ರಾಜ್ಯ

ಚಿನ್ನಾಭರಣ ಸಮೇತ ಗಣೇಶ ವಿಸರ್ಜನೆ: ಮೂರು ದಿನಗಳ ಬಳಿಕ ಹುಡುಕಿ ತೆಗೆದ ಸ್ಕೂಬಾ ಡೈವರ್ಸ್!

Shilpa D

ಹುಬ್ಬಳ್ಳಿ: ಕುಮಟಾದ ಮಳಲಿ ಗೋನರಹಳ್ಳಿಯ ಸಾರ್ವಜನಿಕ ಗಣೇಶ ಮೂರ್ತಿಯನ್ನು ತೊಡಿಸಿದ್ದ ಚಿನ್ನದ ಉಂಗುರ ಹಾಗೂ ಬೆಳ್ಳಿಯ ಸರಪಳಿ ಸಮೇತ ವಿಸರ್ಜನೆ ಮಾಡಲಾಗಿತ್ತು, ಮೂರು ದಿನಗಳ ನಂತರ ಆಭರಣಗಳನ್ನು ಹೊರ ತೆಗೆಯಲಾಗಿದೆ.

ಗಣೇಶ ವಿಸರ್ಜನೆ ನಂತರ ತಾವು ಮಾಡಿದ ಪ್ರಮಾದದ ಬಗ್ಗೆ ಗ್ರಾಮಸ್ಥರಿಗೆ ಅರಿವಾಯಿತು, ಗಣೇಶ ಮೆರವಣಿಗೆ ಸಂದರ್ಭದ ವೇಳೆ ಚಿನ್ನದ ಉಂಗುರ, ಚಿನ್ನದ ಸರ ಮತ್ತು ಬೆಳ್ಳಿ ಆಭರಣಗಳಿಂದ ಅಲಂಕರಿಸಲಾಗಿತ್ತು, ಆಭರಣಗಳನ್ನು ತೆಗೆಯಲು ಎರಡು ದಿನ ಗ್ರಾಮಸ್ಥರು ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ.

ಹಲವರು ನೀರಿನಲ್ಲಿ ಮುಳಗಿ ಹುಡುಕುವ ಪ್ರಯತ್ನ ಮಾಡಿದರೂ ಕೈ ಚೆಲ್ಲಿ ಕೂರುವಂತಾಯಿತು. ನಂತರ ದೇವರಭಾವಿ ಗ್ರಾಮದ ಯುವಕ ವಿನಯ್ ನಾಯಕ್ ಎಂಬುವವರು ಸ್ಕೂಬಾ ಡೈವ್ ಗೆ ಬಳಸುವ ಪರಿಕರ ಬಳಸಿ ನೀರಿನಲ್ಲಿ ಮುಳಗಿ ಕೊನೆಗೂ ಗಣಪತಿಯೊಂದಿಗೆ ವಿಸರ್ಜಿಸಿದ ಆಭರಣಗಳನ್ನು ತೆಗೆದುಕೊಟ್ಟಿದ್ದಾರೆ.

ಮೂರ್ತಿಯನ್ನು ಮೂರು ದಿನಗಳ ಹಿಂದೆ ಮುಳುಗಿಸಿದ್ದರಿಂದ ಅದು ಮಣ್ಣಿನ ಬಂಡಲ್ ಆಗಿ ಬದಲಾಗಿತ್ತು. ಹಲವಾರು ಈಜುಗಾರರು ಪ್ರಯತ್ನಿಸಿದ ನಂತರ ಮೂವರು ಚಿನ್ನದ ಉಂಗುರ ಮತ್ತು ಸರ ತರುವಲ್ಲಿ ಯಶಸ್ವಿಯಾದರು. ಆದರ ಬೆಳ್ಳಿ ಆಭರಣ ಹಿಂಪಡೆಯಲು ಸಾಧ್ಯವಾಗಲಿಲ್ಲ.

ಗಣೇಶ ಆಯೋಜಕರಿಂದ ಸೋಮವಾರ ಬೆಳಗ್ಗೆ ನಮಗೆ ವಿನಂತಿ ಬಂತು, ಹೀಗಾಗಿ ನಾವು ಆಭರಣ ಹುಡುಕಿಕೊಡಲು ನಿರ್ಧರಿಸಿದೆವು, ಚಿನ್ನ ಮತ್ತು ಬೆಳ್ಳಿ ಆಭರಣಗಳ ಬಗ್ಗೆ ಗ್ರಾಮಸ್ಥರು ಚಿಂತಿತರಾಗಿದ್ದರು, ಹಲವು ಪ್ರಯತ್ನದ ನಂತರ ನಾವು ಆಭರಣ ತೆಗೆದೆವು ಎಂದು ಸ್ಕೂಬಾ ಡೈವರ್ ವಿನಯ್ ನಾಯಕ್ ಹೇಳಿದ್ದಾರೆ.

ಹಬ್ಬ ಮುಗಿದ ನಂತರ ಪ್ರತಿ ವರ್ಷ ನಾವು ಆಭರಣಗಳು ಮತ್ತು ಹಬ್ಬಕ್ಕೆ ಬಳಸಿದ ಇತರ ವಸ್ತುಗಳನ್ನು ಹರಾಜು ಹಾಕುತ್ತೇವೆ. ಈ ವರ್ಷವೂ ನಾವು ಗಣೇಶ ವಿಸರ್ಜನೆಗೂ ಮುನ್ನ ಪ್ರಾರ್ಥನೆ ಮಾಡಿದೆವು, ಆದರೆ ಈ ಬಾರಿ ವಿಗ್ರಹಕ್ಕೆ ಹೆಚ್ಚಿನ ಹೂಮಾಲೆ ಹಾಕಿದ್ದರಿಂದ ಸ್ವಯಂಸೇವಕರು ಆಭರಣಗಳನ್ನು ತೆಗೆಯಲು ಮರೆತಿದ್ದಾರೆ. ಕೊನೆಯ ಗಳಿಗೆಯಲ್ಲಿ ಸಹಾಯ ಮಾಡಿದ ವಿನಯ್ ಮತ್ತು ಸ್ನೇಹಿತರಿಗೆ ನಾವು ಆಬಾರಿಯಾಗಿದ್ದೇವೆ ಎಂದು ಗೋನರಹಳ್ಳಿ ಗಣೇಶ ಸಂಘಟನಾ ಸಮಿತಿ ಸದಸ್ಯರು ಹೇಳಿದ್ದಾರೆ.

SCROLL FOR NEXT