ರಾಜ್ಯ

ಬೆಂಗಳೂರು ಪೌರಸ೦ಸ್ಥೆ ಚುನಾವಣೆ ಇನ್ನಷ್ಟೇ ನಿಗದಿಯಾಗಬೇಕಿದೆ, ಆದರೆ ರಾಜಕೀಯ ಪಕ್ಷಗಳು ಮಾತ್ರ ಆಗಲೇ ಸರ್ವ ಸನ್ನದ್ಧ!

Srinivas Rao BV

ಬೆಂಗಳೂರು ನಗರ ಪೌರಸಂಸ್ಥೆ ಚುನಾವಣೆ ವಿಷಯ ಸುಪ್ರೀಂ ಕೋರ್ಟ್ ನಲ್ಲಿದೆ ಎಂದು ರಾಜ್ಯ ಸರ್ಕಾರ ಹೇಳಿದ್ದರೂ ರಾಜಕೀಯ ಪಕ್ಷಗಳು ಮಾತ್ರ ತಮ್ಮ ಚಟುವಟಿಕೆಗಳು ಗೋಚರಿಸುವಂತೆ ಸಕ್ರಿಯಾಗಿವೆ.

ಬಿಜೆಪಿ ಮೋದಿ ಬ್ರಾಂಡ್ ಅಡಿಯಲ್ಲಿ ಚುನಾವಣೆ ಎದುರಿಸಲು ಸಜ್ಜುಗೊಂಡಿದ್ದರೆ, ಕಾಂಗ್ರೆಸ್ ನ ನಾಯಕತ್ವ ಪಕ್ಷದ ಸದಸ್ಯರಿಗೆ ತಳಮಟ್ಟದಲ್ಲಿ ತಮ್ಮ ಅಸ್ತಿತ್ವ ಗೋಚರಿಸುವಂತೆ ನಿರ್ದೇಶನ ನೀಡಿದೆ.

ಕಾರ್ಪೊರೇಷನ್ ಚುನಾವಣೆಯೂ ಸೇರಿ, ಚುನಾವಣೆಗಳಿಗೆ ಮೋದಿ ಬ್ರಾಂಡ್ ಆಗಿದ್ದಾರೆ. ಈವರೆಗೂ ಸ್ಪರ್ಧೆಯ ವಿಚಾರವಾಗಿ ಯಾವುದೂ ನಿರ್ಧಾರವಾಗಿಲ್ಲ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಅರ್ ಅಶೋಕ್ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಲಿದೆ.

"ಸಿಎಂ ಬೊಮ್ಮಾಯಿ, ಅಶೋಕ್ ಚುನಾವಣೆಗೆ ಬಿಜೆಪಿಯ ಮುಖಗಳಾಗಿರಲಿದ್ದಾರೆ, ಏನೂ ಚಿಂತೆ ಮಾಡುವ ಅಗತ್ಯವಿಲ್ಲ, ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಬಿಜೆಪಿ ಕಾರ್ಪೊರೇಟರ್ ಒಬ್ಬರು ಹೇಳಿದ್ದಾರೆ.

ಕಾಂಗ್ರೆಸ್ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದೆ. ಇಬ್ಬರೂ ನಾಯಕರು ಪಕ್ಷದ ಮಾಜಿ ಕಾರ್ಪೊರೇಟರ್ ಗಳು ಹಾಗೂ ಶಾಸಕರಿಗೆ ಜನರಿಂದ ಗುರುತಿಸಿಕೊಳ್ಳುವಂತೆ ಸೂಚನೆ ನೀಡಿದ್ದು, ಕೋವಿಡ್-19 ನಿಂದ ಸಮಸ್ಯೆಗೆ ಸಿಲುಕಿರುವ ವರ್ಗದವರಿಗೆ ಅಭಯ ಹಸ್ತ ಯೋಜನೆಯನ್ನು ತಲುಪಿಸುವುದಕ್ಕೆ ಸೂಚನೆ ನೀಡಿದ್ದಾರೆ.

"ಯಾರು ರಾಜ್ಯ ನಾಯಕರ ಸೂಚನೆಯ ಪ್ರಕಾರ ಕಾರ್ಯಕ್ಷಮತೆ ಪ್ರದರ್ಶಿಸುವುದಿಲ್ಲವೋ ಅವರ ಬದಲಿಗೆ ಹೊಸಬರನ್ನು ನೇಮಕ ಮಾಡಲಾಗುತ್ತದೆ.

ಚುನಾವಣೆಯ ವಿಷಯ ಕೋರ್ಟ್ ನಲ್ಲಿದ್ದರೂ ಸಹ ಪಕ್ಷಗಳು ತಳಮಟ್ಟದಲ್ಲಿ ಸಂಘಟನೆಗೆ ಮುಂದಾಗಿವೆ. ಸಾರ್ವಜನಿಕವಾಗಿ ಜನಪ್ರಿಯರಾಗುವುದು ಚುನಾವಣೆಯನ್ನು ಗೆಲ್ಲುವುದಕ್ಕೆ ಅತ್ಯಂತ ಸುಲಭವಾದ ಮಾರ್ಗವಾಗಿದ್ದು, ಕಾರ್ಪೊರೇಟರ್ ಅಥವಾ ಶಾಸಕರು ತಮ್ಮ ಜೇಬಿನಿಂದ ಹಣ ಖರ್ಚು ಮಾಡುತ್ತಾರೆ. ಅವರ ಸಾಮರ್ಥ್ಯದ ಆಧಾರದಲ್ಲಿ ಪ್ರತಿಯೊಬ್ಬ ವ್ಯಕ್ತಿ, ಕುಟುಂಬದ ಮೇಲೆ ಸ್ಪರ್ಧಿಗಳು 2000-10,000 ರೂಪಾಯಿ ಖರ್ಚು ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಇದೇ ವೇಳೆ ಜೆಡಿಎಸ್ ನ ಮಾಜಿ ಕಾರ್ಪೊರೇಟರ್ ಗಳು ಎಂದಿನಂತೆ ಕಾದುನೋಡುವ ತಂತ್ರ ಅನುಸರಿಸಿದ್ದರೆ, ಹೊಸ ಪಕ್ಷಗಳಾದ ಆಪ್, ಬೆಂಗಳೂರು ನವ ನಿರ್ಮಾಣ ಮುಂತಾದವು ಸ್ಥಳೀಯ ಮಟ್ಟದ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತಿವೆ.

SCROLL FOR NEXT