಿಮೆ ಶೇ.49.40 ಮಂದಿ ತಮ್ಮ ಹಕ್ಕು ಚಲಾಯಿಸಿದರು. ಕೋವಿಡ್ ಆತಂಕದಿಂದಾಗಿ ಸಾಕಷ್ಟು ಜನರು ಮತದಾನದಿಂದ ದೂರ ಉಳಿದಿರುವುದು ಕಂಡು ಬಂದಿತ್ತು.

SCROLL FOR NEXT