ರಾಜ್ಯ

ನಾಲ್ಕೈದು ತಿಂಗಳ ಸತತ ಕಠಿಣ ಪರಿಶ್ರಮ ಇಂದು ಫಲ ನೀಡಿದೆ: ಸಿಎ ಟಾಪರ್ ಮಂಗಳೂರಿನ ರುಥ್ ಕ್ಲೇರ್ ಡಿಸಿಲ್ವಾ 

Sumana Upadhyaya

ಮಂಗಳೂರು: ಚಾರ್ಟರ್ಡ್ ಅಕೌಂಟಂಟ್ಸ್​ ಆಫ್​ ಇಂಡಿಯಾ ಇನ್​ಸ್ಟಿಟ್ಯೂಶನ್​  (ICAI) ಸಿಎ ಫೌಂಡೇಶನ್​ ಮತ್ತು ಫೈನಲ್ (ICAI CA Foundation And Final Exams Result) ಪರೀಕ್ಷೆಗಳ ಫಲಿತಾಂಶ ಬಿಡುಗಡೆ ಮಾಡಿದ್ದು, ಸಿಎ ಹಳೆಯ ಕೋರ್ಸ್​​​ ಮಾಡಿ ಅಂತಿಮ ಪರೀಕ್ಷೆ ಬರೆದಿದ್ದ ಮಂಗಳೂರಿನ ರುಥ್​ ಕ್ಲೇರ್​ ಡಿಸಿಲ್ವಾ ಶೇ.59 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ ಪ್ರಥಮ ರ್ಯಾಂಕ್​ ಪಡೆದಿದ್ದಾರೆ.

ಸಿಎ ಪರೀಕ್ಷೆ ತೇರ್ಗಡೆ ಮಾಡುವುದೆಂದರೆ ಸುಲಭದ ಮಾತಲ್ಲ. ಅದರಲ್ಲೂ ಈ ಕೊರೋನಾ ಮಧ್ಯೆ ಓದಿ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆ ರುಥ್ ಕ್ಲೇರ್ ಡಿಸಿಲ್ವಾ ಅವರದ್ದು. ಅವರ ಓದು, ಅಭ್ಯಾಸ, ಪಟ್ಟ ಪರಿಶ್ರಮದ ಬಗ್ಗೆ ಎಎನ್ ಐ ಸುದ್ದಿಸಂಸ್ಥೆ ಮಾತನಾಡಿಸಿದಾಗ ಹಲವು ವಿಚಾರಗಳನ್ನು ಹಂಚಿಕೊಂಡರು.

ನಾಲ್ಕೈದು ತಿಂಗಳು ಕಷ್ಟಪಟ್ಟು ಓದಿದೆ, ಸಾಕಷ್ಟು ಪರಿಶ್ರಮ ಹಾಕಿದೆ, ಅದು ಇಂದು ಫಲ ನೀಡಿದೆ. ನನ್ನ ಕುಟುಂಬದವರು, ಸ್ನೇಹಿತರಿಗೆ ಖುಷಿಯಾಗಿದೆ. ಇದು ನನ್ನೊಬ್ಬನ ಸಾಧನೆ ಮಾತ್ರವಲ್ಲ, ಸಾಮೂಹಿಕ ಪ್ರಯತ್ನ, ಸಾಧನೆ ಎಂದಿದ್ದಾರೆ.

ಓದಿನ ಸಮಯದಲ್ಲಿ ನನ್ನ ಸುಖ-ದುಃಖಗಳು, ನೋವು-ನಲಿವುಗಳಿಗೆ ಸ್ಪಂದಿಸಿದ ಕುಟುಂಬ ಸದಸ್ಯರಿಗೆ ನಾನು ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಹೇಳಲು ಇಚ್ಛಿಸುತ್ತೇನೆ ಎನ್ನುತ್ತಾರೆ.

ದಿನಕ್ಕೆ8-9 ತಾಸು ಓದು, ಅಕೌಂಟೆನ್ಸ್ ಅಂದರೆ ಅಚ್ಚುಮೆಚ್ಚು: ಮಂಗಳೂರಿನ ರುಥ್​ ಕ್ಲೇರ್​ ಡಿಸಿಲ್ವಾಗೆ ಶಾಲಾ ದಿನಗಳಿಂದಲೂ ಅಕೌಂಟೆನ್ಸಿ ನೆಚ್ಚಿನ ವಿಷಯವಾಗಿತ್ತಂತೆ. ಪದವಿಯಲ್ಲಿ ಪ್ರತಿ ಬಾರಿಯೂ ಅಕೌಂಟ್​ನಲ್ಲಿ ಡಿಸ್ಟಿಂಕ್ಷನ್​ನಲ್ಲಿ ಪಾಸಾಗುತ್ತಿದ್ದೆ. ಸಿಎ ಮಾಡಬೇಕೆಂಬ ಇಚ್ಛೆಯೂ ನನಗಿತ್ತು. ಇದೇ ಕಾರಣಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತ ಬಂದಿದ್ದೆ ಎನ್ನುತ್ತಾರೆ.  2014ರಲ್ಲಿ ಆರಂಭವಾದ ಅವರ ಸಿಎ ಅಧ್ಯಯನದಲ್ಲಿ ಪ್ರತಿದಿನ ಸುಮಾರು 8-9 ತಾಸು ಸಿಎ ಓದಿಗೆಂದೇ ಮೀಸಲಿಡುತ್ತಿದ್ದರಂತೆ. 

SCROLL FOR NEXT