ಆರ್ ಅಶೋಕ್ 
ರಾಜ್ಯ

ಬಲವಂತದ ಮತಾಂತರ ಬಿಜೆಪಿ ಸರ್ಕಾರದಿಂದ ಬಯಲು: ಆರ್ ಅಶೋಕ್

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಿದ್ದರಿಂದಲೇ ಬಲವಂತದ ಮತಾಂತರ ಪ್ರಕರಣಗಳು ಬಯಲಿಗೆ ಬರುತ್ತಿವೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಿದ್ದರಿಂದಲೇ ಬಲವಂತದ ಮತಾಂತರ ಪ್ರಕರಣಗಳು ಬಯಲಿಗೆ ಬರುತ್ತಿವೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಮಾತನಾಡಿದ ಅಶೋಕ್, ಮತಾಂತರ ವಿಚಾರದ ಬಗ್ಗೆ ಈಗಾಗಲೇ ಬಿಸಿ ಬಿಸಿ ಚರ್ಚೆ ಆಗುತ್ತಿದೆ.ಮತಾಂತರಿಗಳೆಲ್ಲ ದೇಶ ದ್ರೋಹಿಗಳು.ನೆಲದ ಸಂಸ್ಕೃತಿ ಹಾಳು‌ಮಾಡಲು ಮತಾಂತರ ಮಾಡುತ್ತಿದ್ದಾರೆ.ಯಾವುದೋ ದೇಶದ ದುಡ್ಡಿನ್ನು ತಂದು ಹೀಗೆ ಮಾಡುತ್ತಿದ್ದಾರೆ.

ಮತಾಂತರ ವಿಚಾರವಾಗಿ ಈಗಾಗಲೇ ಬಿಸಿ ಬಿಸಿ ಚರ್ಚೆ ಆಗ್ತಿದೆ, ಅವರೆಲ್ಲ ದೇಶ ದ್ರೋಹಿಗಳು ಈ ನೆಲದ ಸಂಸ್ಕೃತಿ ಹಾಳು‌ಮಾಡಲು ಮತಾಂತರ ಮಾಡುತ್ತಿದ್ದಾರೆ. ನೆಲದ ಸಂಸ್ಕೃತಿ ನಾಶ ಮಾಡಲು ಮತಾಂತರ ಮಾಡುತ್ತಿದ್ದಾರೆ. ಮತಾಂತರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮತಾಂತರ ‌ನಿಷೇಧ ಕಾಯ್ದೆ ತರಬೇಕು. ಯಾವುದೋ ದೇಶದ ಹಣದಿಂದಾಗಿ ಹೀಗೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ಸಿಎಂ ಹಾಗೂ ಇಲಾಖೆ ಜೊತೆಗೆ ಮಾತನಾಡುತ್ತೇನೆ. ಒಂದು ಸೂಕ್ತ ಕಾಯ್ದೆ ತರಬೇಕು ಎಂದ ಅವರು ನಮ್ಮ ಬಿಜೆಪಿ ಸರ್ಕಾರ ಇರೋದಕ್ಕೆ ಇದೆಲ್ಲ ಆಚೆ ಬರುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಕೋವಿಡ್ ಪರಿಹಾರ ವಿಚಾರವಾಗಿ ಮಾತನಾಡಿ, ಕೋವಿಡ್ ನಲ್ಲಿ ಮೃತಪಟ್ಟರುವ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 1 ಲಕ್ಷ ರೂಪಾಯಿ ಪರಿಹಾರ ಕೊಡುತ್ತೇವೆ. ಬಿಪಿಎಲ್ ಇರುವವರಿಗೆ ಕೇಂದ್ರ ಸರ್ಕಾರದಿಂದ 50 ಸಾವಿರ ಹಾಗೂ ಜನರಲ್ ಕೆಟಗಿರಿ 50 ಸಾವಿರ ಹಣ ಬರುತ್ತದೆ.ಇದರಿಂದಾಗಿ ಬಿಪಿಎಲ್ ಕಾರ್ಡ್ ಇರುವವರಿಗೆ 1.50ಲಕ್ಷ ಹಣ ಬರುತ್ತದೆ ಎಂದು ತಿಳಿಸಿದರು.

