ರಾಜ್ಯ

ಬೆಂಗಳೂರು ನಗರದಲ್ಲಿರುವ ದುರ್ಬಲ ಶಿಥಿಲಾವಸ್ಥೆಯ ಕಟ್ಟಡಗಳು: ಬಿಬಿಎಂಪಿ ಬಳಿ ಇಲ್ಲ ಮಾಹಿತಿ!

Sumana Upadhyaya

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ನಗರದಲ್ಲಿ ದುರ್ಬಲ ಮತ್ತು ಶಿಥಿಲಗೊಂಡ ಕಟ್ಟಡಗಳ ವಿವರವಾದ ದಾಖಲೆಗಳನ್ನು ನಿರ್ವಹಿಸಿಲ್ಲ. ಬಿಬಿಎಂಪಿ ವಿಪತ್ತು ನಿರ್ವಹಣಾ ಕೋಶದ ಅಧಿಕಾರಿಯೊಬ್ಬರು 2019 ರಲ್ಲಿ ಸುಮಾರು 194 ಕಟ್ಟಡಗಳು ಕೆಟ್ಟ ಸ್ಥಿತಿಯಲ್ಲಿವೆ ಎಂದು ಕಂಡುಬಂದಿದೆ ಎಂದು ಹೇಳಿದ್ದರು.

ಆದರೆ ಬಿಬಿಎಂಪಿ, ನಗರದಲ್ಲಿ 178 ಹೆಚ್ಚಿನ ಅಪಾಯದ ಕಟ್ಟಡಗಳಿವೆ ಎಂದು ಘೋಷಿಸಿತ್ತು. "ಬೆಂಗಳೂರಿನ ಎಲ್ಲಾ ಶಿಥಿಲಗೊಂಡ ಕಟ್ಟಡಗಳ ಸಮೀಕ್ಷೆಯನ್ನು ಬಿಬಿಎಂಪಿಯ ಎಂಜಿನಿಯರಿಂಗ್ ಮತ್ತು ಟೌನ್ ಪ್ಲಾನಿಂಗ್ ವಿಭಾಗಗಳು ತೆಗೆದುಕೊಳ್ಳಬೇಕಿತ್ತು. ಆದರೆ ಕೆಲವು ಕಟ್ಟಡಗಳನ್ನು ಸಮೀಕ್ಷೆ ಮಾಡಿದ ನಂತರ ಅದು ಸ್ಥಗಿತಗೊಂಡಿತು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕೋವಿಡ್ ಲಾಕ್ ಡೌನ್ ಕಾರಣ ಎಂದು ಕಂಡುಬಂದಿದೆ.

20ರಿಂದ 50 ವರ್ಷದ ಕಟ್ಟಡಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಜನರು ವಾಸಿಸುತ್ತಿದ್ದು ಅದನ್ನು ಅಧಿಕಾರಿಗಳು ಪರಿಶೀಲನೆ ಮಾಡಬೇಕಾಗಿತ್ತು. ಸಮೀಕ್ಷೆ ಕಾರ್ಯವನ್ನು ಜಂಟಿ ಆಯುಕ್ತರಿಗೆ ಹಸ್ತಾಂತರಿಸಲಾಗಿತ್ತು. ಅವರು ಅದನ್ನು ಸಹಾಯಕ ಕಾರ್ಯಕಾರಿ ಎಂಜಿನಿಯರ್ ಗೆ ವರ್ಗಾಯಿಸಿದ್ದರು. ನಂತರ ವಾರ್ಡ್ ಎಂಜಿನಿಯರ್ ಗೆ ಹೋಗಿದ್ದು ಅಲ್ಲಿ ಕೆಲಸ ಸ್ಥಗಿತಗೊಂಡಿತು.

ಕೆಲ ದಿನಗಳ ಹಿಂದೆ ದೇವರಚಿಕ್ಕನಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಆದೇಶ ಹೊರಡಿಸಿ 2016ರ ರಾಷ್ಟ್ರೀಯ ಕಟ್ಟಡ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಆದೇಶಿಸಿದ್ದರು.

ಮಾರ್ಗಸೂಚಿಗಳನ್ನು ಹೇಗೆ ಪಾಲಿಸಲಾಗುತ್ತದೆ, ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯುಎಸ್ ಎಸ್ ಬಿ ಮತ್ತು ಅಗ್ನಿಶಾಮಕ ಇಲಾಖೆಯು ಅನುಮೋದನೆ ನೀಡುವ ಮೊದಲು ಕ್ಷೇತ್ರ ಸಮೀಕ್ಷೆ ನಡೆಸಲು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಕಟ್ಟಡದ ಯೋಜನೆಗಳನ್ನು ಉಲ್ಲಂಘಿಸಲಾಗಿದೆ ಮತ್ತು ಕಟ್ಟಡಗಳು ಕುಸಿಯುತ್ತವೆ. ಅದೃಷ್ಟವಶಾತ್ ಮೊನ್ನೆ ಎರಡು ಕಟ್ಟಡ ಕುಸಿತದ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಆದರೆ ಈ ವಸತಿ ಸಂಕೀರ್ಣಗಳಿಗೆ ಹೋಗುವ ರಸ್ತೆಗಳ ಸ್ಥಿತಿಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಅಗ್ನಿಶಾಮಕ ವಾಹನಗಳು ಅಥವಾ ಆಂಬ್ಯುಲೆನ್ಸ್‌ಗಳಿಗೆ ಅವು ಸೂಕ್ತವಲ್ಲ "ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಬೆಂಗಳೂರಿನ ಉಪ ಆಯುಕ್ತರ ಕಚೇರಿಯು ಬೆಂಗಳೂರಿನಲ್ಲಿ 6 ಸಾವಿರದ 77 ಅಕ್ರಮ ಲೇಔಟ್‌ಗಳನ್ನು ಪಟ್ಟಿ ಮಾಡಿದೆ ಮತ್ತು ಈ ಬಡಾವಣೆಗಳಲ್ಲಿನ ಹೆಚ್ಚಿನ ಕಟ್ಟಡಗಳು ಕಳಪೆ ಸ್ಥಿತಿಯಲ್ಲಿವೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ. "ಸಿದ್ಧಪಡಿಸುತ್ತಿರುವ ಕರಡು ವಿಪತ್ತು ದಾಖಲೆಯಲ್ಲಿ, ಪ್ರವಾಹ ಪೀಡಿತ, ತಗ್ಗು ಪ್ರದೇಶ, ಬೆಂಕಿಗೆ ಆಹುತಿಯಾಗುವ ಅಪಾಯ ಹೊಂದಿರುವ ಪ್ರದೇಶಗಳನ್ನು ಸೇರಿಸಲಾಗಿದೆ. ಆದರೆ ಈಗ ಕಟ್ಟಡಗಳನ್ನೂ ಸೇರಿಸಬೇಕಾಗಿದೆ ಎಂದು ಬೆಂಗಳೂರು ಡಿಸಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

SCROLL FOR NEXT