ಸಾಂದರ್ಭಿಕ ಚಿತ್ರ 
ರಾಜ್ಯ

ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ನಿಗೂಢ ಜ್ವರ, ಜನರೇ ಆತಂಕಗೊಳ್ಳಬೇಡಿ: ವೈದ್ಯರ ಸಲಹೆ 

ಮಕ್ಕಳಲ್ಲಿ ಇತ್ತೀಚೆಗೆ ಹೆಚ್ಚಾಗಿ ವೈರಲ್ ಜ್ವರ ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಮತ್ತು ಡೆಂಗ್ಯು ಜ್ವರದ ಲಕ್ಷಣಗಳೇ ಕಂಡುಬರುತ್ತಿದ್ದು ಮಕ್ಕಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬರುತ್ತಿದೆ. ಹಾಗಾದರೆ ಇದು ಕೊರೋನಾ ರೂಪಾಂತರಿಯೇ ಎಂಬ ಸಂಶಯ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಬೆಂಗಳೂರು: ಮಕ್ಕಳಲ್ಲಿ ಇತ್ತೀಚೆಗೆ ಹೆಚ್ಚಾಗಿ ವೈರಲ್ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಮತ್ತು ಡೆಂಗ್ಯು ಜ್ವರದ ಲಕ್ಷಣಗಳೇ ಕಂಡುಬರುತ್ತಿದ್ದು ಮಕ್ಕಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬರುತ್ತಿದೆ. ಹಾಗಾದರೆ ಇದು ಕೊರೋನಾ ರೂಪಾಂತರಿಯೇ ಎಂಬ ಸಂಶಯ, ಭಯ ಸಾರ್ವಜನಿಕರನ್ನು ಕಾಡುತ್ತಿದೆ.

ಸಾಮಾನ್ಯವಾಗಿ ಮಳೆಗಾಲ, ಚಳಿಗಾಲ, ಬೇಸಿಗೆಕಾಲಗಳಲ್ಲಿ ಋತುಗಳು ಬದಲಾದಾಗ ಶೀತ, ನೆಗಡಿ- ಜ್ವರ ಬರುವುದು ಸಾಮಾನ್ಯ. ಆದರೆ ಇತ್ತೀಚೆಗೆ ಬರುತ್ತಿರುವ ಜ್ವರ ಅದರಲ್ಲೂ ಮಕ್ಕಳಲ್ಲಿ ಮಾತ್ರ ದೀರ್ಘಕಾಲ ಇದೆ. ಶಿಶುಗಳಿಂದ ಹಿಡಿದು 5 ವರ್ಷದವರೆಗೆ ಮಕ್ಕಳಲ್ಲಿ ಇತ್ತೀಚೆಗೆ ವೈರಲ್ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಅಧಿಕ ಜ್ವರ, ಸುಸ್ತು, ಕಫ, ಶೀತ ಮತ್ತು ವಾಂತಿಯ ಸಮಸ್ಯೆಗಳು ಕಾಣಿಸುತ್ತಿವೆ. ಆದರೆ ಕೊರೋನಾ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬರುತ್ತಿದೆ. ಉಸಿರಾಟದ ಸಿನ್ಸಿಟಿಯಲ್ ವೈರಸ್, ಎಚ್ 1 ಎನ್ 1 ಅಥವಾ ಚಿಕೂನ್ ಗುನ್ಯಾದಂತಹ ಕೆಲವು ಋತುಗಳ ವೈರಸ್ ಗಳು ಕೂಡ ಕಾಡುತ್ತಿವೆ.

ಹಾಗಾದರೆ ಏನಿದು ಎಂಬ ಭಯ, ಆತಂಕ ಕೊರೋನಾ ಮಧ್ಯೆ ಜನರನ್ನು ಸಾಕಷ್ಟು ಕಾಡುತ್ತಿದೆ. ಜನರು ಆತಂಕಪಡುವ ಅಗತ್ಯವಿಲ್ಲ. ಮಕ್ಕಳಲ್ಲಿ ಅಸಾಮಾನ್ಯ ರೋಗಲಕ್ಷಣ, ಕೊರೋನಾ ಲಕ್ಷಣ ಕಂಡುಬರದ ಹೊರತು ಅನಗತ್ಯವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಬೇಡ ಎಂದು ವೈದ್ಯರು ಹೇಳುತ್ತಾರೆ.

ಮೆಟ್ರೊಪೊಲಿಸ್ ಹೆಲ್ತ್‌ಕೇರ್ ಲಿಮಿಟೆಡ್‌ನ ಸಾಂಕ್ರಾಮಿಕ ರೋಗಗಳ ವೈಜ್ಞಾನಿಕ ವ್ಯವಹಾರದ ಮುಖ್ಯಸ್ಥ ಹಾಗೂ ಅಸೋಸಿಯೇಟ್ ಉಪಾಧ್ಯಕ್ಷ ಡಾ ನಿರಂಜನ್ ಪಾಟೀಲ್, ಜ್ವರದಂತಹ ವಿಶಿಷ್ಟ ಲಕ್ಷಣವು ಮೂರು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ಅಥವಾ ಸಮಯ ಭಿನ್ನವಾಗಿದ್ದರೆ ಅಥವಾ ನಿರ್ದಿಷ್ಟ ಪ್ರದೇಶದ ಮಕ್ಕಳು ಇದೇ ರೀತಿ ತೋರಿಸುತ್ತಿದ್ದರೆ ರೋಗಲಕ್ಷಣಗಳನ್ನು ಹೊಂದಿದ್ದರೆ ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ.