ಕೋವಿಡ್ ಪಾಸಿಟಿವ್ ವರದಿಯ ರೋಗಿಯ ಪಿ ನಂಬರ್ ಬೇಕು. ಮೃತ ವ್ಯಕ್ತಿಯ ಮರಣ ಪತ್ರ, ಆಧಾರ್ ಪ್ರತಿ ,ಮೃತ ವ್ಯಕ್ತಿಯ ಬಿಪಿಎಲ್ ಗುರುತಿನ ಚೀಟಿ, ಅರ್ಜಿದಾರ ಬ್ಯಾಂಕ್ ಅಕೌಂಟ್ ಕೊಡಬೇಕು ಹಾಗೂ ಅರ್ಜಿದಾರರ ಸ್ವಯಂ ಘೋಷಣಾ ಫಾರಂ 2 ಬೇಕು. ಕುಟುಂಬದ ಉಳಿದವರಿಗೆ ಕೊಡಬೇಕು ಅಂದ್ರೆ ಫಾರಂ 3 ಅರ್ಜಿ ಕೊಡಬೇಕು. ಹಾಗೂ ಅದನ್ನು ಅವರು ಜಿಲ್ಲಾಧಿಕಾರಿ, ತಹಶಿಲ್ದಾರರ್ ಗೆ ಅರ್ಜಿ ಸಲ್ಲಿಸಬಹುದು. ಕೇಂದ್ರದ ಸರ್ಕಾರದ ಹಣ ಆರ್ ಟಿಜಿಎಸ್ ಮೂಲಕ ಅಕೌಂಟ್ ಗೆ ಹೋಗುತ್ತದೆ. ಇದಕ್ಕೆ ಕಮಿಟಿ ರಚನೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳು, ವೈದ್ಯಾ‌ದಿಕಾರಿ, ಸದಸ್ಯ ಕಾರ್ಯದರ್ಶಿ ಇರ್ತಾರೆ.ವಲಯ ಜಂಟಿ ಆಯುಕ್ತರು ಬೆಂಗಳೂರು ಪಾಲಿಕೆಯಲ್ಲಿ ಇರ್ತಾರೆ ಹಾಗೂ ಆರೋಗ್ಯ ಇಲಾಖೆಯಿಂದ ಪರಿಶೀಲಿಸಿ ಮಾಡುತ್ತಾರೆ ಎಂದು ತಿಳಿಸಿದರು.

ಕೋವಿಡ್ ಸತ್ತವರ ಸಂಖ್ಯೆ ಗೊಂದಲದ ಬಗ್ಗೆ ಡಿಕೆಶಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅದು ಅವರ ಆರೋಪ ಅಷ್ಟೇ, ಯಾರೆಲ್ಲ ಸತ್ತಿದ್ದಾರೆ ಅವರ ಮಾಹಿತಿ ಇದೆ, ಅದಕ್ಕೆ ಡಾಕ್ಟರ್ ಸರ್ಟಿಫಿಕೇಟ್ ಇರುತ್ತೆ. ತಹಶೀಲ್ದಾರ್ ಹಾಗೂ ರೆವಿನ್ಯೂ ಕಡೆಯಿಂದ ಸತ್ತವರ ಬಗ್ಗೆ ರಿಪೋರ್ಟ್ ಇರುತ್ತದೆ. ಬೋಗಸ್ ಆಗಲು ಅವಕಾಶ ಇರಲ್ಲ ಅಷ್ಟೇ ಅಲ್ಲದೆ, ಆಸ್ಪತ್ರೆಯಿಂದ ಪಿ ನಂಬರ್ ಇರುತ್ತೆ ಎಂದ ಅವರು ಕಾಂಗ್ರೆಸ್ ಗೆ ಆರೋಪ ಮಾಡುವ ಚಟ ಇದೆ ಎಂದು ತಿರುಗೇಟು ನೀಡಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT