ರಾಜ್ಯ

ಕಸ ಗುಡಿಸುವ ಯಾಂತ್ರಿಕ ಯಂತ್ರಗಳ ಕಾರ್ಯವೈಖರಿ ಬಗ್ಗೆ ವರದಿ ನೀಡಿ: ಗೌರವ್‌ ಗುಪ್ತಾ

Manjula VN

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 26 ಯಾಂತ್ರಿಕ ಕಸ ಗುಡಿಸುವ ಯಂತ್ರಗಳ ಕಾರ್ಯವೈಖರಿಯ ಕುರಿತು ತಾಂತ್ರಿಕ ಪರಿಣಿತಿ ಹೊಂದಿರುವವರಿಂದ ಪರಿಶೀಲನೆ ನಡೆಸಿ ನಿಖರ ವರದಿ ನೀಡುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೂಚನೆ ನೀಡಿದ್ದಾರೆ.

ನಗರದ ಪ್ರಮುಖ ರಸ್ತೆಗಳನ್ನು ಸ್ವಚ್ಛತೆ ಮಾಡಲು ನಿಯೋಜನೆ ಮಾಡಿರುವ ಎಲ್ಲಾ ಯಾಂತ್ರಿಕ ಕಸ ಗುಡಿಸುವ ಯಂತ್ರಗಳನ್ನು ಗೌರವ್‌ ಗುಪ್ತಾ ಅವರು ಆರ್.ಟಿ.ನಗರದ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಹೆಚ್.ಎಂ.ಟಿ ಮೈದಾನದಲ್ಲಿ ಮಂಗಳವಾರ ಪರಿಶೀಲನೆ ನಡೆಸಿದರು.

ನಗರದಲ್ಲಿ 26 ಯಾಂತ್ರಿಕ ಕಸ ಗುಡಿಸುವ ಯಂತ್ರಗಳ ಪೈಕಿ 17 ಸೆಲ್ಫೆ ಫ್ರೊಫೆಲ್ಡ್, 8 ಟ್ರಕ್ ಮೌಂಟೇಡ್ ಹಾಗೂ 1 ಸಣ್ಣ ಕಸ ಗುಡಿಸುವ ಯಂತ್ರವಿದ್ದು, ಎಲ್ಲಾ ಯಂತ್ರಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ, ಯಾವ ವಲಯದಲ್ಲಿ ಎಷ್ಟು ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ, ಇದುವರೆಗೆ ಎಲ್ಲೆಲ್ಲಿ ಸ್ವಚ್ಛ ಮಾಡಿವೆ, ಒಂದು ಯಂತ್ರ ಗಂಟೆಗೆ ಹಾಗೂ ದಿನಕ್ಕೆ ಎಷ್ಟು ಕಿ.ಮೀ ಉದ್ದದ ರಸ್ತೆಯನ್ನು ಸ್ವಚ್ಛ ಮಾಡುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಅವರು ಪರಿಶೀಲನೆ ನಡೆಸಿದರು.

SCROLL FOR NEXT