ಇದು ಹಳೆ ವೈರಸ್: ಯಾವುದೇ ಅಸಾಮಾನ್ಯ ಲಕ್ಷಣಗಳಿದ್ದಲ್ಲಿ, ಆಣ್ವಿಕ ಪರೀಕ್ಷೆಗಳು, ಸ್ವ್ಯಾಬ್ ಸಂಗ್ರಹಗಳು, ವೈರಸ್ ಕಲ್ಚರ್ ಇತ್ಯಾದಿಗಳನ್ನು ನೋಡಲು ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಡಾ ನಿರಂಜನ್ ಪಾಟೀಲ್ ಹೇಳಿದರು. ಕನಿಷ್ಟ 50-60 ಮಕ್ಕಳನ್ನು ವೈರಲ್ ಜ್ವರ ಮತ್ತು ಸೋಂಕು ರೋಗಲಕ್ಷಣಗಳನ್ನು ನೋಡಿದ್ದೇವೆ, ಆದರೆ ಇವುಗಳಲ್ಲಿ ಶೇಕಡಾ 40ರಷ್ಟು ಮಕ್ಕಳಲ್ಲಿ ಋತು ಸಂಬಂಧಿ ವೈರಸ್ ಜ್ವರಗಳೇ ಕಾಣಿಸುತ್ತಿವೆ ಎನ್ನುತ್ತಾರೆ.

ಉಳಿದವರಿಗೆ ನಾವು ಇಂತಹ ಸೋಂಕುಗಳ ಬಗ್ಗೆ ಯಾವುದೇ ವರ್ಗೀಕರಣವಿಲ್ಲದ ಕಾರಣ ನಾವು ಕೇವಲ ರೋಗಲಕ್ಷಣದಿಂದ ಮಾತ್ರ ಚಿಕಿತ್ಸೆ ನೀಡಿದ್ದೇವೆ ಎಂದು ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಮುಖ್ಯಸ್ಥ ಡಾ. ಚಿಕ್ಕನರಸ ರೆಡ್ಡಿ ಹೇಳುತ್ತಾರೆ.

ಇದು ಕೇವಲ ಕಾಲ ಅಥವಾ ಋತು ಸಂಬಂಧಿ ಜ್ವರ ಎಂದು ಹೇಳುವ ಡಾ ರೋಹಿಣಿ ಕೆಲ್ಕರ್, ಹಳೆ ವೈರಸ್ ಹೊಸದಾಗಿ ಕಾಣಿಸಿಕೊಂಡಿದೆಯಷ್ಟೆ ಎನ್ನುತ್ತಾರೆ.

ಕೋವಿಡ್ ಸೋಂಕು ಇರುವುದರಿಂದ ಇತ್ತೀಚೆಗೆ ಜನರು ಜ್ವರ ಬಂದ ಕೂಡಲೇ ಭಯಬೀಳುತ್ತಾರೆ. ರೋಗಲಕ್ಷಣಗಳ ಪರೀಕ್ಷೆ ಮತ್ತು ವೈರಸ್‌ನ ಗುರುತಿಸುವಿಕೆ ಇಲ್ಲಿ ಮುಖ್ಯವಾಗುತ್ತದೆ, ಪೋಷಕರು ಭಯಪಡುವ ಅಗತ್ಯವಿಲ್ಲ ಎಂದು ಎಂದು ಶಿಶುವೈದ್ಯ ಮತ್ತು ನಿಯೊನಟಲ್ ಫೊರಂ ನ ಅಧ್ಯಕ್ಷ ಡಾ.ರಂಜನ್ ಕುಮಾರ್ ಪೇಜಾವರ್ ಹೇಳುತ್ತಾರೆ.

ಶಿಶುಗಳಿಂದ ಹಿಡಿದು ಮಕ್ಕಳವರೆಗೆ ಜ್ವರ ಬಂದರೆ ಅವರನ್ನು ಗಮನಿಸುತ್ತಿರಬೇಕು, ಕೆಮ್ಮುವಿಕೆಯ ರೀತಿ, ಉಸಿರಾಟದ ತೊಂದರೆ, ನೀಲಿ ಬಣ್ಣಕ್ಕೆ ತಿರುಗುವುದು, ಅಧಿಕ ಜ್ವರದಿಂದಾಗಿ ಊಟ ಮಾಡದಿರುವುದು, ಎರಡು ದಿನಗಳ ನಂತರವೂ ಜ್ವರ ಕಡಿಮೆಯಾಗದಿರುವುದು, ದೇಹದಲ್ಲಿ ತುರಿಕೆ ಇತ್ಯಾದಿ ಕಂಡುಬಂದರೆ ತಕ್ಷಣ ವೈದ್ಯ ಬಳಿ ತೋರಿಸಬೇಕು. ಎರಡು-ಮೂರು ದಿನಗಳು ಕಳೆದ ನಂತರವೂ ಮನೆಯಲ್ಲಿಯೇ ಸ್ವಯಂ ಆರೈಕೆ ಮಾಡುವುದು ಅಪಾಯಕಾರಿ. ನಿರಂತರ ಕೆಮ್ಮು ಮತ್ತು ಜ್ವರ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಮಾಲೋಚನೆ ಪಡೆಯಿರಿ ಎಂದು ಅವರು ಹೇಳುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

Udaipur: ನಿಜಕ್ಕೂ ಅಚ್ಚರಿ, 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ತಾಯಿಯಾದ ಮಹಿಳೆ!

SCROLL FOR NEXT