ರಾಜ್ಯ

ಕಳೆದ ಒಂದು ವಾರದಲ್ಲಿ ಶೂನ್ಯ ಕೋವಿಡ್-19 ಪ್ರಕರಣ; ಶೀಘ್ರವೇ ಕೋವಿಡ್ ಮುಕ್ತ ಜಿಲ್ಲೆಯಾಗುವತ್ತ ಗದಗ

Srinivas Rao BV

 ಗದಗ: ಇದೇ ಮೊದಲ ಬಾರಿಗೆ ಗದಗ ಜಿಲ್ಲೆ ಕಳೆದ ಒಂದು ವಾರದಲ್ಲಿ ಶೂನ್ಯ ಕೋವಿಡ್-19 ದಾಖಲಿಸಿದ್ದು ಕಳೆದ ಒಂದು ತಿಂಗಳಿನಿಂದ ಕೋವಿಡ್-19 ಸಂಬಂಧಿತ ಸಾವುಗಳ ಸಂಖ್ಯೆಯೂ ಶೂನ್ಯಕ್ಕೆ ಇಳಿದಿದೆ.

ಗದಗ ಜಿಲ್ಲೆಯ ಪಾಸಿಟಿವಿಟಿ ದರ ಶೇ.0.06ಕ್ಕೆ ಇಳಿಕೆಯಾಗಿದೆ. 7 ದಿನಗಳಿಗೂ ಹಿಂದೆ, ದಿನವೊಂದಕ್ಕೆ ಜಿಲ್ಲೆಯಲ್ಲಿ ಒಂದು ಅಥವಾ ಎರಡು ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಕೋವಿಡ್-19 ಪ್ರಾರಂಭವಾದಾಗಿನಿಂದಲೂ ಇದೇ ಮೊದಲ ಬಾರಿಗೆ ಸತತ 7 ನೇ ದಿನವೂ ಕೋವಿಡ್-19 ಹೊಸ ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಬುಲೆಟಿನ್ ಡೇಟಾದ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ 9 ಸಕ್ರಿಯ ಪ್ರಕರಣಗಳಷ್ಟೇ ಇದೆ.

ಜಿಲ್ಲೆಯ ಜನರಿಗೆ ಇದು ಒಳ್ಳೆಯ ಸುದ್ದಿಯಾಗಿರಬಹುದು. ಆದರೆ ಅಧಿಕಾರಿಗಳು ಹಬ್ಬದ ದಿನಗಳಲ್ಲಿ ಕೋವಿಡ್-19 ಹೆಚ್ಚು ಹರಡುವ ಭೀತಿ ಇರುವುದರಿಂದ ಜನತೆಗೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲು ಸೂಚನೆ ನೀಡಿದ್ದಾರೆ.

ಗದಗ ಗ್ರಾಮೀಣ ಭಾಗದಲ್ಲಿ ಕಳೆದ 15 ದಿನಗಳಿಂದ ಸಂಪೂರ್ಣ ನಿಯಂತ್ರಣದಲ್ಲಿದೆ. 50 ಕ್ಕೂ ಹೆಚ್ಚಿನ ಗ್ರಾಮಗಳಲ್ಲಿನ ಜನತೆಗೆ ಲಸಿಕೆ ಪೂರ್ಣ ಪ್ರಮಾಣದಲ್ಲಿ ನೀಡಲಾಗಿದ್ದು, ಜಿಲ್ಲಾಡಳಿತ ಮೂರನೇ ಅಲೆ ಎದುರಿಸುವುದಕ್ಕೆ ಸಜ್ಜುಗೊಂಡಿದೆ.
 

SCROLL FOR NEXT