ರಾಜ್ಯ

ಆರ್‌ಡಿಪಿಆರ್ ಸ್ನಾತಕೋತ್ತರ ಪದವೀಧರರಿಗೆ ಇಲಾಖೆಯಲ್ಲಿ ಮೀಸಲಾತಿ: ಕೆ.ಎಸ್. ಈಶ್ವರಪ್ಪ

Shilpa D

ಬೆಂಗಳೂರು: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಿಂದ ಗದಗದಲ್ಲಿರುವ ಆರ್‌ಡಿಪಿಆರ್ ಕೋರ್ಸ್‌ನ ಸ್ನಾತಕೋತ್ತರ ಪದವೀಧರರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಉದ್ಯೋಗಗಳನ್ನು ಕಾಯ್ದಿರಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು,  ಆರ್‌ಡಿಪಿಆರ್ ಕೋರ್ಸ್‌ನಲ್ಲಿ ಎಂಎ ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲಾಖೆಯಲ್ಲಿ ಮೀಸಲಾತಿ ನೀಡುವ ಪ್ರಸ್ತಾಪವಿದೆ ಎಂದು ತಿಳಿಸಿದರು.

"ನಾವು ಒಂದು ಸಮಿತಿಯನ್ನು ರಚಿಸುತ್ತೇವೆ, ಆರ್ ಡಿ ಪಿ ಆರ್  ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಮಾರ್ಗಸೂಚಿಗಳನ್ನು ರೂಪಿಸುತ್ತದೆ. ನಾವು ಇದನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವ ಭರವಸೆ ಹೊಂದಿದ್ದೇವೆ ಎಂದು ಹೇಳಿದರು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಈಶ್ವರಪ್ಪ, ಪ್ರತಿ ವರ್ಷ ಆರ್ ಡಿ ಪಿ ಆರ್ ಕೋರ್ಸ್ ನಲ್ಲಿ 30 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ಪದವಿ ಪಡೆಯುತ್ತಾರೆ. ಅವರು ನಮ್ಮ ಇಲಾಖೆಗೆ ಸೂಕ್ತವಾಗಿದ್ದಾರೆ ಏಕೆಂದರೆ ಅವರ ಪಠ್ಯಕ್ರಮವನ್ನು ನಮ್ಮ ಅಗತ್ಯಗಳನ್ನು ಆಧರಿಸಿ ವಿನ್ಯಾಸಗೊಳಿಸಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು.

SCROLL FOR NEXT