ರಾಜ್ಯ

ಮೈಸೂರು ಅರಮನೆಗೆ ದಸರಾ ಜಂಬೂಸವಾರಿ ಗಜಪಡೆ ಆಗಮನ

Sumana Upadhyaya

ಮೈಸೂರು: ವಿಶ್ವವಿಖ್ಯಾತ  ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ.ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಚಾಮುಂಡಿದೇವಿಯ ಮೂರ್ತಿಯನ್ನು ಹೊರುವ ಅಭಿಮನ್ಯು ಮತ್ತು ಅದರ ತಂಡದ ಆನೆಗಳಿಗೆ ಇಂದು ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತವಾಗಿ ಮೈಸೂರು ಅರಮನೆಯತ್ತ ಸಾಗಿವೆ. ದಸರಾ ಗಜಪಡೆಯನ್ನು ಗುರುವಾರ ಅರಣ್ಯ ಭವನದಿಂದ ಅರಮನೆಗೆ ಕರೆತರಲಾಯಿತು.

ವಿಶ್ವವಿಖ್ಯಾತ #ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಅರಮನೆಯ  ಜಯಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದಲ್ಲಿ 8 ಆನೆಗಳಿಗೆ ನಾಳೆಯಿಂದ ತಾಲೀಮು ನೀಡಲಾಗುವುದು. ಎಲ್ಲ ಆನೆಗಳಿಗೂ ವಿಮೆ ಮಾಡಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಬಾರಿ ಸವಾರಿಯಲ್ಲಿ ಅಭಿಮನ್ಯು, ಧನಂಜಯ, ಕಾವೇರಿ, ಚೈತ್ರ, ಅಶ್ವಥಾಮ, ಲಕ್ಷ್ಮಿ, ಗೋಪಾಲಸ್ವಾಮಿ ಮತ್ತು ವಿಕ್ರಮ ಆನೆಗಳಿರುತ್ತವೆ. ಆನೆಗಳ ಮಾವುತರ ಸಮ್ಮುಖದಲ್ಲಿ ಸಿಂಗಾರಗೊಂಡ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಏಳು ಆನೆಗಳು ಪೂಜೆಗೆ ಒಟ್ಟಿಗೆ ನಿಂತಿದ್ದರೆ, ವಿಕ್ರಮ ಆನೆಗೆ ಪ್ರತ್ಯೇಕ ಪೂಜೆ ನೆರವೇರಿಸಲಾಯಿತು. 

ನಗರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಗೌರವ ವಂದನೆ ಸಲ್ಲಿಸಿದರು. 

SCROLL FOR NEXT