ರಾಜ್ಯ

ಕೋಲಾರದಲ್ಲಿ ಮಂಗಗಳ ಮಾರಣ ಹೋಮ: ರಸ್ತೆ ಬದಿ ಬಿದ್ದಿದ್ದ ಚೀಲದಲ್ಲಿ 16 ಕೋತಿಗಳ ಮೃತದೇಹ ಪತ್ತೆ!

Manjula VN

ಕೋಲಾರ: ಹಾಸನ ಜಿಲ್ಲೆಯಲ್ಲಿ ಕೋತಿಗಳ ಮಾರಣಹೋಮ ಪ್ರಕರಣ ಮರೆಯುವ ಮುನ್ನವೇ ಕೋಲಾರದಲ್ಲಿ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಕೋಲಾರದ ಟಮಕ ಬಳಿ ಯಾರು ಕೀಡಿಗೇಡಿಗಳು 16 ಕೋತಿಗಳಿಗೆ ಆಹಾರದಲ್ಲಿ ವಿಷ ಉಣಿಸಿ ಕೊಲ್ಲುವ ಮೂಲಕ ವಿಕೃತಿಯನ್ನು ಮೆರದಿದ್ದಾರೆ. 

ರಸ್ತೆ ಬದಿ ಬಿದ್ದಿದ್ದ ಚೀಲದಲ್ಲಿ 16 ಕೋತಿಗಳ ಮೃತದೇಹ ಪತ್ತೆಯಾಗಿದೆ. ಯಾರೂ ಕೀಡಿಗೇಡಿಗಳು‌ ಕೋತಿಗಳನ್ನು ಸಾಯಿಸಿ ಚೀಲಗಳಲ್ಲಿ ಬಿಸಾಡಿದ್ದಾರೆಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಮೃತಪಟ್ಟಿರುವ ಕೋತಿಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. 

ಸತ್ತಿರುವ ಕೋತಿಗಳಲ್ಲಿ ನಾಲ್ಕು ಪುಟ್ಟ ಮರಿಗಳು ಸೇರಿದಂತೆ 16 ಕೋರಿಗಳು ಪಾಪಿಗಳ ಕೃತ್ಯಕ್ಕೆ ಪ್ರಾಣ ತೆತ್ತಿವೆ.

ಇತ್ತೀಚಿಗೆ ಇದೇ ರೀತಿಯ ಪ್ರಕರಣವೊಂದು ಹಾಸನ ಜಿಲ್ಲೆಯಲ್ಲಿ ನಡೆದಿತ್ತು. ಸುಮಾರು 40 ಕ್ಕೂ ಹೆಚ್ಚು ಕೋತಿಗಳು ಅಸುನೀಗಿದವು.ಈ ಪ್ರಕರಣ ಇನ್ನು ಜನರ ಮನಸ್ಸಿನಿಂದ ಮಾಸುವ ಮುನ್ನವೇ ಕೋಲಾರದಲ್ಲಿ ವೊಂದು ಇಂತಹವುದೇ ಪ್ರಕರಣ ನಡೆದಿರುವುದು ಬೇಸರ ತಂದಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೋಲಾರ ಜಿಲ್ಲಾ ಆಯುಕ್ತ ಡಾ.ಸೆಲ್ವಮಣಿಯವರು ಈ ಸಂಬಂಧ ವಿವರವಾದ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ, ಪೋಲೀಸರೊಂದಿಗೆ ಸಮನ್ವಯ ಸಾಧಿಸಿ ಆರೋಪಿಗಳನ್ನು ಶೀಘ್ರಗತಿಯಲ್ಲಿ ಬಂಧಿಸುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಘಟನೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ಮಂಗಗಳ ಕಾಟ ಎದುರಿಸುತ್ತಿರುವವರು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಕೂಡಲೇ ಅಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಳ್ಳಲಿದ್ದಾರೆಂದು ಹೇಳಿದರು. 

SCROLL FOR NEXT