ರಾಜ್ಯ

ನಮ್ಮ ಮೆಟ್ರೋ ವಿಮಾನ ನಿಲ್ದಾಣ ಮಾರ್ಗ ನಿರ್ಮಿಸುವ ಬಿಡ್ ನಾಗಾರ್ಜುನ ಕನ್ ಸ್ಟ್ರಕ್ಷನ್ ಕಂಪನಿ ಪಾಲು

Lingaraj Badiger

ಬೆಂಗಳೂರು: ಕೆಆರ್ ಪುರಂನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 38.44 ಕಿಮೀ ನಮ್ಮ ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಸಲ್ಲಿಸಿದ್ದ ಬಿಡ್ ಗಳಲ್ಲಿ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ(ಎನ್‌ಸಿಸಿ)ಲಿಮಿಟೆಡ್ ಎಲ್ಲಾ ಮೂರು ಪ್ಯಾಕೇಜ್‌ಗಳಲ್ಲಿ ಕಡಿಮೆ ಬಿಡ್ಡರ್ ಆಗಿ ಹೊರಹೊಮ್ಮಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್‌ಸಿಎಲ್) ತನ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(ಕೆಐಎ) ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಮಂಗಳವಾರ ಹಣಕಾಸು ಬಿಡ್‌ಗಳನ್ನು ಆಹ್ವಾನಿಸಿತ್ತು. ಇದಕ್ಕಾಗಿ ಐದು ಸ್ಪರ್ಧಿಗಳಿದ್ದರು. ತಾಂತ್ರಿಕ ಬಿಡ್‌ಗಳನ್ನು ಜೂನ್ 2021 ರಲ್ಲಿ ತೆರೆಯಲಾಗಿತ್ತು. 

ವಿಮಾನ ನಿಲ್ದಾಣದ ಮೆಟ್ರೋ ಮಾರ್ಗ ನಿರ್ಮಾಣ ಗುತ್ತಿಗೆ ನೀಡುವ ಕುರಿತು ಒಂದು ತಿಂಗಳ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಎನ್‌ಸಿಸಿ ಅತಿ ಕಡಿಮೆ ಬಿಡ್ಡರ್ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ಖಚಿತಪಡಿಸಿದ್ದಾರೆ.

"ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು ಕೆಲವು ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಾಗಿದೆ. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ನಾವು ಅನುಮೋದನೆ ಪಡೆಯಬೇಕು, ಅದು ಈ ಮಾರ್ಗಕ್ಕೆ ಧನಸಹಾಯ ನೀಡುತ್ತಿದೆ”ಎಂದು ಅವರು ಹೇಳಿದ್ದಾರೆ.

SCROLL FOR NEXT